Sandalwood Leading OnlineMedia

*ಹಾಡಿನೊಂದಿಗೆ “ಸತ್ಯಂ ಶಿವಂ” ಚಿತ್ರದ ಚಿತ್ರೀಕರಣ ಮುಕ್ತಾಯ* .

 

*ಇದು ಯತಿರಾಜ್ ನಿರ್ದೇಶನದ ಚಿತ್ರ* .

ಪತ್ರಕರ್ತ ಹಾಗೂ ಕಲಾವಿದನಾಗಿ ಗುರುತಿಸಿಕೊಂಡಿರುವ ಯತಿರಾಜ್ ಈಗ ನಿರ್ದೇಶಕರಾಗೂ ಜನಪ್ರಿಯ ಇವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆರನೇ ಚಿತ್ರ “ಸತ್ಯಂ ಶಿವಂ”.ಈ ಚಿತ್ರಕ್ಕಾಗಿ ವಿ.ಮನೋಹರ್ ಅವರು ಬರೆದಿರುವ “ನೂರು ಕಾಮನ ಬಿಲ್ಲು ಮೂಡಿದೆ ಎಲ್ಲೆಲ್ಲೂ” ಎಂಬ ಹಾಡಿನ ಚಿತ್ರೀಕರಣ ನಂದಿ ಬೆಟ್ಟದಲ್ಲಿ ನಡೆದಿದೆ. ಫೈವ್ ಸ್ಟಾರ್ ಗಣೇಶ್ ನೃತ್ಯ ನಿರ್ದೇಶನದಲ್ಲಿ ನಾಯಕ ಬುಲೆಟ್ ರಾಜು ಹಾಗೂ ನಾಯಕಿ ಸಂಜನಾ ನಾಯ್ಡು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ವಿ.ಮನೋಹರ್ ಅವರೆ ಸಂಗೀತ ನೀಡಿದ್ದಾರೆ. ಈ ಹಾಡಿನ ಚಿತ್ರೀಕರಣದೊಂದಿಗೆ “ಸತ್ಯಂ ಶಿವಂ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ .

ಇನ್ನೂ ಓದಿ  *’ಕೋಟಿಗೊಬ್ಬ’ನ ಹೃದಯವಂತಿಕೆ..ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಕಿಚ್ಚ ಸುದೀಪ್*

ಚಿತ್ರೀಕರಣ ಬಹುತೇಕ ಪೂರ್ಣವಾಗಿತ್ತು. ಈ ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿತ್ತು. ಹಸಿರಿನ ವಾತವರಣಕ್ಕಾಗಿ ಕಾಯುತ್ತಿದ್ದೆವು. ಈಗಷ್ಟೇ ಮಳೆ ಆರಂಭವಾಗಿ, ಪಕೃತಿ ಹಸಿರಿನಿಂದ ಕಂಗೊಳಿಸುತ್ತಿದೆ. ಇಂತಹ ಸುಂದರ ಪರಿಸರದ ನಂದಿ ಬೆಟ್ಟದಲ್ಲಿ ಈ ಹಾಡಿನ ಚಿತ್ರೀಕರಣ ಮಾಡುವುದರೊಂದಿಗೆ “ಸತ್ಯಂ ಶಿವಂ” ಚಿತ್ರದ ಚಿತ್ರೀಕರಣ ಪೂರ್ಣ ಮಾಡಿರುವುದಾಗಿ ನಿರ್ದೇಶಕ ಯತಿರಾಜ್ ತಿಳಿಸಿದ್ದಾರೆ.

ಇನ್ನೂ ಓದಿ   *ಸೆಟ್ಟೇರಿದ ಪೊನ್ನಿಯಿನ್ ಸೆಲ್ವನ್ ಸ್ಟಾರ್ ಜಯಂರವಿ ಹೊಸ ಸಿನಿಮಾ…ಚೆನ್ನೈನಲ್ಲಿ ’ಜೀನಿ’ ಅದ್ಧೂರಿ ಮುಹೂರ್ತ*

ಸತ್ಯಂ ಶಿವಂ ಎಂಬ ಶೀರ್ಷಿಕೆಯ ಈ ಚಿತ್ರವು ‘ಸುಪಾರಿ ಕಿಲ್ಲರ್’ ಆಧಾರಿತ ಕಮರ್ಷಿಯಲ್ ಸಿನಿಮಾವಾಗಿದ್ದು ನಿರ್ದೇಶಕರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.ಶ್ರೀಮತಿ ಯಶೋಧರಾಜ್ ಬ್ಯಾನರಿನಡಿಯಲ್ಲಿ ಬುಲೆಟ್ ರಾಜು ನಿರ್ಮಿಸಿರುವ ಈ ಚಿತ್ರದಲ್ಲಿ ಬುಲೆಟ್ ರಾಜು, ಸಂಜನ ನಾಯ್ಡು, ಯತಿರಾಜ್, ಮೈಕೋ ನಾಗರಾಜ್, ಅರವಿಂದ್ ರಾವ್, ಬಾಲ ರಾಜವಾಡಿ, ಸಂಗೀತಾ, ಸುಂದರಶ್ರೀ,ಮುನಿ, ವೀಣಾ ಸುಂದರ್, ತೇಜಸ್ವಿನಿ ಅವರ ತಾರಾಬಳಗವಿದ್ದು, ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿದೆ. ಫೈವ್ಸ್ಟಾರ್ ಗಣೇಶ್ ಅವರ ನೃತ್ಯ ಸಂಯೋಜನೆ ಮತ್ತು ವಿದ್ಯಾ ನಾಗೇಶ್ ಅವರ ಛಾಯಾಗ್ರಹಣವಿದೆ.

Share this post:

Related Posts

To Subscribe to our News Letter.

Translate »