Sandalwood Leading OnlineMedia

ಪಂಚ ಭಾಷೆಗಳಲ್ಲಿ `ಶಬರಿ’; ಮೇ. 3ರಂದು ತೆರೆಗೆ

ಕಥೆ ಆಯ್ಕೆ ವಿಚಾರದಲ್ಲಿ ವಿಭಿನ್ನ ಪ್ರಯತ್ನಗಳತ್ತ ಹೊರಳುವ ನಟಿಯರಲ್ಲಿ ವರಲಕ್ಷ್ಮೀ ಶರತ್‌ಕುಮಾರ್‌ ಸಹ ಒಬ್ಬರು. ಈಗ ಇದೇ ನಟಿ “ಶಬರಿ” ಹೆಸರಿನ ಸಿನಿಮಾ ಮೂಲಕ ಆಗಮಿಸಲು ಸಜ್ಜಾಗಿದ್ದಾರೆ. ನಾಯಕಿ ಪ್ರಧಾನ ಈ ಸಿನಿಮಾ ಒಂದೇ ಭಾಷೆಗೆ ಸೀಮಿತವಾಗಿರದೇ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಿದ್ದು, ಬಿಡುಗಡೆಗೂ ದಿನಾಂಕ ನಿಗದಿಯಾಗಿದೆ. ಮೇ 3ರಂದು ಈ ಸಿನಿಮಾ ಪಂಚ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಮಹಾ ಮೂವೀಸ್‌ ಬ್ಯಾನರ್‌ನಲ್ಲಿ ಮಹೇಂದ್ರ ನಾಥ್‌ ಕೊಂಡ್ಲಾ ಶಬರಿ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಮಹರ್ಷಿ ಕೊಂಡ್ಲಾ ಈ ಸಿನಿಮಾ ಪ್ರಸೆಂಟ್‌ ಮಾಡುತ್ತಿದ್ದಾರೆ. ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆ ಆಗಲಿರುವ ಈ ಚಿತ್ರವನ್ನು ಅನಿಲ್‌ ಕಾಟ್ಜ್ ನಿರ್ದೇಶನ ಮಾಡಿದ್ದಾರೆ. ವಿಶೇಷ ಏನೆಂದರೆ, ಇದು ಇವರ ಚೊಚ್ಚಲ ನಿರ್ದೇಶನದ ಸಿನಿಮಾ. ಈ ಸಿನಿಮಾ ಬಗ್ಗೆ ನಿರ್ಮಾಪಕ ಮಹೇಂದ್ರನಾಥ್‌ ಕೊಂಡ್ಲಾ ಹೇಳುವುದೇನೆಂದರೆ, “ಶಬರಿ ಸಿನಿಮಾದ ಕಥೆ ಮತ್ತು ಸ್ಕ್ರೀನ್‌ ಪ್ಲೇ ತುಂಬ ವಿಶೇಷವಾಗಿದೆ. ಭಾವುಕ ಎಳೆಯ ಜತೆಗೆ ಸೀಟಿನ ತುದಿಗೆ ತಂದು ಕೂರಿಸುವ ಥ್ರಿಲ್ಲರ್‌ ಶೈಲಿಯೂ ಈ ಸಿನಿಮಾದಲ್ಲಿರಲಿದೆ. ವರಲಕ್ಷ್ಮೀ ಅವರ ಈ ವರೆಗಿನ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಇದು ತುಂಬ ವಿಭಿನ್ನ. ಈ ಸಿನಿಮಾದಲ್ಲಿನ ಅವರ ನಟನೆಯೂ ಅಷ್ಟೇ ರೋಚಕವಾಗಿಯೇ ಮೂಡಿಬಂದಿದೆ” ಎನ್ನುತ್ತಾರೆ.

ಇನ್ನಷ್ಟು ಓದಿಗಾಗಿ:- ವಿ.ನಾಗೇಂದ್ರಪ್ರಸಾದ್ ವಿರಚಿತ `ಯುಗಗಳ ಆದಿ ಯುಗಾದಿ’ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್

ಮುಂದುವರಿದು ಮಾತನಾಡುವ ಅವರು, “ಈಗಾಗಲೇ ತೆಲುಗು ಮತ್ತು ತಮಿಳಿನ ಮೊದಲ ಕಾಪಿಯನ್ನು ನೋಡಿರುವುದರಿಂದ, ಎಲ್ಲರಿಗೂ ಇಷ್ಟವಾಗಲಿದೆ ಎಂದು ನಂಬಿದ್ದೇನೆ. ಈ ನಡುವೆ ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯ ಡಬ್ಬಿಂಗ್‌ ಕೆಲಸಗಳು ನಡೆಯುತ್ತಿದ್ದು, ಮೇ 3ರಂದು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್‌ ಮಾಡಲಿದ್ದೇವೆ” ಎಂದಿದ್ದಾರೆ. ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ? ವರಲಕ್ಷ್ಮೀ ಶರತ್‌ ಕುಮಾರ್‌, ಗಣೇಶ್‌ ವೆಂಕಟರಮಣನ್‌, ಶಶಾಂಕ್‌, ಮೈಮ್‌ ಗೋಪಿ, ಸುನಯನಾ, ರಾಜಶ್ರೀ ನಾಯರ್‌, ಮಧುನಂದನ್‌, ರಶಿಕಾ ಬಾಲಿ (ಬಾಂಬೆ), ವಿವಾ ರಾಘವ್‌, ಪ್ರಭು, ಭದ್ರಮ್‌, ಕೃಷ್ಣ ತೇಜ, ಬಿಂದು ಪಜಿದಿಮರ್ರಿ, ಅಸ್ರಿತಾ ವೆಮುಗಂಟಿ, ಹರ್ಷಿಣಿ ಕೊಡುರು. ಅರ್ಚನ್‌ ಅನಂತ್‌, ಪ್ರಮೋದಿನಿ, ಬೇಬಿ ನಿವೇಕ್ಷಾ, ಬೇಬಿ ಕೃತಿಕಾ ತಾರಾಗಣದಲ್ಲಿದ್ದಾರೆ.

 

ಇನ್ನಷ್ಟು ಓದಿಗಾಗಿ:- “My Biggest asset – Descipline ‘’ – Thejaswini Sharma : Chittara Exclusive

ತಾಂತ್ರಿಕ ವರ್ಗದಲ್ಲಿರುವವರು.. ಕೋ ರೈಟರ್: ಸನ್ನಿ ನಾಗಬಾಬು, ಹಾಡುಗಳು: ರೆಹಮಾನ್, ಮಿತ್ತಪಲ್ಲಿ ಸುರೇಂದರ್, ಮೇಕಪ್: ಚಿತ್ತೂರು ಶ್ರೀನು, ಕಾಸ್ಟೂಮ್ಸ್‌: ಅಯ್ಯಪ್ಪ, ಕಾಸ್ಟೂಮ್ಸ್‌ ಡಿಸೈನರ್‌: ಮಾನಸ, ಸ್ಟಿಲ್ಸ್: ಈಶ್ವರ್, ಕಾರ್ಯನಿರ್ವಾಹಕ ನಿರ್ಮಾಪಕ: ಲಕ್ಷ್ಮೀಪತಿ ಕಾಂತಿಪುಡಿ, ಸಹ ನಿರ್ದೇಶಕ: ವಂಶಿ, ಸಾಹಸ: ನಂದು – ನೂರ್, ನೃತ್ಯ ನಿರ್ದೇಶಕರು: ಸುಚಿತ್ರಾ ಚಂದ್ರ ಬೋಸ್ – ರಾಜ್ ಕೃಷ್ಣ, ಕಲಾ ನಿರ್ದೇಶನ: ಆಶಿಶ್ ತೇಜ ಪೂಲಾಲ, ಸಂಕಲನ: ಧರ್ಮೇಂದ್ರ ಕಾಕರಾಳ, ಛಾಯಾಗ್ರಹಣ: ರಾಹುಲ್ ಶ್ರೀವತ್ಸ, ನಾನಿ ಚಾಮಿಡಿ ಶೆಟ್ಟಿ, ಕಾರ್ಯಕಾರಿ ನಿರ್ಮಾಪಕ: ಸೀತಾರಾಮರಾಜು ಮಲ್ಲೇಲ, ಸಂಗೀತ: ಗೋಪಿ ಸುಂದರ್, ಕಂಪೋಸರ್‌: ಮಹರ್ಷಿ ಕೊಂಡ್ಲ, ನಿರ್ಮಾಪಕ: ಮಹೇಂದ್ರ ನಾಥ್ ಕೊಂಡ್ಲಾ, ಕಥೆ – ಸಂಭಾಷಣೆ- ಸ್ಕ್ರೀನ್ ಪ್ಲೇ – ನಿರ್ದೇಶನ: ಅನಿಲ್ ಕಾಟ್ಜ್.

Share this post:

Related Posts

To Subscribe to our News Letter.

Translate »