Left Ad
ಶಂಕರ್ ಕೋನಮಾನಹಳ್ಳಿ ; ಸಾಮಾನ್ಯ ಲೈಟ್‌ಬಾಯ್ ಈಗ ಬಹುಬೇಡಿಕೆಯ ನಿರ್ದೇಶಕ - Chittara news
# Tags

ಶಂಕರ್ ಕೋನಮಾನಹಳ್ಳಿ ; ಸಾಮಾನ್ಯ ಲೈಟ್‌ಬಾಯ್ ಈಗ ಬಹುಬೇಡಿಕೆಯ ನಿರ್ದೇಶಕ

ಶಂಕರ್ ಕೋನಮಾನಹಳ್ಳಿ ಮೂಲತ ಕನಕಪುರ ತಾಲೂಕಿನ ಕೋನಮಾನಹಳ್ಳಿಯ ಚಿಕ್ಕ ಗ್ರಾಮದವರು. ಸಿನಿಮಾ ಬಗ್ಗೆ ಚಿಕ್ಕ ವಯಸ್ಸಿನಿಂದ ತುಂಬಾ ಆಸಕ್ತಿ ಇದ್ದ ಇವರು ಓದು ಮುಗಿದ ನಂತರ ಬೆಂಗಳೂರಿಗೆ ಬಂದು ಲೈಟ್ ಬಾಯ್ ಆಗಿ ಕೆಲಸಕ್ಕೆ ಸೇರುತ್ತಾರೆ. ಲೈಟ್ ಬಾಯ್ ಆಗಿ ಆರು ತಿಂಗಳ ಕೆಲಸ ಮಾಡಿದ ನಂತರ ಗುಪ್ತಗಾಮಿ ಧಾರಾವಾಹಿ ಸಹಾಯಕ ನಿರ್ದೇಶಕರಾಗಿ ಆರೂರು ಜಗದೀಶ್ ಅವರ ಬಳಿ ಕೆಲಸ ಮಾಡಿ ಅದೇ ದಾರವಾಹಿಯಲ್ಲಿ ಸಹ ನಿರ್ದೇಶಕರು ಆಗುತ್ತಾರೇ ಮೂರು ವರ್ಷಗಳ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಶಂಕರ್ ಕೋನಮಾನಹಳ್ಳಿ, ಗಾಳಿಪಟ ಧಾರಾವಾಹಿಗೆ ನಿರ್ದೇಶಕರಾಗಿ ಆಯ್ಕೆಯಾಗುತ್ತಾರೆ.

ಇದನ್ನೂ ಓದಿ:  Sapta Sagaradaache Ello – `Side A’ Review : `ಅಳು’ವ ಕಡಲೊಳು `ಒಲವ’ ಹಾಯಿ ದೋಣಿ..!

ಸುಮಾರು ಐದು ಧಾರಾವಾಹಿಗಳ ನಿರ್ದೇಶನ ಮಾಡಿ ಸೈನಿಸಿಕೊಳ್ಳುತ್ತಾರೆ .ಲಾಕ್ಡೌನ್ ನಲ್ಲಿ ದಾರವಾಹಿಗಳನ್ನು ನಿಲ್ಲಿಸಿದಾಗ ಶಂಬೋ ಶಿವ ಶಂಕರ ಮೂವಿಯನ್ನು ಮಾಡುತ್ತಾರೆ ಶಂಭು ಶಿವಶಂಕರ ಮೂವಿಯು ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತದೆ. ಮೊದಲ ಸಿನಿಮಾದಲ್ಲಿ ಸುಪ್ರೀಂ ಹೀರೋ ಶಶಿಕುಮಾರ್. ಸೋನಾಲ್ ಮೆಂಟೂರು ಅಂತ ಕಲಾವಿದರನ್ನು ಹಾಕಿಕೊಂಡು ಸೈ ಅನಿಸಿಕೊಳ್ಳುತ್ತಾರೆ.

ಇದನ್ನೂ ಓದಿಆರ್‌ಎಕ್ಸ್‌ 100 ನಿರ್ದೇಶಕ ಅಜಯ್ ಭೂಪತಿ ಪ್ಯಾನ್ ಇಂಡಿಯಾ ಸಿನಿಮಾ ಮಂಗಳವಾರಂ ಎಂಟ್ರಿಗೆ ಮುಹೂರ್ತ ಫಿಕ್ಸ್…ನವೆಂಬರ್ 17ಕ್ಕೆ ಚಿತ್ರ ರಿಲೀಸ್

ಶಂಭೋ ಶಿವಶಂಕರ ಸಿನಿಮಾದ ಮೇಕಿಂಗ್ ಮತ್ತು ನಿರ್ದೇಶನದಲ್ಲಿ ನಿರ್ದೇಶಕರಿಗೆ ಒಳ್ಳೆಯ ಹೆಸರು ಬರುತ್ತದೆ ಶಂಕರ್ ಕೋನಮಾನಹಳ್ಳಿಯ ಎರಡನೇ ಸಿನಿಮಾ ಬಿಂಗೊ ಸಿನಿಮಾ ನಿರ್ದೇಶನ ಮಾಡುತ್ತಿದ್ದು ಆ ಚಿತ್ರದಲ್ಲಿ ರಾಗಿಣಿ ತ್ರಿವೇದಿ R k ಚಂದನ್ ನಟಿಸುತ್ತಿದ್ದಾರೆ ಆ ಸಿನಿಮಾವು 90% ಸಿನಿಮಾ ಮುಗಿದಿದ್ದು. ತಮ್ಮದೇ ಬ್ಯಾನರ್ ನಲ್ಲಿ ಒಂದು ಸಿನಿಮಾ ಮಾಡುತ್ತಿದ್ದಾರೆ ಆ ಸಿನಿಮಾ ಈಗಾಗಲೇ ಮುಗಿದಿದ್ದು ಸದ್ಯದಲ್ಲೇ ಚಿತ್ರದ ಟೈಟಲ್ ಅನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಅವರು ಮುಂದೆ ಸ್ಟಾರ್ ನಟರಿಗೆ ಚಿತ್ರ ಮಾಡಲು ಆಸೆ ಇರುವುದರಿಂದ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ .

Spread the love
Translate »
Right Ad