ಸತ್ಯ ಪಿಕ್ಚರ್ಸ್ ಗೂಡಿನಿಂದ ಮತ್ತೊಂದು ಹೊಸ ಸಿನಿಮಾವೊಂದು ನಿಮ್ಮ ಮುಂದೆ ಸಂತೋಷದಿಂದ ಬರುತ್ತಿದೆ. ಡಿ.ಸತ್ಯಪ್ರಕಾಶ್ ನಿರ್ದೇಶಿಸಿ, ಒಂದು ಮುಖ್ಯ ಪಾತ್ರದಲ್ಲೂ ಕಾಣಿಸಿಕೊಂಡಿರುವ ಈ ಚಿತ್ರದ ಹೆಸರು X&Y.ಇದು ಇವತ್ತಿನ ಜನರೇಷನ್ ಕಥೆ. ಅಪ್ಪ-ಅಮ್ಮ ಆದವರ, ಅಪ್ಪ-ಅಮ್ಮ ಆಗುತ್ತಿರುವವರ, ಅಪ್ಪ –ಅಮ್ಮ ಆಗಬೇಕು ಎಂದುಕೊಂಡವರ ಕಥೆ. ಹಾಗೆಯೇ ಇವತ್ತಿನ ಹುಡುಗ-ಹುಡುಗಿಯರ ಕಥೆ, ಇವತ್ತಿನ ಮಕ್ಕಳ ಕಥೆ.
ಇದನ್ನೂ ಓದಿ ಡಾಲಿ ಪಿಕ್ಚರ್ಸ್ 5ನೇ ಸಿನಿಮಾಗೆ ನಡುವೆ ಅಂತರವಿರಲಿ ಖ್ಯಾತಿಯ ಪ್ರಖ್ಯಾತ್ ಹೀರೋ
ಇದೊಂದು ಕಾಮಿಡಿ ಜಾನರ್ ಸಿನಿಮಾ ಆಗಿದ್ದು ಅತಿ ಸೂಕ್ಷ್ಮ ವಿಚಾರಗಳನ್ನು ಅಷ್ಟೇ ಸರಳವಾಗಿ ಅದರಲ್ಲೂ ನಗುನಗುತ್ತಾ ನೋಡುವಂತಹ ಕಥೆಯಾಗಿ ನಿಮ್ಮ ಮುಂದೆ ತರುತ್ತಿದ್ದೇವೆ.
ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಯುತ್ತಿದೆ. ವಾಸುಕಿ-ವೈಭವ್ ಸಂಗೀತ, ಲವಿತ್ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ, ವರದರಾಜ್ ಕಾಮತ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಅಥರ್ವ ಪ್ರಕಾಶ, ಬೃಂದಾ ಆಚಾರ್ಯ, ಅಯನ, ಸುಂದರ್ ವೀಣಾ, ವೀಣಾ ಸುಂದರ್, ದೊಡ್ಡಣ್ಣ ಹೀಗೆ ಹಿರಿಯ ಮತ್ತು ಹೊಸ ಕಲಾವಿದರ ಸಂಗಮ ಚಿತ್ರದಲ್ಲಿದೆ.
ಇದನ್ನೂ ಓದಿ ರಾಧಿಕಾ ಕುಮಾರಸ್ವಾಮಿ ಅಭಿನಯದ ಸಪ್ತಭಾಷೆಯಲ್ಲಿ ನಿರ್ಮಾಣವಾಗುತ್ತಿರುವ “ಅಜಾಗ್ರತ” ಚಿತ್ರಕ್ಕೆ ನೂರು ದಿನಗಳ ಚಿತ್ರೀಕರಣ ಪೂರ್ಣ .
ಇದು ನಮ್ಮ ಸಂಸ್ಥೆಯ ನಾಲ್ಕನೇ ಸಿನಿಮಾ. ಈ ಹಿಂದಿನ ಮೂರು ಚಿತ್ರಗಳಿಗೆ ನೀವು ತೋರಿದ ಪ್ರೀತಿ, ತಪ್ಪುಮಾಡಿದಾಗ ನೀವು ತಿದ್ದಿದ ರೀತಿ, ಈ ಸಿನಿಮಾದಲ್ಲೂ ಬೇಕೇ ಬೇಕೆಂಬ ಬೇಡಿಕೆ ನಮ್ಮದು. ಚಿತ್ರದ ಮೊದಲ ಪೋಸ್ಟರನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಾ ನಿಮ್ಮ ಅನಿಸಿಕೆಗಾಗಿ ಎದುರು ನೋಡುತ್ತಿದ್ದೇವೆ ಎನ್ನುತ್ತಾರೆ ಸತ್ಯಪಿಕ್ಚರ್ಸ್ ನ ಸತ್ಯಪ್ರಕಾಶ್ ಹಾಗೂ ತಂಡ.