Sandalwood Leading OnlineMedia

ಯಶ್‌ ಬಗ್ಗೆ ಶಾರುಖ್‌ ಖಾನ್‌ ಹೇಳಿದ್ದೇನು..?

ಶಾರುಖ್ ಖಾನ್‌ಗೂ ದಕ್ಷಿಣ ಭಾರತದ ಹೀರೋಗಳಿಗೂ ಒಂದು ಬಿಡಲಾರದ ನಂಟಿದೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸದೇ ಹೋದರೂ ಇಲ್ಲಿನ ಸೂಪರ್‌ಸ್ಟಾರ್‌ಗಳಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಅಂತಹ ನಟರಲ್ಲಿ ಇತ್ತೀಚೆಗೆ ಸೇರ್ಪಡೆಯಾಗಿರುವುದು ರಾಕಿಂಗ್ ಸ್ಟಾರ್ ಯಶ್. ಇತ್ತೀಚೆಗೆ ಶಾರುಖ್ ದುಬೈನಲ್ಲಿ ನೀಡಿದ ಕಾರ್ಯಕ್ರಮದಲ್ಲಿ ಯಶ್ ಹೆಸರನ್ನು ಪ್ರಸ್ತಾಪಿಸಿ ಮಾತಾಡಿದ್ದಾರೆ.

ಇತ್ತೀಚೆಗೆ ಶಾರುಖ್ ಖಾನ್ ದುಬೈನ ಗ್ಲೋಬಲ್ ವಿಲೇಜ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಿಂಗ್ ಖಾನ್ ಅನ್ನು ನೋಡುವುದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಇದೇ ಇವೆಂಟ್‌ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಶಾರುಖ್ ಖಾನ್ ದಕ್ಷಿಣ ಭಾರತದ ಸ್ಟಾರ್ ನಟರ ಬಗ್ಗೆ ಪ್ರಸ್ತಾಪಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ನೆಟ್ಟಿಗರು ದುಬೈ ಸಮಾರಂಭದ ಆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇಲ್ಲಿಗೆ ದಕ್ಷಿಣ ಭಾರತದಿಂದ ಬಂದಿರುವವರು ಎಷ್ಟು ಮಂದಿ ಇದ್ದಾರೆ. ಕೇರಳದಿಂದ ಬಂದಿರುವವರು, ತೆಲಂಗಾಣದಿಂದ, ಕರ್ನಾಟಕದಿಂದ, ಆಂಧ್ರದಿಂದ, ತಮಿಳುನಾಡಿನಿಂದ ನನಗೆ ಸಿಕ್ಕಾಪಟ್ಟೆ ಜನರು ಸ್ನೇಹಿತರಿದ್ದಾರೆ. ಅಲ್ಲು ಅರ್ಜುನ್, ಪ್ರಭಾಸ್, ರಾಮ್ ಚರಣ್, ಯಶ್, ಮಹೇಶ್ ಬಾಬು, ದಳಪತಿ ವಿಜಯ್, ರಜನಿಕಾಂತ್, ಕಮಲ್ ಹಾಸನ್ ಎಲ್ಲರೂ ನನ್ನ ಸ್ನೇಹಿತರು. ಅವರಲ್ಲಿ ನನ್ನದೊಂದು ಮನವಿ ಇದೆ. ಅಷ್ಟು ವೇಗವಾಗಿ ಡ್ಯಾನ್ಸ್ ಮಾಡಬಾರದು. ನನಗೆ ಅವರೊಂದಿಗೆ ಪೈಪೋಟಿ ಮಾಡುವುದಕ್ಕೆ ಬಹಳ ಕಷ್ಟ ಆಗುತ್ತೆ” ಎಂದು ಮನವಿ ಮಾಡಿಕೊಳ್ಳುತ್ತೇನೆ.

Share this post:

Related Posts

To Subscribe to our News Letter.

Translate »