Sandalwood Leading OnlineMedia

ಟೈಟಲ್ ಪೋಸ್ಟರ್‌ನಿಂದಲೇ ಗಮನಸೆಳೆದ ರಂಗಾಯಣ ರಘು ನಟನೆಯ ‘ಶಾಖಾಹಾರಿ’ ಸಿನಿಮಾ.

‘ಕೀಳಂಬಿ ಮೀಡಿಯಾ ಲ್ಯಾಬ್’ ಮೂಲಕ ರಾಜೇಶ್ ಕೀಳಂಬಿ ಹಾಗೂ ರಂಜಿನಿ ಪ್ರಸನ್ನ ಜೊತೆಗೂಡಿ ಚೊಚ್ಚಲ ಬಾರಿಗೆ ನಿರ್ಮಿಸಿರುವ ‘ಶಾಖಾಹಾರಿ’ ಸಿನಿಮಾದ ಟೈಟಲ್ ನ್ನು ಯೋಗರಾಜ್ ಭಟ್ ಬಿಡುಗಡೆ ಮಾಡಿ ಶುಭಾಶಯ ಕೋರಿದ್ದಾರೆ. ಮಲೆನಾಡಿನ ತೀರ್ಥಹಳ್ಳಿಯ ಊರೊಂದರಲ್ಲಿ ನಡೆಯುವ ನಿಗೂಢ ಘಟನೆಯ ಸುತ್ತ ಸಾಗುವ ಕಥೆ ಇದಾಗಿದ್ದು, ಹೋಟೆಲ್ ಭಟ್ಟನಾಗಿ ರಂಗಾಯಣ ರಘು, ಎಸ್.ಐ ಆಗಿ ಗೋಪಾಲ್ ಕೃಷ್ಣ  ದೇಶಪಾಂಡೆ ಮತ್ತು ಸುಜಯ್ ಶಾಸ್ತ್ರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಹರಿಣಿ, ಪ್ರತಿಮಾ ನಾಯಕ್, ವಿನಯ್ ಯು.ಜೆ., ನಿಧಿ ಹೆಗ್ಡೆ, ಶ್ರೀಹರ್ಷ ಗೋಭಟ್ಟ ಮತ್ತಿತರು ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿಸಾದ್ವಿನಿ ಕೊಪ್ಪ ಸಂಗೀತದಲ್ಲಿ, ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ “ಜಲಪಾತ”ದಿಂದ ಹರಿದು ಬಂತು ಸುಂದರ ಪರಿಸರ ಗೀತೆ.

ಶಾಖಾಹಾರಿ’ ಸಿನಿಮಾದಲ್ಲಿ ರಂಗಾಯಣ ರಘು ಹಿಂದಿನ ಸಿನಿಮಾಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿರುವ, ಅಸೋಸಿಯೇಟ್ ಡೈರೆಕ್ಟರ್ ಆಗಿ, ಬರಹಗಾರರಾಗಿ ಅನುಭವವಿರುವ ಯುವ ಪ್ರತಿಭೆ ಸಂದೀಪ್ ಸುಂಕದ್ ಈ ಚಿತ್ರಕ್ಕೆ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ಇದನ್ನೂ ಓದಿ:  ಅಭಿ‌ದಾಸ್- ಶರಣ್ಯಾ ಶೆಟ್ಟಿ ಅಭಿನಯದ ’ನಗುವಿನ ಹೂಗಳ ಮೇಲೆ’ ಸಿನಿಮಾದ ಪ್ರೇಮಗೀತೆ ರಿಲೀಸ್

ವಿಶ್ವಜಿತ್ ರಾವ್ ರವರ ಛಾಯಾಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಮಯೂರ್ ಅಂಬೆಕಲ್ಲು ಸಂಗೀತ & ಆಶಿಕ್ ಕುಸುಗೊಳ್ಳಿರವರ ಗ್ರೇಡಿಂಗ್ ಈ ಚಿತ್ರಕ್ಕಿದೆ. ಸಂಪೂರ್ಣ ಮಲೆನಾಡಿನಲ್ಲೇ ಚಿತ್ರೀಕರಣವಾಗಿರೋ ಈ ಸಿನಿಮಾದಲ್ಲಿ ಅನೇಕ ಮಲೆನಾಡಿಗರು ಕೆಲಸ ಮಾಡಿರೋದು ಮತ್ತೊಂದು ವಿಶೇಷದ ಸಂಗತಿ. ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

 

Share this post:

Related Posts

To Subscribe to our News Letter.

Translate »