ಸೀತಾ ಹಾಗೂ ರಾಮ ಇಬ್ಬರೂ ಊಟ ಮಾಡುತ್ತಾ ಇರುತ್ತಾರೆ. ಊಟ ಮಾಡುತ್ತಾ ಮಾಡುತ್ತಾ ಕೆಲವು ವಿಚಾರಗಳನ್ನು ರಾಮ್ ಸೀತಾ ಹತ್ತಿರ ಕೇಳುತ್ತಾನೆ. ಕೇಳಿ ನಿಮಗೆ ಯಾವುದರಲ್ಲಿ ಹೆಚ್ಚು ಆಸಕ್ತಿ ನಿಮ್ಮ ಆಸೆ ಕನಸುಗಳು ಏನಿತ್ತು ಎಂದು ಪ್ರಶ್ನೆ ಮಾಡುತ್ತಾನೆ. ಆಗ ಸೀತಾ ತನ್ನ ಆಸೆ ಹಾಗೂ ಹಳೆ ಕನಸುಗಳ ಬಗ್ಗೆ ಹೇಳಿಕೊಳ್ಳುತ್ತಾಳೆ. ಅವಳಿಗೆ ಓದಬೇಕು ಎಂದು ಇತ್ತಂತೆ.
ಇದನ್ನೂ ಓದಿ :ಕಾರುಣ್ಯಾ ಸತ್ಯ ಕೀರ್ತಿ ಎದುರು ಬಯಲು; ವೈಷ್ಣವ್ಗೆ ಲಕ್ಷ್ಮೀ ಕಾಟ
ಓದಿ ನಂತರ ಒಂದು ಒಳ್ಳೆ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂಬುದು ನನ್ನ ಆಸೆ ಆಗಿತ್ತು. ಆ ನಂತ್ರ ಸಿಹಿ ಹುಟ್ಟಿದ್ಲು. ಅವಳು ಹುಟ್ಟಿದ ನಂತರ ನನ್ನ ಎಲ್ಲಾ ಆಸೆ ಕನಸುಗಳು ಅವಳೇ ಆಗಿ ಹೋದ್ಲು ಎಂದು ಸೀತಾ ಹೇಳುತ್ತಾಳೆ. ಅದನ್ನು ರಾಮ್ ಕೇಳಿಸಿಕೊಳ್ಳುತ್ತಾ ಇರುತ್ತಾನೆ. ಅವಳ ಭಾವನೆಗಳಿಗೆ ಹೀಗೆ ಕಿವಿಯಾದವರು ತುಂಬಾ ಕಡಿಮೆ.
ನಂತರ ಮನೆಯಲ್ಲಿ ಭಾರ್ಗವಿ ಹಾಗೂ ಅವಳ ತಂಗಿ ಮಾತಾಡುತ್ತಾ ಇರುತ್ತಾರೆ. ಸೀತಾ ವಜ್ರದ ಬಳೆ ನನಗೆ ಬೇಡ ಅಂತ ಹೇಳಿದ್ದಾಳಲ್ಲಾ ಹಾಗೇ ಅವಳು ಈಗ ಈ ಎಲ್ಲಾ ಒಡವೆಗಳೂ ಸಹ ಬೇಡ ಎಂದು ಹೇಳಿದರೆ ಏನು ಮಾಡೋದು ಎಂದು ಕೇಳುತ್ತಾಳೆ. ಆಗ ಭಾರ್ಗವಿ ಉತ್ತರಿಸುತ್ತಾಳೆ. ಮೊದಲು ಎಲ್ಲಾ ಒಡವೆಯನ್ನು ಅವಳಿಗೆ ಕೋಡೋದು.
ನಂತರ ಆ ಎಲ್ಲಾ ಒಡವೆಗಳು ನಿನಗೇ ಬರುತ್ತದೆ ಯಾಕೆಂದರೆ ಅವಳು ಕರಿಮಣಿಯೊಂದನ್ನು ಬಿಟ್ಟು ಉಳಿದ ಎಲ್ಲಾ ಒಡವೆಯನ್ನು ಬಿಟ್ಟು ಹೋಗ್ತಾಳೆ. ನಾನು ಹಾಗೆ ಮಾಡ್ತೀನಿ ನೋಡ್ತಾ ಇರು ಎಂದು ಹೇಳುತ್ತಾಳೆ. ಅದು ಹೇಗೆ ಅಕ್ಕಾ ಅಂತ ಅವಳು ಕೇಳುತ್ತಾಳೆ. ಆಗ ಅವಳು ಹೇಳುತ್ತಾಳೆ. ಇದ್ದಾನಲ್ಲಾ ಆ ಸಿಹಿ ತಂದೆ. ಅವನಿದ್ದಲ್ಲಿಗೆ ಕಳಸ್ತೀನಿ ಎಂದು ಹೇಳುತ್ತಾಳೆ.
ಆಗ ಅವಳು ಯೋಚನೆ ಮಾಡಲು ಆರಂಭಿಸುತ್ತಾಳೆ. ಅರೆ ಇವಳು ಏನು ಮಾಡಬಹುದು. ಅವಳಾದ್ರೂ ಎಲ್ಲಿಗೆ ಹೋಗ್ತಾಳೆ ಅಂತ ಯೋಚನೆ ಮಾಡುತ್ತಾಳೆ. ಹಿಂದಿನ ಸಂಚಿಕೆಯಲ್ಲಿ – ಒಂದೆಡೆ ಸೀತಾ ಹಾಗೂ ರಾಮ್ ಬದುಕು ಸುಗಮವಾಗಿ ಸಾಗ್ತಾ ಇದ್ರೆ ಇನ್ನೊಂದು ಕಡೆ ಅಶೋಕ್ ಹಾಗೂ ಪ್ರಿಯಾ ಬದುಕು ಹಳಿ ತಪ್ಪುತ್ತಿದೆ. ಯಾಕೆಂದರೆ ಅಶೋಕ್ ಯಾವಾಗಲೂ ರಾಮನಿಗೆ ಕಾವಲಾಗಿರುತ್ತಾನೆ ಅನ್ನೋದೇ ಇದಕ್ಕೆ ಕಾರಣ. ಅವನು ಕಾವಲಾಗಿ ನಿಂತಷ್ಟು ಆಪತ್ತು ಹೆಚ್ಚಾಗುತ್ತಾ ಹೋಗುತ್ತದೆ. ಯಾಕೆಂದರೆ ರಾಮನ ಚಿಕ್ಕಿ ಹೀಗೆ ಮಾಡಿಸುತ್ತಾಳೆ.
ಇದನ್ನೂ ಓದಿ : `ಸಾವಿರ ಗುಂಗಲಿ’ ಬಂದ ಬೃಂದಾ! ; ಯೂತ್ಸ್ ಮನಗೆದ್ದ ವಿಡಿಯೋ ಸಾಂಗ್
ರಾಮ್ ಹಾಗೂ ಸೀತಾ ಮದುವೆ ನಿಶ್ಚಯ ಆಗುತ್ತಾ ಇದೆ ಎಂಬ ವಿಷಯ ಈಗ ಆಫೀಸ್ನಲ್ಲಿ ಎಲ್ಲರಿಗೂ ತಿಳಿದಿದೆ. ಹಾಗಾಗಿ ಅವರು ಒಂದು ಹೂಗುಚ್ಚ ನೀಡಿ ಅವರನ್ನು ಬರಮಾಡಿಕೊಂಡಿದ್ದಾರೆ. ರಾಮ್ ಹಾಗೂ ಸೀತಾ ಇಬ್ಬರಿಗೂ ಒಂದೇ ಹೂವಿನ ಗುಚ್ಛ ನೀಡಿದ್ದಾರೆ. ಇನ್ನು ನಂತರದಲ್ಲಿ ಸೀತಾ ಕೂಡ ಖುಷಿಯಲ್ಲಿದ್ದಾಳೆ.
ಅವರಿಗೆಲ್ಲಾ ರಾಮ್ ತುಂಬಾ ಸಂತೋಷದಿಂದ ಧನ್ಯವಾದ ತಿಳಿಸಿ. ಇನ್ನೂ ಎಂಗೇಜ್ಮೆಂಟ್ ಮದುವೆ ಎಲ್ಲಾ ಬಾಕಿ ಇದೆ. ಆಗ ನೀವೆಲ್ಲಾ ಬಂದು ಆತಿಥ್ಯ ಸ್ವೀಕಾರ ಮಾಡಬೇಕು ಎಂದು ಹೇಳುತ್ತಾನೆ. ಅವರೆಲ್ಲಾ ಓಕೆ ಎಂದು ಹೇಳುತ್ತಾ ಮುಂದೆ ಅವರ ಕೆಲಸಕ್ಕೆ ಹೋಗುತ್ತಾರೆ. ಇನ್ನು ಪ್ರಿಯಾ ಆಫಿಸ್ ಮುಗಿಸಿ ಮನೆಗೆ ಹೋಗಿದ್ಧಾಳೆ.