ಜಾಮ್ ನಗರ: ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮದ ವೇದಿಕೆಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಟಾಲಿವುಡ್ ಸ್ಟಾರ್ ರಾಮ್ ಚರಣ್ ತೇಜಗೆ ಇಡ್ಲಿ ವಡಾ ಎಂದು ಕರೆದಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.ಜಾಮ್ ನಗರದಲ್ಲಿ ನಡೆದಿದ್ದ ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಬಾಲಿವುಡ್, ಕ್ರೀಡಾ ಲೋಕ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರದ ದಿಗ್ಗಜರು ಭಾಗಿಯಾಗಿದ್ದರು. ಆದರೆ ಸೌತ್ ನಟರ ಪೈಕಿ ಆಹ್ವಾನಿತರಾಗಿ ಹೋಗಿದ್ದು ರಾಮ್ ಚರಣ್ ತೇಜ ಮಾತ್ರ. ಅವರು ಕಾರ್ಯಕ್ರಮದಲ್ಲಿ ಪತ್ನಿ ಉಪಾಸನಾ ಸಮೇತ ಭಾಗಿಯಾಗಿದ್ದರು.
ಇದನ್ನೂ ಓದಿ ’TPL’ಗೆ ತೆರೆ..ರಾಸು ವಾರಿಯರ್ ಚಾಂಪಿಯನ್..ಬಯೋಟಾಪ್ ಲೈಫ್ ಸೆವಿಯರ್ ರನ್ನರ್ ಅಪ್..
ವೇದಿಕೆಯಲ್ಲಿ ಬಾಲಿವುಡ್ ನ ತ್ರಿವಳಿ ಖಾನ್ ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ವೇದಿಕೆಯಲ್ಲಿ ನಾಟ್ಟು ನಾಟ್ಟು ಹಾಡಿಗೆ ನೃತ್ಯ ಮಾಡುತ್ತಿದ್ದರು. ಆದರೆ ಈ ಮೂವರೂ ಸ್ಟಾರ್ ಗಳ ನೃತ್ಯ ನೋಡಿದಾಗ ಸ್ವತಃ ನೀತು ಅಂಬಾನಿ ಈ ಸಿನಿಮಾದ ಒರಿಜಿನಲ್ ನಾಯಕ ರಾಮ್ ಚರಣ್ ರನ್ನು ವೇದಿಕೆಗೆ ಕರೆಯಲು ಸೂಚಿಸಿದರು.
ಅದರಂತೆ ಶಾರುಖ್ ಖಾನ್ ಮೈಕ್ ಹಿಡಿದು ರಾಮ್ ಚರಣ್ ರನ್ನು ಕರೆದರು. ಮೊದಲು ತಮಿಳಿನಲ್ಲಿ ಏನೋ ಹೇಳುವಂತೆ ಮಾಡಿ ಬಳಿಕ ಇಡ್ಲಿ ವಡಾ ರಾಮ್ ಚರಣ್ ಎಂದರು. ಇದು ರಾಮ್ ಚರಣ್ ಗೆ ಮಾಡಿದ ಅವಮಾನ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮ್ ಚರಣ್ ಪತ್ನಿ ಉಪಾಸನಾ ಮೇಕಪ್ ಆರ್ಟಿಸ್ಟ್ ಜೆಬಾ ಹುಸೇನ್ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ನಂತರ ನಾನು ಅಲ್ಲಿರಲು ಬಯಸಲಿಲ್ಲ. ಇದು ರಾಮ್ ಚರಣ್ ಗೆ ಮಾಡಿದ ಅವಮಾನ ಎಂದಿದ್ದಾರೆ. ಆಸ್ಕರ್ ಗೆದ್ದ ನಟನನ್ನು, ಸಾಕಷ್ಟು ಜನ ಅಭಿಮಾನಿಗಳನ್ನು ಹೊಂದಿರುವ ಸೌತ್ ನಟನಿಗೆ ಈ ರೀತಿ ಅವಮಾನ ಮಾಡಿದ್ದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.