ಅಟ್ಲಿ ನಿರ್ದೇಶನದ ‘ಜವಾನ್’ ಸಿನಿಮಾ ಸೆಪ್ಟೆಂಬರ್ 7ರಂದು ಬಿಡುಗಡೆ ಆಗಲಿದೆ. ಈಗಾಗಲೇ ಶಾರುಖ್ ಖಾನ್ ಅವರು ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ.ನಟ ಯಶ್ ಅವರು ಪ್ಯಾನ್ ಇಂಡಿಯಾ ಹೀರೋ ಆಗಿ ಬೆಳೆದಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಅವರ ಖ್ಯಾತಿ ಇನ್ನಷ್ಟು ಹೆಚ್ಚಿತು.
ಬಾಲಿವುಡ್ ಸ್ಟಾರ್ ಹೀರೋಗಳಿಗೂ ಯಶ್ ಸ್ಫೂರ್ತಿ! ಹೌದು, ಈ ಮಾತನ್ನು ಬರೀ ಅಭಿಮಾನಿಗಳು ಹೇಳುತ್ತಿರುವುದಲ್ಲ. ಸ್ವತಃ ಶಾರುಖ್ ಖಾನ್ ಅವರೇ ಈ ಮಾತನ್ನು ಹೇಳಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ. ‘ಜವಾನ್’ ಸಿನಿಮಾದಲ್ಲಿನ ಪಾತ್ರವನ್ನು ನಿಭಾಯಿಸಲು ಶಾರುಖ್ ಖಾನ್ ಅವರು ಯಶ್, ರಜನಿಕಾಂತ್ ಮುಂತಾದ ದಕ್ಷಿಣ ಭಾರತದ ನಟರ ಸಿನಿಮಾಗಳನ್ನು ನೋಡಿ ತಯಾರಿ ನಡೆಸಿದ್ದರು ಎಂಬುದು ಈಗ ಗೊತ್ತಾಗಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ..
ಅಟ್ಲಿ ನಿರ್ದೇಶನದಲ್ಲಿ ‘ಜವಾನ್’ ಸಿನಿಮಾ ಮೂಡಿಬರುತ್ತಿದೆ. ಸೆಪ್ಟೆಂಬರ್ 7ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಈಗಾಗಲೇ ಶಾರುಖ್ ಖಾನ್ ಅವರು ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಅವರು ಪ್ರಶ್ನೋತ್ತರ ನಡೆಸುತ್ತಿದ್ದಾರೆ. ಇತ್ತೀಚೆಗೆ ನಡೆದ ಪ್ರಶ್ನೋತ್ತರದ ವೇಳೆ ಅವರಿಗೆ ಅಭಿಮಾನಿಗಳು ತಯಾರಿ ಬಗ್ಗೆ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸುವಾಗ ಶಾರುಖ್ ಖಾನ್ ಅವರು ದಕ್ಷಿಣ ಭಾರತದ ಸ್ಟಾರ್ ನಟರ ಹೆಸರನ್ನು ಪ್ರಸ್ತಾಪಿಸಿದ್ದಾರೆ.
ಜವಾನ್ ಸಿನಿಮಾದಲ್ಲಿನ ನಿಮ್ಮ ಪಾತ್ರವನ್ನು ಉತ್ತಮವಾಗಿಸಲು ನೀವು ಬೇರೆ ಸಿನಿಮಾಗಳನ್ನು ನೋಡಿದ್ರಾ’ ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದ್ದಾರೆ. ‘ಅಟ್ಲಿ ನಿರ್ದೇಶಿಸಿದ ಹಲವು ಸಿನಿಮಾ ನೋಡಿದ್ದೇನೆ. ವಿಜಯ್ ಸರ್, ಅಲ್ಲು ಅರ್ಜುನ್, ರಜನಿ ಸರ್, ಯಶ್ ಹಾಗೂ ಇತರೆ ಸ್ಟಾರ್ ನಟರ ಸಿನಿಮಾಗಳನ್ನು ನೋಡಿ ಅರ್ಥ ಮಾಡಿಕೊಂಡು, ಹೊಸ ಜಗತ್ತನ್ನು ಕಟ್ಟಿಕೊಟ್ಟಿದ್ದೇವೆ. ನನ್ನ ಪಾತ್ರಕ್ಕೆ ತಯಾರಿ ನಡೆಸಲು ಕೂಡ ಈ ರೀತಿ ಮಾಡಿದ್ದೇನೆ’ ಎಂದು ಶಾರುಖ್ ಖಾನ್ ಉತ್ತರ ನೀಡಿದ್ದಾರೆ.
ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅವರು ‘ಜವಾನ್’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ‘ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಶಾರುಖ್ ಖಾನ್ ಮತ್ತು ನಿರ್ದೇಶಕ ಅಟ್ಲಿ ಅವರ ಕಾಂಬಿನೇಷನ್ ಬಗ್ಗೆ ಸಖತ್ ಹೈಪ್ ನಿರ್ಮಾಣ ಆಗಿದೆ. ನಯನತಾರಾ, ವಿಜಯ್ ಸೇತುಪತಿ, ರಿಧಿ ಡೋಗ್ರಾ, ದೀಪಿಕಾ ಪಡುಕೋಣೆ, ಸಾನ್ಯಾ ಮಲ್ಹೋತ್ರಾ ಮುಂತಾದ ಘಟಾನುಘಟಿಗಳು ‘ಜವಾನ್’ ಸಿನಿಮಾದಲ್ಲಿ ನಟಿಸಿದ್ದಾರೆ