ಸೀತಾ ರಾಮ್ಗೆ ಕಾಲ್ ಮಾಡಿದ್ದಾಳೆ. ಕಾಲ್ ಮಾಡಿ ಕೇಳಿದ್ದಾಳೆ. ತಾತ ಇವತ್ತು ನನ್ನ ಭೇಟಿ ಆಗೋಕೆ ಹೇಳಿದಾರೆ ಆದ್ರೆ ನಾನು ನೀನು ಮತ್ತು ಸಿಹಿ ಎಂಬ ಪ್ರಶ್ನೆ ಬಂದರೆ ಯಾರನ್ನು ಆಯ್ಕೆ ಮಾಡ್ತೀನಿ ಅನ್ನೋದು ನಿನಗೇ ಗೊತ್ತಲ್ವಾ? ಎಂದು ಕೇಳಿದ್ದಾಳೆ. ಮೊದಲು ಅವಳು ಸುತ್ತಿ ಬಳಸಿ ವಿಷಯಕ್ಕೆ ಬರಲು ಪ್ರಯತ್ನ ಮಾಡಿದ್ದಾಳೆ.
ಆದರೆ ರಾಮ್ಗೆ ಅವಳ ಕಷ್ಟ ಅರ್ಥ ಆಗಿದೆ. ಸುತ್ತಿ ಬಳಸಿ ನೀವು ವಿಷಯ ಹೇಳೋದು ಬೇಡ ಏನಿದೆಯೋ ಅದನ್ನು ನೇರವಾಗಿ ಹೇಳಿಬಿಡಿ ಎಂದು ಕೇಳಿದ್ದಾನೆ. ಆಗ ಸೀತಾ ತನ್ನ ಆಯ್ಕೆ ಯಾವಾಗಲೂ ಸಿಹಿನೇ ಆಗಿರುತ್ತಾಳೆ ಅನ್ನೋದನ್ನು ಸೂಚ್ಯವಾಗಿ ರಾಮ್ಗೆ ಅರ್ಥ ಮಾಡಿಸಿದ್ದಾಳೆ. ಯಾಕೆಂದರೆ ಸದ್ಯ ತಾತ ಏನ್ ಹೇಳ್ತಾರೆ ಅನ್ನೋದೆ ಅವರಿಗೆ ಗೊಂದಲ ಆಗಿದೆ.
ಅವರೆಲ್ಲರ ಮನಸಿನಲ್ಲಿ ತಾತ ಮಗು ಇರುವ ಹೆಂಗಸು ತನ್ನ ಮಗನನ್ನು ಮದುವೆ ಆಗೋದು ಬೇಡ ಎಂದೇ ಇರುತ್ತದೆ ಅಂದುಕೊಂಡಿದ್ದಾರೆ. ಆದರೆ ಇನ್ನು ತಾತ ನಿಖರವಾಹಿ ಯಾವುದನ್ನೂ ಹೇಳಿಲ್ಲಾ. ಅಥವಾ ತಿಳಿಸಿಲ್ಲಾ. ಹಾಗಾಗಿ ಅವರು ಏನು ಹೇಳ್ತಾರೆ ಅನ್ನೋದನ್ನು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಎಲ್ಲರೂ ಯೋಚನೆ ಮಾಡುತ್ತಾ ಇದ್ದಾರೆ.
ಸಿಹಿಗೂ ತನ್ನ ಅಮ್ಮ ಮದುವೆ ಆಗ್ತಾ ಇದ್ದಾರೆ ಅನ್ನುವ ವಿಷಯ ಗೊತ್ತಾಗಿದೆ. ಹೀಗಿರುವಾಗ ಅವಳು ತಾನು ಅಮ್ಮನ ಜೊತೆ ಇದ್ದರೆ ಅವಳಿಗೆ ಮದುವೆ ಆಗೋದಿಲ್ಲಾ ಎಂದು ದೂರ ಇರಲು ನಿರ್ಧಾರ ಮಾಡಿದ್ದಾಳೆ. ನಂತರ ಭಾರ್ಗವಿಗೆ ಈ ವಿಚಾರ ಗೊತ್ತಿರೋದಿಲ್ಲಾ. ಅವಳ ತಂಗಿ ಬಂದು ಈ ವಿಚಾರ ಹೇಳುತ್ತಾಳೆ.
ಮಾವಾ ಇವತ್ತು ಸೀತಾನ ಮನೆಗೆ ಬರೋಕೆ ಹೇಳಿದಾರೆ. ಇಷ್ಟು ದಿನ ಕಾದರೂ ಅವರು ತುಂಬಾ ಒಳ್ಳೆ ನಿರ್ಧಾರ ತಗೊಂಡಿದಾರೆ. ಒಳ್ಳೆ ಸೊಸೆಯನ್ನೇ ಆಯ್ಕೆ ಮಾಡಿದ್ದಾರೆ ಅಂತ ನನಗೆ ಅನಿಸುತ್ತಿದೆ ಎಂದು ಹೇಳಿದ್ದಾಳೆ. ಅವಳು ಹಾಗೆ ಹೇಳಿದ ತಕ್ಷಣ ಇವಳಿಗೆ ಕೋಪ ತಡೆಯೋಕೆ ಆಗೋದಿಲ್ಲಾ. ಇವಳು ತಾನು ಕುಡಿತಾ ಇದ್ದ ಕಾಫೀನಾ ತಗೊಂಡು ಅವಳ ಮುಖದ ಮೇಲೆ ಎರಚುತ್ತಾಳೆ.
ತಾತಾ ನಾವು ಬೇಕು ಅಂತಲೇ ಈ ರೀತಿ ಮಾಡಿಲ್ಲಾ. ಈ ವಿಷಯವನ್ನು ಮುಚ್ಚಿಡುವ ಅವಶ್ಯಕತೆ ನಮಗೆ ಇರಲಿಲ್ಲಾ. ಆದ್ರೂ ಅಂತ ಹೇಳ್ತಾನೆ. ಈಗ ತಪ್ಪು ಮಾಡಿದ್ದಲ್ಲದೇ ಅದಕ್ಕೆ ಬೇರೆ ಸಮಜಾಯಿಶಿ ಕೊಡ್ತಾ ಇದೀಯಾ? ಅಂತ ತಾತ ಮತ್ತೆ ಬೈತಾರೆ. ಆಗ ಅವನಿಗೆ ಬೇಸರ ಆಗುತ್ತದೆ. ನಾವು ಮೊದಲೇ ಹೇಳಬೇಕಿತ್ತು ಎಂದು ಅಂದುಕೊಳ್ಳುತ್ತಾನೆ. ಆ ನಂತರ ಭಾರ್ಗವಿಯನ್ನು ತಾತಾ ಪ್ರಶ್ನೆ ಮಾಡುತ್ತಾರೆ.