Sandalwood Leading OnlineMedia

ಸತ್ಯ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಇತ್ತೀಚಿಗೆ ಮುಹೂರ್ತ ಕಂಡ “X&Y” ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ.

ಸತ್ಯ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಇತ್ತೀಚಿಗೆ ಮುಹೂರ್ತ ಕಂಡ ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯಪ್ರಶಸ್ತಿ ವಿಜೇತ ನಿರ್ದೇಶಕ ಡಿ.ಸತ್ಯಪ್ರಕಾಶ್ ನಿರ್ದೇಶನದ “X&Y” ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಡಿಸೆಂಬರ್ 21 ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭಿಸಿರುವ ಚಿತ್ರತಂಡ, ಫ್ಯಾಂಟಸಿ ಮತ್ತು ಭಾವನಾತ್ಮಕ ದೃಶ್ಯಗಳಿಂದ “X&Y” ಪ್ರೇಕ್ಷಕರನ್ನು ತೇಲಿಸಲಿದೆ ಎನ್ನುತ್ತಾರೆ ನಿರ್ದೇಶಕ ಡಿ.ಸತ್ಯಪ್ರಕಾಶ್.

ಒಂದು ತಿಂಗಳು ಶೂಟಿಂಗ್ ಮುಗಿಸಿ, ಹೊಸವರ್ಷದ ಫೆಬ್ರವರಿಯಲ್ಲಿ ಮಂಗಳೂರಿಗೆ ಪ್ರಯಾಣ ಬೆಳಸಲಿದೆ.“X&Y” ಹೊಸ ಚಿತ್ರದಲ್ಲಿ ಸತ್ಯಪ್ರಕಾಶ್ ಮತ್ತು ಅಥರ್ವ ಪ್ರಕಾಶ್ ನಾಯಕರಾಗಿ ಅಭಿನಯಿಸುತ್ತಿದ್ದು, ಲವಿತ್ ಛಾಯಾಗ್ರಹಣ, ವಾಸುಕಿ ವೈಭವ್ ಸಂಗೀತ ನಿರ್ದೇಶನ, ಬಿ.ಎಸ್ ಕೆಂಪರಾಜ್ ಸಂಕಲನವಿದ್ದು, ವರದರಾಜ್ ಕಾಮತ್ ಕಲಾ ನಿರ್ದೇಶನ ಮಾಡುತ್ತಿದ್ದಾರೆ.

Share this post:

Related Posts

To Subscribe to our News Letter.

Translate »