ನಟಿ ಸಾರಾ ಅಣ್ಣಯ್ಯ ಮತ್ತೆ ಮತ್ತೆ ಬೋಲ್ಡ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡ್ತಾ ಇದ್ದಾರೆ. ಈ ಬಾರಿಯೂ ಬೋಲ್ಡ್ ಫೋಟೋಗಳ ಹಂಚಿಕೊಂಡಿದ್ದಾರೆ. ಸಾರಾ ಶಾರ್ಟ್ ಡ್ರೆಸ್ ಧರಿಸಿದ್ದಾರೆ. ಅದಕ್ಕೆ ಅಭಿಮಾನಿಗಳು, ಪ್ಯಾಂಟ್ ಹಾಕೋದೆ ಮರೆತು ಹೋಗ್ತೀರಿ ನೀವು ಎಂದಿದ್ದಾರೆ.
ನೆಗೆಟಿವ್ ಕಾಮೆಂಟ್ ಹಾಕಿದ್ದಾರೆ. ಅದರ ಬಗ್ಗೆ ಸಾರಾ ತಲೆ ಕೆಡಿಸಿಕೊಳ್ಳಲ್ಲ.ಆ ಡ್ರೆಸ್ಸಿಂಗ್ ಹಾಗೆಯೇ ಇರುತ್ತದೆ. ಚೆಂದದ ನಗುವಿನ ಜೊತೆಗೆ ಫೋಟೋಗೆ ಪೋಸ್ ನೀಡಿದ್ದಾರೆ. ನೋಡುವುದಕ್ಕೂ ಮುದ್ದಾಗಿ ಕಾಣ್ತಾ ಇದ್ದಾರೆ.ಸಾರಾ ಅಣ್ಣಯ್ಯ ಕನ್ನಡತಿ ಧಾರಾವಾಹಿಯಲ್ಲಿ ವರೂಧಿನಿ ಪಾತ್ರ ಮಾಡಿ ಫೇಮಸ್ ಆಗಿದ್ದರು. ನಂತರ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ಸ್ವಲ್ಪ ದಿನ ದೀಪಿಕಾ ಪಾತ್ರ ಮಾಡಿದ್ದರು.
ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಅಮೃತಧಾರೆ ಧಾರಾವಾಹಿಗೆ ನಟಿ ಸಾರಾ ಅಣ್ಣಯ್ಯ ಅವರು ಎಂಟ್ರಿ ಕೊಟ್ಟಿದ್ದಾರೆ. ಸಾರಾ ಅವರು ಮಹಿಮಾ ಎಂಬ ಪಾತ್ರ ಮಾಡ್ತಾ ಇದ್ದಾರೆ. ಮಹಿಮಾ, ನಟ ಗೌತಮ್ ದಿವಾನ್‍ನ ಮುದ್ದಿನ ತಂಗಿ. ಫ್ಯಾಶನ್ ಡಿಸೈನಿಂಗ್ ಲೋಕದ ಕ್ವೀನ್. ಬಯಸಿದ್ದೆಲ್ಲಾ ತನ್ನದಾಗಬೇಕು ಎಂಬ ಹುಚ್ಚು.
ಸಾರಾ ಅಣ್ಣಯ್ಯ ಅವರು ಯಾವಾಗಲೂ ಮಾರ್ಡನ್ ಆಗಿ ಇರುತ್ತಾರೆ. ಧಾರಾವಾಹಿ ಆದ್ರೂ ಸರಿ, ನಿಜ ಜೀವನದಲ್ಲಾದ್ರೂ ಸರಿ. ಅದೇ ರೀತಿ ಇವರಿಗೆ ಪಾತ್ರಗಳು ಸಿಗುತ್ತಿವೆ. ಆದ್ರೆ ಸಾರಾ ಅವರಿಗೆ ಟ್ರೆಡಿಷನಲ್ ಲುಕ್ ಸಹ ಸೂಪರ್ ಆಗಿ ಕಾಣುತ್ತೆ.
ಸಾರಾ ಅಣ್ಣಯ್ಯ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆಗಾಗ ಫೋಟೋಗಳನ್ನು ಹಂಚಿಕೊಳ್ತಾ ಇರ್ತಾರೆ. ಇವರಿಗೆ 238k ಫಾಲೋವರ್ಸ್ ಇದ್ದಾರೆ.ಸಾರಾಗೆ ಸಿನಿಮಾದಲ್ಲಿ ನಟಿಸಲು ಆಸೆ ಇದೆಯಂತೆ. ಅದಕ್ಕೆ ಈ ರೀತಿ ಫೋಟೋಶೂಟ್ ಮಾಡಿಸ್ತಾ ಇದ್ಧಾರೆ ಎಂದು ಜನ ಮಾತನಾಡಿಕೊಳ್ತಾ ಇದ್ದಾರೆ. ಪ್ಯಾಂಟ್ ಮರೆತಿದ್ದನ್ನು ಮಾತ್ರ ನೆಟ್ಟಿಗರು ನೆನಪಿಸ್ತಾ ಇರ್ತಾರೆ.