Sandalwood Leading OnlineMedia

ಕಿಚ್ಚ ಸುದೀಪ್ ತಾಯಿ ಸರೋಜಾ ಸಂಜೀವ್ ನಿಧನಕ್ಕೆ ಕಂಬನಿ ಮಿಡಿದ ಚಂದನವನ

ಕಿಚ್ಚ ಸುದೀಪ್ ತಾಯಿ ಸರೋಜಾ ಸಂಜೀವ್ ಇಂದು (ಅಕ್ಟೋಬರ್ 20) ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸರೋಜಾ ಸಂಜೀವ್ ಅವರು ಆರೋಗ್ಯ ನಿನ್ನೆ ದಿಢೀರನೇ ಹದಗೆಟ್ಟಿತ್ತು. ಅವರನ್ನು ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿತ್ರರ ಫಲಕಾರಿಯಾದ ಸುದೀಪ್ ಅವರ ತಾಯಿ ಕೊನೆಯುಸಿರೆಳೆದಿದ್ದಾರೆ.  ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ  ಮಿಡಿದಿದ್ದಾರೆ 

 “ಸುದೀಪ್ ಅವರ ತಾಯಿ, ನಮ್ಮ ತಾಯಿ ತುಂಬಾ ವರ್ಷಗಳಿಂದ ಪರಿಚಯ. ನಮ್ಮ ಮನೆಗೆ ಬರುತ್ತಾರೆ. ಒಬ್ಬರನ್ನೊಬ್ಬರು ನೋಡುತ್ತಿರುತ್ತಾರೆ. ಎಲ್ಲೇ ಹೊರಗೆ ಹೋಗುವಾಗಲೂ ಅವರ ಆಶೀರ್ವಾದ ತೆಗೆದುಕೊಂಡು ಹೋಗುತ್ತೇವೆ. ಸುದೀಪ್ ಅವರನ್ನು ನೆನೆಸಿಕೊಂಡು ತುಂಬಾನೇ ಕಷ್ಟ ಆಗುತ್ತೆ. ತಾಯಿಯನ್ನು ಕಳೆದುಕೊಂಡ ಜೀವನ ಹೇಗಿರುತ್ತೆ ಎಂಬುದನ್ನು ನಾನು ಅನುಭವಿಸಿದ್ದೇನೆ. ಆ ವೇದನೆಯನ್ನು ಅವರು ಅನುಭವಿಸಬೇಕಲ್ಲ ಅನ್ನೋದು ತುಂಬಾನೇ ಕಷ್ಟ ಆಗುತ್ತೆ. ಅವರನ್ನು ಸಮಾಧಾನ ಮಾಡುವುದಕ್ಕೆ ದೇವರು ಶಕ್ತಿ ಕೊಡಲಿ.  .” – ರಾಘವೇಂದ್ರ ರಾಜ್‌ಕುಮಾರ್

“ಇಂದು ನಮ್ಮ ಸುದೀಪ್ ಅಣ್ಣ, ಕಿಚ್ಚ ಸುದೀಪ್ ಅವರ ತಂದೆಯವರು ನನ್ನ ಆತ್ಮೀಯ ಸ್ನೇಹಿತರು. ನನ್ನ ಅಕ್ಕನ ಸಮಾನವಾಗಿರುವ ಸರೋಜಕ್ಕೆ ಅವರು ತೀರಿ ಹೋಗಿದ್ದು ಅತ್ಯಂತ ದು:ಖಕರ ಸಂಗತಿ. ನನಗೆ ವೈಯಕ್ತಿಕವಾಗಿ ಕೂಡ ತುಂಬಾ ನಷ್ಟ ಆಗಿದೆ. ಅವರ ಮನೆ ಹೋದಾಗಲೆಲ್ಲ ಊಟ ಕೊಟ್ಟಿದ್ದಾರೆ, ತಿಂಡಿ ಕೊಟ್ಟಿದ್ದಾರೆ, ಪ್ರೀತಿ ಕೊಟ್ಟಿದ್ದಾರೆ. ತಾಯಿಯ ಮಮತೆಯ ಸ್ವರೂಪಿಣಿಯಾಗಿದ್ದರು. -ಬಸವರಾಜ ಬೊಮ್ಮಾಯಿ

 ನಾನು ಅಕ್ಕ ಪಕ್ಕದ ಮನೆಯವರು. ಯಾವುದೇ ಹಬ್ಬ ಹರಿದಿನಗಳಲ್ಲಿ ಕರೆ ಬರುತ್ತಿತ್ತು ಅಂದರೆ ಅದು ಸರೋಜಮ್ಮನವರದ್ದು. ನಮ್ಮ ಅಮ್ಮನಿಗೆ ಹಾಗೂ ಸುದೀಪ್ ಅಮ್ಮನಿಗೆ ಇರುವ ಸಾಮ್ಯತೆ ಅಂದರೆ, ಸುದೀಪ್ ಅವರು ಯಾವುದೇ ಕಾರ್ಯಕ್ರಮದಲ್ಲಿ ಮಾತಾಡಬೇಕಾದರೆ, ತಕ್ಷಣ ಕರೆ ಮಾಡಿ ಸರಿ ಮಾತಾಡಿದ್ನಾ? ಅಂತ ಮಾತಾಡೋದು. ನಾನೇನು ಮಾತಾಡಿದರೆ, ನಮ್ಮ ತಾಯಿ ಮಗಳು ಸರಿಯಾಗಿ ಮಾತಾಡಿದಳಾ ಅಂತ ಮಾತಾಡಿಕೊಳ್ಳೋರು. ನಮ್ಮ ಅಮ್ಮ ಹೋದಾಗಲೂ ಫೋನ್ ಮಾಡಿ ಸಮಾಧಾನ ಮಾಡಿದ್ದರು.” – ತಾರಾ 

ತಾಯಿ ಮಗನ ಸಂಬಂಧ ಏನು ಅಂತ ಅರ್ಥ ಆಯ್ತು. ಅವರ ತಂದೆಯನ್ನು ಗಟ್ಟಿಯಾಗಿ ಅವಚಿಕೊಂಡಿದ್ದರು. ನಾವು ಹೋದಾಗ ಏಳುತ್ತಲೇ ಇಲ್ಲ. ಬಹಳ ನೋವಲ್ಲೇ ಇದ್ದಾರೆ. ಆ ದು:ಖವನ್ನು ಕಳೆದುಕೊಳ್ಳುವುದಕ್ಕೆ ಶಕ್ತಿ ಆ ಭಗವಂತನೇ ಕೊಡಬೇಕು. ನಮ್ಮಿಂದ ಸಾಧ್ಯವೇ ಇಲ್ಲ.” -ಎನ್‌ ಎಂ ಸುರೇಶ್

 

 ನನ್ನ ಹಾಗೂ ಸರೋಜಕ್ಕ ಅವರದ್ದು 40 ವರ್ಷಗಳ ಪ್ರೀತಿ ವಿಶ್ವಾಸದ ಸಂಬಂಧ. ಸುದೀಪ್ ಅವರು ಆಕ್ಟ್ ಮಾಡುವುದಕ್ಕಿಂತಲೂ ತಂಬಾನೇ ಪರಿಚಯಸ್ಥರು. ಸರೋವರ್ ಹೋಟೆಲ್ ಉದ್ಘಾಟನೆ ಆಗುವಂತಹ ಸಂದರ್ಭದಲ್ಲಿ ನಾನು ಇದ್ದೆ. ಸುದೀಪ್ ಈ ಮಟ್ಟಿಗೆ ಬೆಳೆದಿದ್ದಾರೆ ಅನ್ನೋದಕ್ಕೆ ಕಾರಣ ಅವರ ತಂದೆ ತಾಯಿ. ಅವರ ತಂದೆ ತಾಯಿಯನ್ನು ಅಷ್ಟೇ ಚೆನ್ನಾಗಿ ನೋಡಿಕೊಂಡಿದ್ದನ್ನು ಹತ್ತಿರದಿಂದ ನೋಡಿದ್ದೇನೆ.” -ಸಾರಾ ಗೋವಿಂದು

 

 “1979ರಿಂದ ಸರೋಜಕ್ಕವರ ಪರಿಚಯ. ಅವರು ಒಂದು ಸಾಮ್ರಾಜ್ಯವನ್ನೇ ಕಟ್ಟಿದರು. ಆ ಅದಕ್ಕೆ ಪಿಲ್ಲರ್ ಆಗಿ ನಿಂತಿದ್ದವರು ಇವರು. ಎಲ್ಲರಿಗೂ ಸಮಾಧಾನ ಹೇಳುವಂತಹವರು. ಒಂದು ಒಳ್ಳೆಯ ಹೃದಯವನ್ನು ಕಳೆದುಕೊಂಡಿದ್ದಾರೆ. ತಾಯಿಯನ್ನು ಇಷ್ಟೊಂದು ಪ್ರೀತಿ ಮಾಡಿದವರನ್ನು ನೋಡಿಯೇ ಇಲ್ಲ.” -ಜಯಮಾಲಾ

 

 

Share this post:

Related Posts

To Subscribe to our News Letter.

Translate »