Left Ad
ಅನಂತ್ ಅಂಬಾನಿ ಜೊತೆ ಜೈಶ್ರೀರಾಮ್ ಎಂದ ಶಾರುಖ್ ಖಾನ್ - Chittara news
# Tags

ಅನಂತ್ ಅಂಬಾನಿ ಜೊತೆ ಜೈಶ್ರೀರಾಮ್ ಎಂದ ಶಾರುಖ್ ಖಾನ್

ಜಾಮ್ ನಗರ: ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮದ ವೇದಿಕೆಯಲ್ಲಿ ನಟ ಶಾರುಖ್ ಖಾನ್ ಜೈಶ್ರೀರಾಮ್ ಘೋಷಣೆ ಕೂಗಿದ್ದು ಎಲ್ಲರ ಗಮನ ಸೆಳೆದಿದೆ.

ಗುಜರಾತ್ ನ ಜಾಮ್ ನಗರದಲ್ಲಿ ನಡೆದ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ದೇಶ-ವಿದೇಶದ ವಿವಿಧ ಕ್ಷೇತ್ರದ ಗಣ್ಯರು ಆಗಮಿಸಿದ್ದರು. ಇಡೀ ಬಾಲಿವುಡ್ ತಾರೆಯರ ದಂಡೇ ಜಾಮ್ ನಗರದಲ್ಲಿ ಬೀಡು ಬಿಟ್ಟಿತ್ತು. ಖ್ಯಾತನಾಮರಿಂದ ಮನರಂಜನಾ ಕಾರ್ಯಕ್ರಮಗಳೂ ನಡೆದಿತ್ತು.
ಸ್ವತಃ ಶಾರುಖ್ ಖಾನ್ ನಿರೂಪಕರಾಗಿ ಅಂಬಾನಿ ಕುಟುಂಬದವರನ್ನು ವೇದಿಕೆ ಮೇಲೆ ಕರೆದು ಮಾತನಾಡಿಸಿದ್ದಲ್ಲದೆ, ಡ್ಯಾನ್ಸ್ ಗೆ ಹೆಜ್ಜೆ ಹಾಕಿದರು. ಈ ವೇಳೆ ಮದುಮಗ ಅನಂತ್ ಅಂಬಾನಿಯನ್ನು ಮಾತನಾಡಿಸಿದ್ದರು. ಅನಂತ್ ಅಂಬಾನಿ ಮಾತಿನ ನಡುವೆ ತಮ್ಮ ಕುಟುಂಬದ ದೈವ ಭಕ್ತಿಯ ಬಗ್ಗೆ ಹೇಳಿಕೊಂಡರು. ಎಲ್ಲವೂ ಆ ಭಗವಾನ್ ಶ್ರೀರಾಮ ಕೃಪೆ ಎಂದರು. ಅನಂತ್ ಹೀಗೆ ಹೇಳುತ್ತಿದ್ದಂತೇ ಶಾರುಖ್ ಕೂಡಾ ‘ಜೈಶ್ರೀರಾಮ್’ ಎಂದು ಕೂಗಿದರು.

ಶಾರುಖ್ ಖಾನ್ ಜೈಶ್ರೀರಾಮ್ ಎಂದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೂಲತಃ ಮುಸ್ಲಿಮನಾಗಿದ್ದರೂ ಹಿಂದೂ ಧರ್ಮದ ದೇವರ ಬಗ್ಗೆ ಗೌರವ ಸೂಚಿಸಿದ್ದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಅಂತೂ ಅಂಬಾನಿ ಕುಟುಂಬ ಶಾರುಖ್ ಬಾಯಿಯಿಂದ ರಾಮ ನಾಮ ಹೇಳುವ ಹಾಗೆ ಮಾಡಿತು ಎಂದು ಕಾಲೆಳೆದಿದ್ದಾರೆ.
Spread the love
Translate »
Right Ad