ಸೀತಾಪಹರಣ ಚಿತ್ರಕ್ಕೆ ಹೀರೋ ಆದ ನಟ ಕೆಂಪೇಗೌಡ
ನಟ ಕೆಂಪೇಗೌಡ್ ಮತ್ತೊಂದು ಚಿತ್ರಕ್ಕೆ ಹೀರೋ ಆಗಿದ್ದಾರೆ. ಅವರು ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರದ ಹೆಸರು ‘ಸೀತಾಪಹರಣ’ ಎಂಬುದು. ಈಗಷ್ಟೆ ಚಿತ್ರಕ್ಕೆ ಮುಹೂರ್ತ ಆಗಿದೆ.
ತಮ್ಮದೇ ಆದ ಛಾಪು ಮೂಡಿಸುತ್ತಿರುವ ಕೆಂಪೇಗೌಡ ಅವರ ಈ ಹೊಸ ಚಿತ್ರವನ್ನು ಚಂದ್ರ ಮೋಹನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಭರತ್ ಗೌಡರವರು ನಿರ್ಮಿಸುತ್ತಿದ್ದು, ಭರತ್ ಮೂವೀಸ್ ಬ್ಯಾನರ್ ನಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ.
ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆ ಇದ್ದು ಚಿತ್ರದಲ್ಲಿ ಅದ್ಧೂರಿ ತಾರಗಣವಿದೆ.