ಮ್ಯಾಟ್ನಿ …ಸತೀಶ್ ನಿನಾಸಂ , ರಚಿತಾ ರಾಮ್ ಹಾಗೂ ಅದಿತಿ ಪ್ರಭುದೇವಾ ಅಭಿನಯದ ಸಿನಿಮಾ..ಸತೀಶ್ ಮತ್ತು ರಚಿತಾ ಎರಡನೇ ಬಾರಿ ಜೊತೆಯಾಗಿದ್ದು ಅಯೋಗ್ಯ ನಂತ್ರ ಮತ್ತೆ ಈ ಜೋಡಿ ತೆರೆ ಮೇಲೆ ಒಟ್ಟಿಗೆ ಮಿಂಚಲಿದೆ..
ಈಗಾಗಲೇ ಸಾಂಗ್ ಮೂಲಕ ಸದ್ದು ಮಾಡ್ತಿರೋ ಮ್ಯಾಟ್ನಿ ತಂಡ ಈಗ ಮತ್ತೊಂದು ರೋಮ್ಯಾಟಿಕ್ ಹಾಡಿನ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ….
ಸದ್ಯ ಬಿಡುಗಡೆಯಾಗಿರೋ ನಿನಗಾಗಿ ಮಿಡಿಯುವುದು ಈ ಹೃದಯ ಅನ್ನೋ ಹಾಡಿನಲ್ಲಿ ಸತೀಶ್ ನಿನಾಸಂ ಹಾಗೂ ಅದಿತಿ ಪ್ರಭುದೇವಾ ಕಾಣಿಸಿಕೊಂಡಿದ್ದಾರೆ ..ಈ ಕಂಪ್ಲೀಟ್ ಹಾಡನ್ನು ಮನಾಲಿಯಲ್ಲಿ ಚಿತ್ರೀಕರಣ ಮಾಡಿದ್ದು ಹಾಡು ಸಖತ್ ಬ್ಯೂಟಿಫುಲ್ ಹಾಗೂ ರೋಮ್ಯಾಂಟಿಕ್ ಆಗಿ ಮೂಡಿ ಬಂದಿದೆ….
ಇನ್ನು ಈ ಹಾಡನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡುವ ಮೂಲಕ ಮ್ಯಾಟ್ನಿ ಸಿನಿಮಾತಂಡಕ್ಕೆ ಆಲ್ ದ ಬೆಸ್ಟ್ ಹೇಳಿದ್ದಾರೆ …ನಿನಗಾಗಿ ಮಿಡಿಯುವುದು ಹಾಡಿನ ಜೊತೆಗೆ ಮೇಕಿಂಗ್ ಅನ್ನು ಬಿಡುಗಡೆ ಮಾಡಿರೋ ತಂಡ ಮೂರು ದಿನಗಳ ಕಾಲ ಮನಾಲಿ ಚಿತ್ರೀಕರಣ ಹೇಗಿತ್ತು ಅದರ ಜೊತೆ ಚಿತ್ರತಂಡ ಮನಾಲಿಯಲ್ಲಿ ಏನೆಲ್ಲಾ ಸಾಹಸ ಮಾಡಿ ಚಿತ್ರೀಕರಣ ಮಾಡಿದೆ ಅನ್ನೋದನ್ನ ಮೇಕಿಂಗ್ ಮೂಲಕ ತಿಳಿಸಿದ್ದಾರೆ….
ಮ್ಯಾಟ್ನಿ ಸಿನಿಮಾವನ್ನ ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡಿದ್ದು ಪಾರ್ವತಿ ಎಸ್ ಗೌಡ ಚಿತ್ರಕ್ಕೆ ಎಫ್ ಥ್ರೀ ಪ್ರೊಡಕ್ಷನ್ಸ್ ಮೂಲಕ ಬಂಡವಾಳ ಹೂಡಿದ್ದಾರೆ…
ಇನ್ನು ಈ ಹಾಡಿಗೆ ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್ ಮಾಡಿದ್ದು, ಸಂತು ಮಾಸ್ಟರ್ ಕೋರಿಯೋಗ್ರಾಫ್ ಮಾಡಿದ್ದಾರೆ..ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿರೋ ಮ್ಯಾಟ್ನಿ ಸಿನಿಮಾದ ಈ ರೋಮ್ಯಾಂಟಿಕ್ ಹಾಡನ್ನ ಹೇಮಂತ್ ಕುಮಾರ್ ಗಂಜಂ ಬರೆದಿದ್ದು ಸಾದ್ವಿನಿ ಕೊಪ್ಪ ಹಾಡನ್ನ ಹಾಡಿದ್ದಾರೆ…
ಮ್ಯಾಟ್ನಿ ಸಿನಿಮಾದಲ್ಲಿ ಸತೀಶ್ ನಿನಾಸಂ , ರಚಿತಾ ರಾಮ್, ಅದಿತಿ ಪ್ರಭುದೇವಾ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಶಿವರಾಜ್ ಕೆ ಆರ್ ಪೇಟೆ, ನಾಗಭೂಷನ್ , ಪೂರ್ಣ ಮೈಸೂರು, ದಿಗಂತ್ ಸೇರಿದಂತೆ ತಬಲ ನಾಣಿ, ಪ್ರಕಾಶ್ ತುಂಬಿನಾಡು,ಗೋಪಿ ಮಿಮಿಕ್ರಿ,ತುಳಸಿ ಶಿವಮಣಿ ಇನ್ನು ಅನೇಕರು ಅಭಿನಯಿಸಿದ್ದಾರೆ ಏರ್ಪಿಲ್ 5 ರಂದು ಮ್ಯಾಟ್ನಿ ಸಿನಿಮಾ ರಾಜ್ಯಾಧ್ಯಂತ ತೆರೆಗೆ ಬರ್ತಿದೆ..