ತೆಲುಗು ಸಿನಿಮಾ ಲವ್ಲಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶಾನ್ವಿ ಶ್ರೀವಾಸ್ತವ ಚಂದ್ರಲೇಖ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಶಾನ್ವಿ ನಟಿಸಿದ್ದ ಮಾಸ್ಟರ್ ಪೀಸ್ ಸಿನಿಮಾದಲ್ಲಿನ ಅಭಿನಯಕ್ಕಾಗಿ ಸೈಮಾ ಬೆಸ್ಟ್ ನಟಿ ಪ್ರಶಸ್ತಿ ಕೂಡ ಗಳಿಸಿದ್ದರು. ಉತ್ತರ ಭಾರತದವರಾದರೂ, ಕನ್ನಡ ಸಿನಿಮಾಗಳಲ್ಲಿ ನಟಿಸಿದ ಬಳಿಕ, ಕನ್ನಡದಲ್ಲೇ ಮಾತನಾಡುವುದನ್ನು ಕಲಿತಿರುವ ಶಾನ್ವಿ, ಈಗಂತೂ ಕನ್ನಡದ ಕಾರ್ಯಕ್ರಮಗಳಲ್ಲೂ, ಕನ್ನಡ ಇಂಟರ್ವ್ಯೂಗಳಲ್ಲೂ ಸ್ಪಷ್ಟವಾಗಿ ಕನ್ನಡ ಮಾತನಾಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.
ಇದೀಗ ನಟಿ ತಮ್ಮ ಸೌಂದರ್ಯದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ನೋಡಲು ತುಂಬಾನೆ ಮುದ್ದಾಗಿರುವ ಹಾಗೂ, ಸುಂದರವಾದ ತ್ವಚೆಯ ಬೆಡಗಿ ಶಾನ್ವಿ ಅಷ್ಟೊಂದು ಸುಂದರವಾಗಿರೋದಕ್ಕೆ ಕಾರಣ ಏನು? ಸ್ಕಿನ್ ಕೇರ್ ರುಟೀನ್ ಏನು ಎಂದು ಹೆಚ್ಚಿನ ಜನರು ಕೇಳುತ್ತಲೇ ಇರುತ್ತಾರಂತೆ. ಅದಕ್ಕಾಗಿ ಸಾನ್ವಿ ತಮ್ಮ ಸೌಂದರ್ಯದ ರಹಸ್ಯವನ್ನು ತಿಳಿಸುವ ವಿಡೀಯೋ ಶೇರ್ ಮಾಡಿದ್ದಾರೆ. ವಿಡೀಯೋದಲ್ಲಿ ಶಾನ್ವಿ ತಾವು ಪ್ರತಿದಿನ ಬೆಳಗ್ಗೆ ಒಂದು ಸಣ್ಣ ತುಂಡು ಸೇಬು, ಸಣ್ಣ ಬೀಟ್ ರೂಟ್ ಹಾಗೂ ಸಣ್ಣ ಕ್ಯಾರೆಟ್, ಪಾಲಕ್ ಸೊಪ್ಪು ಸಹ ಸೇರಿಸಿ ಜೊತೆಗೆ ಸಣ್ಣ ತುಂಡು ಶುಂಠಿ ಸೇರಿಸಿ, ಅದನ್ನ ಮಿಕ್ಸಿಗೆ ಹಾಕಿ ಜ್ಯೂಸ್ ಮಾಡಿ ಕುಡಿಯುತ್ತಾರಂತೆ. ಅದರ ವೇಸ್ಟ್ ಬಿಸಾಕೋದಿಲ್ಲವಂತೆ ನಟಿ, ಅದನ್ನು ಕೂಡ ಜೊತೆಯಾಗಿ ಕುಡಿಯುತ್ತಾರಂತೆ, ಅದುವೇ ನನ್ನ ಸ್ಕಿನ್ ಕೇರ್ ಸೀಕ್ರೆಟ್ ಎಂದಿದ್ದಾರೆ ನಟಿ.
ನೀವೂ ಕೂಡ ಶಾನ್ವಿಯಂತೆ ಹಾಲ್ಗೆನ್ನೆಯಂತ ಸ್ಕಿನ್ ಪಡೆಯಬೇಕು ಅಂದ್ರೆ ಅವರು ಫಾಲೋ ಮಾಡುವ ಟಿಪ್ಸ್ ಅನ್ನ ಫಾಲೋ ಮಾಡಿ. ನಿಮ್ಮ ತ್ವಜೆಯೂ ಹೊಳೆಯುವುದಕ್ಕೆ ಶುರುವಾಗುತ್ತದೆ.