Left Ad
shanubhogara magalu film review: ಸಿನಿಮಾ ರೂಪದಲ್ಲಿ ಲೇಖಕಿ ಭಾಗ್ಯ ಕೃಷ್ಣಮೂರ್ತಿ ಅವರ ಸುಪ್ರಸಿದ್ಧ ‘ಶಾನುಭೋಗರ ಮಗಳು’ ಕಾದಂಬರಿ - Chittara news
# Tags

shanubhogara magalu film review: ಸಿನಿಮಾ ರೂಪದಲ್ಲಿ ಲೇಖಕಿ ಭಾಗ್ಯ ಕೃಷ್ಣಮೂರ್ತಿ ಅವರ ಸುಪ್ರಸಿದ್ಧ ‘ಶಾನುಭೋಗರ ಮಗಳು’ ಕಾದಂಬರಿ

 

ಕನ್ನಡದಲ್ಲಿ ಸಾಕಷ್ಟು ಕಾದಂಬರಿ ಆಧಾರಿತ ಚಿತ್ರಗಳು ಇತಿಹಾಸ ಸೃಷ್ಟಿಸಿದ್ದು ಗೊತ್ತೇ ಇದೆ. ಕಾದಂಬರಿಯ ಆಶಯಕ್ಕೆ ಚ್ಯುತಿ ಬರಂದ0ತೆ ಸಿನಿಮಾ ರೋಪಕಗಕೆ ಒಗಿಸುವುದು ನಿಜಕ್ಕೂ ಸವಾಲಿನ ಕೆಲಸ. ಈ ಹಿಂದೆ ಸಾಕಷ್ಟು ಕೃತಿಗಳನ್ನು ಸಿನಿಮಾವನ್ನಾಗಿಸಿ ಗೆದ್ದಿರುವ ಅನುಭವೀ ನಿರ್ದೇಶಕ ಕೂಡ್ಲು ರಾಮಕೃಷ್ಣ, ಲೇಖಕಿ ಭಾಗ್ಯ ಕೃಷ್ಣಮೂರ್ತಿ ಅವರ ‘ಶಾನುಭೋಗರ ಮಗಳು’ ಕಾದಂಬರಿ ಆಧಾರಿತ ಚಿತ್ರ ತೆರೆಕೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

 

ಲೇಖಕಿ ಭಾಗ್ಯ ಕೃಷ್ಣಮೂರ್ತಿ ಅವರ ‘ಶಾನುಭೋಗರ ಮಗಳು’, ಟಿಪ್ಪು ಸುಲ್ತಾನನ ಕಾಲದಲ್ಲಿ, ಬ್ರಿಟಿಷರ ಆಳ್ವಿಕೆಯಲ್ಲಿ, ಮೈಸೂರು ಪ್ರಾಂತ್ಯದಲ್ಲಿ ನಡೆದಂತೆ ಹೆಣೆದ ಕಾಲ್ಪನಿಕ ಕಥೆ ಹೊಂದಿದೆ. ಭಾರತೀಯರ ಮೇಲೆ ಬ್ರಿಟಿಷರು ನಡೆಸಿದ ದೌರ್ಜನ್ಯ, ಧರ್ಮದ ಬಗ್ಗೆ ತೋರಿಸಿದ್ದ ಅನಾದರ, ಮೆರೆದ ಕ್ರೌರ್ಯ, ಅದರಲ್ಲೂ ತಮ್ಮ ಕಾರ್ಯಸಾಧನೆಗಾಗಿ ಹೆಣ್ಣು ಮಕ್ಕಳನ್ನು ಸೆರೆಹಿಡಿದು ನಡೆಸಿದ ಅತ್ಯಾಚಾರದ ವಿವರಗಳು ಈ ಕಥೆಯಲ್ಲಿದ್ದು, ವೀರಾವೇಶ ಹೊಂದುವ0ತಿದೆ. ಸಾಮಾನ್ಯ ಜನರೂ ದೇಶಭಕ್ತಿಯಿಂದ ಬ್ರಿಟಿಷರ ಆಡಳಿತದ ವಿರುದ್ಧ ಬಂಡೆದ್ದು ಪ್ರತಿರೋಧ ತೋರಿದ ರೀತಿಯನ್ನು ಈ ಕಥೆಯಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ‘ಶಾನುಭೋಗರ ಮಗಳು’ ಹೆಸರು ನೋಡಿದಾಗ ಸಾಂಸಾರಿಕ ಕಥೆ ಅನ್ನಿಸುತ್ತದೆ, ಆದರೆ ಸಿನಿಮಾ ಅಂದಿನ ರಾಜಕೀಯ, ಸಾಮಾಜಿಕ ಹಾಗೂ ವೈಯಕ್ತಿಕ ಜೀವನದ ಸಂಕೀರ್ಣ ಅಭಿವ್ಯಕ್ತಿ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ.

ಕಾದಂಬರಿಗಾರ್ತಿ, ಪತ್ರಕರ್ತೆ ಭಾಗ್ಯ ಕೃಷ್ಣಮೂರ್ತಿ ಅವರು ಸಂವೇದನೆಯುಳ್ಳ ಬರಹಗಾರ್ತಿಯಾಗಿದ್ದು, ನಿರ್ಮಾಲ್ಯ, ಗ್ರೀಷ್ಠರಾಗ, ಶಿಶಿರದ ಹೂವು, ಕಡಲು, ದಹನ, ಮಾಂಡವಿ, ಅಭಿನೇತ್ರಿಯ ಅಂತರAಗ, ಇರುವುದೆಲ್ಲವ ಬಿಟ್ಟು, ಮನಸುಗಳ ಮೃದಂಗ, ಒಂದು ಮಗುವಿನ ಪ್ರಕರಣ, ಶಾನುಭೋಗರ ಮಗಳು ಇತ್ಯಾದಿ 23 ಕಾದಂಬರಿಗಳನ್ನು ರಚಿಸಿದ್ದು, `ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ’ಗಳಿಗೆ ಇವರು ಭಾಜನರಾಗಿದ್ದಾರೆ. ಈಗ ಇವರ ‘ಶಾನುಭೋಗರ ಮಗಳು’ ಕಾದಂಬರಿ ಸಿನಿಮಾವಾಗಿ ತೆರೆಕಂಡು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ.

ಚಿತ್ರದ ಕಥೆ ಬಗ್ಗೆ ಹೇಳುವುದಾದರೆ… ಶರಾವತಿ (ರಾಗಣಿ ಪ್ರಜ್ವಲ್) ಶಾನುಭೋಗರ ಮಗಳಾಗಿ, ಗೋಪಿಯ (ನಿರಂಜನ್ ಶೆಟ್ಟಿ) ಮನೆದನ್ನೆಯಾಗಿ, ಅತ್ತೆಯ-ಅಮ್ಮನ ನೆಚ್ಚಿನ ಮಗಳಾಗಿ ನೆಮ್ಮದಿಯ ಜೀವನ ನಡೆಸುತ್ತಿರುತ್ತಾಳೆ. ಶರಾವತಿಯ ಮೈದುನ ಹಾಗೂ ಸಹೋದರ ಬ್ರಿಟಿಷರ ವಿರುದ್ಧ ರಹಸ್ಯವಾಗಿ ಸಮರ ಸಾರಿರುತ್ತಾರೆ. ಇವರಿಗೆ ಬೆಂಬಲವಾಗಿ ಶರಾವತಿ ನಿಂತಿರುತ್ತಾಳೆ. ಆದರೆ, ಕೊನೆಯ ಘಳಿಗೆಯಲ್ಲಿ ಬ್ರಿಟಿಷರ ಬಂದೂಕಿನ ನಳಿಕೆಗೆ ಸಹೋದರ ಹಾಗೂ ಮೈದುನ ಹತರಾಗುತ್ತಾರೆ ಈ ಸೇಡಿಗಾಗಿ ಆಕೆ ಆಂಗ್ಲರ ವಿರುದ್ಧ ಹೇಗೆ ಸಿಡಿದೇಳುತ್ತಾಳೆ ಎಂಬುದು ಕಥೆ. ಆರಂಭದಿ0ದ ಕ್ರೈಮ್ಯಾಕ್ಸ್ವರೆಗೆ ಚಿತ್ರ ಕುತೂಹಲಕಾರಿಯಾಗಿ ಸಾಗುತ್ತದೆ.  ಮೊದಲರ್ಧ ಕುಟುಂಬ, ಸಂಬ0ಧಗಳು ಎಂದು ಸಾಗಿದರೆ ದ್ವಿತೀಯಾರ್ಧದಲ್ಲಿ ಬ್ರಿಟಿಷರ ವಿರುದ್ಧ ಕಾಳಗ ಶುರುವಾಗುತ್ತದೆ. ಕೂಡ್ಲು ರಾಮಕೃಷ್ಣ ಅವರು ಭಾಗ್ಯ ಕೃಷ್ಣಮೂರ್ತಿ ಅವರ ವಿರಳ ಕಥೆಯನ್ನು ಸರಳವಾಗಿ ತೆರೆಯ ಮೇಲೆ ತಂದಿದ್ದಾರೆ. ಕಾಲ್ಪನಿಕ ಪಾತ್ರಗಳನ್ನು ಪ್ರಬುದ್ಧ ಕಲಾವಿದರ ಮೂಲಕ ಜೀವ ತುಂಬಿರುವ ಕೊಡ್ಲು ಅವರು ಮೇಕಿಂಗ್‌ನಲ್ಲೂ ಒಂದಷ್ಟು ಶ್ರೀಮಂತಿಕೆಯನ್ನು ತೋರಿಸಿದ್ದರೆ ಚಿತ್ರ ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತು.

 

ಶಾನುಭೋಗರ ಮಗಳಾಗಿ ರಾಗಿಣಿ ಪ್ರಜ್ವಲ್ ಪರಕಾಯ ಪ್ರವೇಶ ಮಾಡಿದ್ದಾರೆ.  ಸಿನಿಮಾದ ಅಸಲಿ ಅಚ್ಚರಿ ನಟ ಕಿಶೋರ್ ಟಿಪ್ಪು ಸುಲ್ತಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಕಿಶೋರ್ ತೆರೆ ಮೇಲೆ ಎಂಟ್ರಿಕೊಟ್ಟಿದ್ದೇ ಸಿನಿಮಾದ ಕಥೆ ಬಗ್ಗೆ ಕುತೂಹಲ ಹೆಚ್ಚಾಗುತ್ತದೆ. ಇನ್ನು, ನಟ ನಿರಂಜನ್ ಪರಿಪಕ್ವ ನಟನೆಯನ್ನು ನೀಡಿದ್ದಾರೆ. ಸ್ವಾತಂತ್ರ‍್ಯಪೂರ್ವದ ಕಥೆಗೆ ಜೈ ಆನಂದ್ ಛಾಯಾಗ್ರಹಣ ಅಚ್ಚುಕಟ್ಟಾಗಿ ಮೂಡಿಬಂದಿದೆ. ರಮೇಶ್ ಕಷ್ಣ ಸಂಗೀತ ಉತ್ತಮವಾಗಿದೆ. ಕನ್ನಡದಲ್ಲಿ ಐತಿಹಾಸಿಕ ಹಾಗೂ ಸ್ವಾತಂತ್ರ‍್ಯಪೂರ್ವ ಕಥೆಗಳು ವಿರಳವಾಗುತ್ತಿರುವ ಸಮಯದಲ್ಲಿ `ಶಾನುಭೋಗರ ಮಗಳು’ ಒಂದು ವಿಶೇಷ ಪ್ರಯತ್ನ. ಮೂಲ ಕಥೆಯಲ್ಲಿ ಟಿಪ್ಪು ಸುಲ್ತಾನ್ ಎಂದೇ ಇದ್ದರೂ, ಸಿನಿಮಾದಲ್ಲಿ ಎಲ್ಲೂ ಟಿಪ್ಪು ಸುಲ್ತಾನ್ ಎಂಬ ಹೆಸರನ್ನು ಬಳಸದೇ ಕಾಂಟ್ರವರ್ಸಿಯಿAದ ದೂರ ಉಳಿಯುವಲ್ಲಿ ಗೆದ್ದಿದ್ದಾರೆ. ಒಟ್ಟಿನಲ್ಲಿ, ಬಹುಕಾಲದ ನಂತರ ಒಂದು ಅಚ್ಚುಕಟ್ಟಿನ ಕಾದಂಬರಿ ಆಧಾರಿತ ಚಿತ್ರ ತೆರೆಕಂಡಿದ್ದು ಕನ್ನಡಿಗರ ಪ್ರೋತ್ಸಾಹ ಬೇಕಿದೆ.

 

Spread the love
Translate »
Right Ad