Sandalwood Leading OnlineMedia

ಶಾರುಖ್ ಖಾನ್ ನಯಾನಾತಾರ ರೋಮ್ಯಾನ್ಸ್ ಪ್ರಶ್ನಿಸಿದ ಪತಿ ವಿಘ್ನೇಶ್ ಶಿವನ್, ಬಾಲಿವುಡ್ ನಲ್ಲಿ ಕಾಲಿವುಡ್ ಕಲರವ ಏನಿದು ರೋಮ್ಯಾನ್ಸ್ ಕಹಾನಿ

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸದ್ಯ ಜವಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಜವಾನ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಶಾರುಖ್ ಖಾನ್ ಮತ್ತೆ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪಠಾಣ್ ಸೂಪರ್ ಸಕ್ಸಸ್ ಬಳಿಕ ಕಿಂಗ್ ಖಾನ್ ಮತ್ತೊಮ್ಮೆ ಆಕ್ಷನ್ ದೃಶ್ಯಗಳಲ್ಲಿ ಅಬ್ಬರಿಸಿದ್ದಾರೆ.

*ಟ್ರೇಲರ್ ಮೂಲಕ ಗಮನಸೆಳೆದ ಹೊಸಬರ ಆರ..ಜುಲೈ 28ರಂದು ಸಿನಿಮಾ ರಿಲೀಸ್*

ಇನ್ನೂ ಶಾರುಖ್‌ಗೆ ಜೋಡಿಯಾಗಿ ನಯನತಾರಾ ನಟಿಸಿದ್ದಾರೆ. ಜೊತೆಗೆ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್‌ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಶಾರುಖ್ ಟ್ರೈಲರ್ ಬಗ್ಗೆ ನಯನತಾರಾ ಪತಿ ವಿಘ್ನೇಶ್ ಶಿವನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಯಶ್ ನಟನೆ ನೋಡಿ ಕಲಿತುಕೊಂಡ ಶಾರುಖ್ ಖಾನ್? ಇದು ಜವಾನ್ ಚಿತ್ರಕ್ಕೆ ಮಾಡಿಕೊಂಡ ತಯಾರಿ  ಏನಿದು ಕಥೆ  ಫುಲ್ ಡೀಟೇಲ್ಸ್ ಓದಿ.!

ಜವಾನ್ ಪ್ರಿವ್ಯೂ ಬಗ್ಗೆ ವಿಘ್ನೇಶ್ ಶಿವನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಘ್ನೇಶ್ ಮಾತಿಗೆ ಶಾರುಖ್ ಪ್ರತಿಕ್ರಿಯೆ ನೀಡಿದ್ದಾರೆ. ‘ವಿಘ್ನೇಶ್ ಶಿವನ್, ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ನಯನತಾರಾ ಅದ್ಭುತ. ಆದರೆ ನಾನು ಇದನ್ನು ಯಾರಿಗೆ ಹೇಳುತ್ತಿದ್ದೇನೆ. ನಿಮಗೂ ಈಗಾಗಲೇ ತಿಳಿದಿದೆ ಪತ್ನಿ ಅಲ್ವಾ. ಆದರೆ ಹುಷಾರಾಗಿರಿ, ಅವರು ಈಗ ಕೆಲವು ಪ್ರಮುಖ ಕಿಕ್ಗಳನ್ನು ಮತ್ತು ಹೊಡೆತಗಳನ್ನು ಕಲಿತಿದ್ದಾರೆ’ ಎಂದು ಹೇಳಿದ್ದಾರೆ.

ಯಶ್ ನಟನೆ ನೋಡಿ ಕಲಿತುಕೊಂಡ ಶಾರುಖ್ ಖಾನ್? ಇದು ಜವಾನ್ ಚಿತ್ರಕ್ಕೆ ಮಾಡಿಕೊಂಡ ತಯಾರಿ  ಏನಿದು ಕಥೆ  ಫುಲ್ ಡೀಟೇಲ್ಸ್ ಓದಿ.!

ಶಾರುಖ್ ಮಾತಿಗೆ ವಿಘ್ನೇಶ್ ಶಿವನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಜೊತೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಯನತಾರಾ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ‘ಹೌದು ಸರ್ ತುಂಬಾ ಜಾಗರೂಕರಾಗಿರಿ. ಆದರೆ ಸಿನಿಮಾದಲ್ಲಿ ನಿಮ್ಮಿಬ್ಬರ ನಡುವೆ ಉತ್ತಮ ರೊಮ್ಯಾನ್ಸ್ ಇದೆ ಎಂದು ನಾನು ಕೇಳಿದ್ದೇನೆ. ಅವಳು ಅದನ್ನು ಪ್ರಣಯ ರಾಜನಿಂದ ಕಲಿತಿದ್ದಾಳೆ. ಆಕೆ ತನ್ನ ಕನಸಿನ ಸಂತೋಷದಿಂದ ನಿಮ್ಮೊಂದಿಗೆ ಪಾದಾರ್ಪಣೆ ಮಾಡುತ್ತಿದ್ದಾಳೆ. ದಿ ಕಿಂಗ್ ಆಫ್ ಹಾರ್ಟ್ಸ್, ಬಾದ್‌ಶಾಹ್ ಜವಾನ್ ಬ್ಲಾಕ್ ಬಸ್ಟರ್ ಆಗಲಿ’ ಎಂದು ಹೇಳಿದ್ದಾರೆ. ಶಾರುಖ್ ಖಾನ್ ಮತ್ತು ವಿಘ್ನೇಶ್ ಶಿವನ್ ಇಬ್ಬರ ಮಾತುಕತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆಇನ್ನೂ ಈ ಸಿನಿಮಾದಲ್ಲಿ ತಮಿಳು ಸ್ಟಾರ್ ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ತೆಲುಗು ಸಿನಿಮಾದಿಂದ ಅರ್ಧಕ್ಕೆ ಹೊರ ನಡೆದ ರಶ್ಮಿಕಾ ಮಂದಣ್ಣ

ನಟ ವಿಜಯ್ ಸೇತುಪತಿ ಅವರನ್ನು ಕಿಂಗ್ ಖಾನ್ ಹೊಗಳಿದ್ದಾರೆ. ಜೊತೆಗೆ ಅವರಿಂದ ತಮಿಳು ಕಲಿತಿರುವುದಾಗಿ ಹೇಳಿದ್ದಾರೆ. ಜವಾನ್ ಪ್ರಿವ್ಯೂ ರಿಲೀಸ್ ಬಳಿಕ ವಿಜಯ್ ಸೇತುಪತಿ ಮಾಡಿದ ಟ್ವೀಟ್‌ಗೆ ಶಾರುಖ್ ಖಾನ್ ಪ್ರತಿಕ್ರಿಯಿಸಿ, ವಿಜಯ್ ಸೇತುಪತಿ ಅವರೊಂದಿಗೆ ಕೆಲಸ ಮಾಡುವುದು ಗೌರವ ಎಂದಿದ್ದಾರೆ. ಜವಾನ್‌ನ ಸೆಟ್‌ಗಳಲ್ಲಿ ಸ್ವಲ್ಪ ತಮಿಳು ಕಲಿಸಿದ್ದಕ್ಕಾಗಿ ಮತ್ತು ಸೆಟ್‌ಗಳಲ್ಲಿ ರುಚಿಕರವಾದ ಆಹಾರವನ್ನು ತಂದಿದ್ದಕ್ಕಾಗಿ ಧನ್ಯವಾದ ಹೇಳಿದರು. ‘ಸರ್ ನಿಮ್ಮೊಂದಿಗೆ ಕೆಲಸ ಮಾಡಿದ್ದು ಗೌರವವಾಗಿದೆ. ಸೆಟ್‌ಗಳಲ್ಲಿ ನನಗೆ ಸ್ವಲ್ಪ ತಮಿಳು ಕಲಿಸಿದ್ದಕ್ಕಾಗಿ ಧನ್ಯವಾದಗಳು ಮತ್ತು ಪಡೆದ ರುಚಿಕರವಾದ ಆಹಾರ. ಲವ್ ಯು ನನ್ಬಾ’ ಎಂದು ಹೇಳಿದ್ದಾರೆ.

Share this post:

Translate »