ಶಾರುಖ್ ಖಾನ್ ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದು. ಅವರಿಗೆ ಸಣ್ಣ ಪುಟ್ಟ ತೊಂದರೆ ಎದುರಾದರೂ ಫ್ಯಾನ್ಸ್ ವಲಯದಲ್ಲಿ ಆತಂಕ ಸೃಷ್ಟಿ ಆಗುತ್ತದೆ. ಶಾರುಖ್ ಖಾನ್ಗೆ ಸನ್ಸ್ಟ್ರೋಕ್ ಆಗಿದೆ ಎಂದಾಗಲೂ ಎಲ್ಲರೂ ಗಾಬರಿ ಆಗಿದ್ದರು.
ಅವರು ಇತ್ತೀಚೆಗೆ ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ವೈದ್ಯರು ಚಿಕಿತ್ಸೆ ನೀಡಿದ್ದರು. ಕೆಲವು ವರದಿಗಳ ಪ್ರಕಾರ ಶಾರುಖ್ ಖಾನ್ ಅವರಿಗೆ ಸನ್ ಸ್ಟ್ರೋಕ್ ಆಗಿದೆ ಎಂದು ವರದಿ ಆಗಿತ್ತು. ಆದರೆ, ಅಸಲಿಗೆ ಅವರಿಗೆ ಸನ್ ಸ್ಟ್ರೋಕ್ ಆಗಿಯೇ ಇಲ್ಲವಂತೆ. ಶಾರುಖ್ ಖಾನ್ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಇದು ವೈರಲ್ ಫಿವರ್ ಅನ್ನೋದು ಬಳಿಕ ಗೊತ್ತಾಗಿದೆ. ಸದ್ಯ ಶಾರುಖ್ ಖಾನ್ ಅವರು ಚೇತರಿಕೆ ಕಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈಗಾಗಲೇ ಅವರು ಮುಂಬೈಗೆ ತೆರಳಿದ್ದಾರೆ ಎಂದು ವರದಿ ಆಗಿದೆ.
ಶಾರುಖ್ ಖಾನ್ ಅವರು ಐಪಿಎಲ್ನಲ್ಲಿ ಕೆಕೆಆರ್ ತಂಡದ ಸಹ ಮಾಲಿಕತ್ವ ಹೊಂದಿದ್ದಾರೆ. ಕೆಕೆಆರ್ ಈ ಬಾರಿ ಫೈನಲ್ ತಲುಪಿದೆ. ಶಾರುಖ್ ಖಾನ್ ಅವರು ಕುಟುಂಬದವರ ಜೊತೆ ಫೈನಲ್ ನೋಡಲು ಚೆನ್ನೈ ತೆರಳಲಿದ್ದಾರಂತೆ. ಅವರಿಗೆ ಅನಾರೋಗ್ಯ ಆಗಿದೆ ಎನ್ನುವ ವಿಚಾರ ಕೇಳಿ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದರು. ಈಗ ಅವರು ಆಸ್ಪತ್ರೆಯಿಂದ ಬಿಡುಗಡೆ ಆಗಿರೋ ವಿಚಾರ ಕೇಳಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.
ಶಾರುಖ್ ಖಾನ್ ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದು. ಅವರಿಗೆ ಸಣ್ಣ ಪುಟ್ಟ ತೊಂದರೆ ಎದುರಾದರೂ ಫ್ಯಾನ್ಸ್ ವಲಯದಲ್ಲಿ ಆತಂಕ ಸೃಷ್ಟಿ ಆಗುತ್ತದೆ. ಶಾರುಖ್ ಖಾನ್ಗೆ ಸನ್ಸ್ಟ್ರೋಕ್ ಆಗಿದೆ ಎಂದಾಗಲೂ ಎಲ್ಲರೂ ಗಾಬರಿ ಆಗಿದ್ದರು. ಆ ಬಳಿಕ ಅದು ವೈರಲ್ ಫಿವರ್ ಅನ್ನೋದು ಗೊತ್ತಾಗಿದೆ.
ವರದಿಗಳ ಪ್ರಕಾರ ಗುರುವಾರ (ಮೇ 23) ಸಂಜೆ ಶಾರುಖ್ ಖಾನ್ ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಅವರ ಕುಟುಂಬದವರು ಶಾರುಖ್ಗೆ ಸಾತ್ ನೀಡಿದ್ದಾರೆ. ಇತ್ತೀಚೆಗೆ ಶಾರುಖ್ ಆರೋಗ್ಯದ ಬಗ್ಗೆ ಜೂಹಿ ಚಾವ್ಲಾ ಅವರು ಮಾಹಿತಿ ನೀಡಿದ್ದರು. ‘ಶಾರುಖ್ ಖಾನ್ ಈಗ ಆರೋಗ್ಯವಾಗಿದ್ದಾರೆ. ಅವರು ಐಪಿಎಲ್ ಫಿನಾಲೆ ನೋಡೋಕೆ ತೆರಳಲಿದ್ದಾರೆ’ ಎಂದು ಹೇಳಿದ್ದರು.