ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಅದೇ ರೀತಿ ಅವರ ವಯಸ್ಸು ಕೂಡ ಹೆಚ್ಚುತ್ತಿದೆ. ಅವರು ಇತ್ತೀಚೆಗೆ ದುಬೈಗೆ ತೆರಳಿ ‘ಗ್ಲೋಬಲ್ ವಿಲೇಜ್’ನಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ವೇದಿಕೆ ಮೇಲೆ ಅವರು ಸಾಂಗ್ ಒಂದಕ್ಕೆ ಡ್ಯಾನ್ಸ್ ಮಾಡಿದ್ದಾರೆ. ಈ ಈವೆಂಟ್ನ ವಿಡಿಯೋ ವೈರಲ್ ಆಗಿದೆ. ಅವರು ‘ಯೂತ್ಫುಲ್ ಲುಕ್’ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದಾರೆ.
ಶಾರುಖ್ ಖಾನ್ ಅವರಿಗೆ ವಯಸ್ಸು ದಿನ ಕಳೆದಂತೆ ಹೆಚ್ಚುತ್ತಿದೆ. ಆದರೆ, ಅವರ ಲುಕ್ ಹೆಚ್ಚು ಗಮನ ಸೆಳೆಯುತ್ತದೆ. ಈ ಕಾರಣಕ್ಕೆ ಅವರು ಇಷ್ಟ ಆಗುತ್ತಾರೆ. ಈ ಬಗ್ಗೆ ಶಾರುಖ್ ಖಾನ್ ಅವರು ವೇದಿಕೆ ಮೇಲೆ ಈ ಬಗ್ಗೆ ಬರೆದಿದ್ದಾರೆ. ‘ನನಗೆ ಈ ವರ್ಷ 60ಕ್ಕೆ ಕಾಲಿಡುತ್ತಿದ್ದೇನೆ. ಆದರೆ, ನಾನು 30ರ ರೀತಿ ಕಾಣುತ್ತಿದ್ದೇನೆ. ಆದರೆ, ಕೆಲವು ವಿಚಾರಗಳನ್ನು ಮರೆಯುತ್ತೇನೆ’ ಎಂದಿದ್ದಾರೆ ಶಾರುಖ್ ಖಾನ್. ಈ ಮೂಲಕ ಮರೆವಿನ ಕಾಯಿಲೆ ಆರಂಭ ಆಗಿದೆ ಎಂದಿದ್ದಾರೆ.
ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಪಠಾಣ್’ ಚಿತ್ರದ ‘ಜೂಮೆ ಜೋ ಪಠಾಣ್’ ಸಾಂಗ್ಗೆ ಶಾರುಖ್ ಖಾನ್ ಡ್ಯಾನ್ಸ್ ಮಾಡಿದ್ದಾರೆ. ‘ಜವಾನ್’ ಚಿತ್ರದ ‘ಜಿಂದಾ ಬಂದಾ’ ಹಾಡಿಗೂ ಸುದೀಪ್ ಡ್ಯಾನ್ಸ್ ಮಾಡಿದರು. ಅವರು ಸಿಗ್ನೇಚರ್ ಪೋಸ್ ಕೂಡ ಮಾಡಿದ್ದರು.ಶಾರುಖ್ ಖಾನ್ ಅವರು ‘ಕಿಂಗ್’ ಹೆಸರಿನ ಸಿನಿಮಾ ಮಾಡಿದರು. ಈ ಚಿತ್ರದಲ್ಲಿ ಅವರ ಮಗಳು ಸುಹಾನಾ ಖಾನ್ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸಿದ್ದಾರ್ಥ್ ಆನಂದ್ ಅವರು ನಿರ್ದೇಶನ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ. ಈ ಮೊದಲು ಅವರು ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರವನ್ನು ಸಿದ್ದಾರ್ಥ್ ನಿರ್ದೇಶನ ಮಾಡಿದ್ದರು.