ನಟ ನೀನಾಸಂ ಸತೀಶ್, ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಇದೇ ಮೇ 15ರಂದು ಅವರು ಹೊಸ ಸಿನಿಮಾದ ಟೈಟಲ್ ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಹೊಸ ಸಿನಿಮಾದ ಟೈಟಲ್ ಲಾಂಚ್ ಆಮಂತ್ರಣ ಪತ್ರಿಕೆಯಲ್ಲಿ ರಕ್ತದಲ್ಲಿ ಮಿಂದೆದ್ದ ಬ್ಲೇಡ್ ಅನ್ನು ಬಳಸಿಕೊಂಡಿದ್ದು, ಇದು ರಕ್ತಸಿಕ್ತ ಅಧ್ಯಾಯದ ಕುರುಹು ಇರಬಹುದಾ? ಎನ್ನುವ ಕುತೂಹಲ ಮೂಡಿಸಿದ್ದಾರೆ.
ಪೋಸ್ಟರ್ ನಲ್ಲಿ ‘ಎಲ್ಲಾ ಯುದ್ಧಗಳು, ಯುದ್ಧ ಭೂಮಿಯಲ್ಲೇ ನಡೆಯೊಲ್ಲ’ ಎನ್ನುವ ಟ್ಯಾಗ್ ಲೈನ್ ಕೂಡ ಇದ್ದು, ಅದು ಮನುಕುಲದ ನಡುವೆ ನಡೆದ ಯುದ್ಧದ ಕಥೆಯಾ ಎಂಬ ಪ್ರಶ್ನೆ ಕೂಡ ಮೂಡುವಂತೆ ಮಾಡಿದ್ದಾರೆ.
ವೃದ್ಧಿ ಕ್ರಿಯೇಷನ್ ಮತ್ತು ಸತೀಶ್ ಪಿಕ್ಚರ್ ಹೌಸ್ ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ವಿನೋದ್ ದೋಂಡಾಳೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.