Sandalwood Leading OnlineMedia

*”ನಿಮಗಿಷ್ಟವಾಗಲಿಲ್ಲ ಅಂದಮಾತ್ರಕ್ಕೆ ನಾನು ದೇವಸ್ಥಾನಕ್ಕೆ ಹೋಗುವುದನ್ನು ನಾನು  ನಿಲ್ಲಿಸಲಾರೆ, ನಾನು ಆ ಕ್ಷೇತ್ರದ ಶಕ್ತಿಯನ್ನು  ನಂಬುವವಳು”*

ಸಾರಾ ಅಲಿ ಖಾನ್​ ನಟನೆಯ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಹಿಟ್​ ಆಗಿದೆ. ಈ ಚಿತ್ರದ ಗೆಲುವಿನಿಂದ ಸಾರಾ ಅಲಿ ಅವರ ಡಿಮ್ಯಾಂಡ್​ ಹೆಚ್ಚಿದೆ.ನಟಿ ಸಾರಾ ಅಲಿ ಖಾನ್​  ಅವರಿಗೆ ಟ್ರೋಲ್​ ಕಾಟ ಹೊಸದೇನೂ ಅಲ್ಲ. ಆಗಾಗ ಅವರು ಟ್ರೋಲ್​ ಆಗುತ್ತಾರೆ.ಸೈಫ್​ ಅಲಿ ಖಾನ್​ ಪುತ್ರಿ ಎಂಬ ಕಾರಣಕ್ಕೆ ಬಾಲಿವುಡ್​ನಲ್ಲಿ ಅವರಿಗೆ ಸುಲಭವಾಗಿ ಅವಕಾಶಗಳು ಸಿಕ್ಕವು. ಆದರೆ ಅಷ್ಟು ಸುಲಭವಾಗಿ ಗೆಲುವು ಸಿಗಲಿಲ್ಲ. ಅವರನ್ನು ನೆಪೋ ಕಿಡ್​ ಎಂದು ಕರೆಯಲಾಗುತ್ತದೆ. ಅಂದರೆ ನೆಪೋಟಿಸಂ ಸಹಾಯದಿಂದ ಬೆಳೆದ ಸ್ಟಾರ್​ ಕಲಾವಿದರ ಮಗಳು ಎಂದು ಅವರನ್ನು ಹೀಯಾಳಿಸಲಾಗುತ್ತದೆ. ಅದೂ ಸಾಲದೆಂಬಂತೆ ಸಾರಾ ಅಲಿ ಖಾನ್​ ಅವರ ದೈವ ಭಕ್ತಿಯ ಬಗ್ಗೆಯೂ ಟೀಕೆ ಎದುರಾಗುತ್ತದೆ. ಇತ್ತೀಚೆಗೆ ಅವರು ಹಿಂದೂ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಆಗ ಅವರನ್ನು ಟ್ರೋಲ್​ ಮಾಡಲಾಗಿತ್ತು. ಅದಕ್ಕೆ ಈಗ ಅವರು ಪ್ರತಿಕ್ರಿಯೆ ನೀಡಿದ್ದಾರೆ.

 

 

ಸಾರಾ ಅಲಿ ಖಾನ್​ ಅವರು ಕೇದಾರನಾಥ, ಉಜ್ಜಯಿನಿ ಮಹಾಕಾಳ ದೇವಸ್ಥಾನ ಸೇರಿದಂತೆ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಹಿಂದೂಗಳು ಆರಾಧಿಸುವ ಈ ಕ್ಷೇತ್ರಗಳಿಗೆ ಸಾರಾ ಅಲಿ ಖಾನ್​ ತೆರಳಿದ್ದು ಸರಿಯಲ್ಲ ಎಂದು ಒಂದು ವರ್ಗದ ಜನರು ಅವರನ್ನು ಟ್ರೋಲ್​ ಮಾಡಿದ್ದರು. ಅಂಥವರಿಗೆ ಸಾರಾ ತಿರುಗೇಟು ನೀಡಿದ್ದಾರೆ. ‘ಇದು ನಿಮಗೆ ಸರಿ ಎನಿಸಿದರೆ ಓಕೆ. ನಿಮಗೆ ಇಷ್ಟ ಆಗುತ್ತಿಲ್ಲ ಎಂದ ಮಾತ್ರಕ್ಕೆ ನಾನು ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸುವುದಿಲ್ಲ’ ಎಂದು ಸಾರಾ ಆಲಿ ಖಾನ್​ ಹೇಳಿದ್ದಾರೆ. ‘ಹಿಂದುಸ್ತಾನ್​ ಟೈಮ್ಸ್​’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ಹಂಚಿಕೊಂಡಿದ್ದಾರೆ.ಸಿನಿಮಾ ಗೆದ್ದ ಖುಷಿಯಲ್ಲಿ ಕ್ಯೂಟ್ ಫೋಟೋ ಹಂಚಿಕೊಂಡ ನಟಿ ಸಾರಾ ಅಲಿ ಖಾನ್.

 

 

ಈ ಹಿಂದೆ ಕೂಡ ಸಾರಾ ಅಲಿ ಖಾನ್​ ಅವರು ಇಂಥ ಟ್ರೋಲ್​ಗಳ ಬಗ್ಗೆ ಮಾತನಾಡಿದ್ದರು. ‘ನನ್ನ ವೈಯಕ್ತಿಕ ನಂಬಿಕೆಗಳು ನನಗೆ ಮಾತ್ರ ಸಂಬಂಧಿಸಿವೆ. ನಾನು ಅಜ್ಮೇರ್​ ಶರೀಫ್​ ದರ್ಗಾಗೆ ಹೋಗುವಷ್ಟೇ ಶ್ರದ್ಧೆ ಮತ್ತು ಭಕ್ತಿಯಿಂದ ಬಂಗ್ಲಾ ಸಾಹಿಬ್​ ಗುರುದ್ವಾರಕ್ಕೆ ತೆರಳುತ್ತೇನೆ. ಅಷ್ಟೇ ಶ್ರದ್ಧೆಯಿಂದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಹೋಗುತ್ತೇನೆ. ನಾನು ಅದನ್ನು ಮುಂದುವರಿಸುತ್ತೇನೆ. ಜನರು ಏನು ಬೇಕಾದರೂ ಹೇಳಿಕೊಳ್ಳಲಿ. ಅದರಿಂದ ನನಗೆ ತೊಂದರೆ ಇಲ್ಲ. ನಿಮಗೆ ಆ ಕ್ಷೇತ್ರದ ಶಕ್ತಿ ಇಷ್ಟವಾಗಬೇಕು. ನಾನು ಆ ಶಕ್ತಿಯನ್ನು ನಂಬುವವಳು’ ಎಂದು ಅವರು ಹೇಳಿದ್ದರು. ಮಹಾಕಾಳೇಶ್ವರ ದೇವಸ್ಥಾನಕ್ಕೆ ಸಾರಾ ಅಲಿ ಖಾನ್​ ಭೇಟಿ; ಸೈಫ್​ ಪುತ್ರಿಯ ಟೆಂಪಲ್​ ರನ್​ ಬಗ್ಗೆ ಕೆಲವರ ತಕರಾರು.ಸಿನಿಮಾ ವಿಚಾರಕ್ಕೆ ಬರೋದಾದರೆ, ವಿಕ್ಕಿ ಕೌಶಲ್​ ಮತ್ತು ಸಾರಾ ಅಲಿ ಖಾನ್​ ಅವರು ಜೋಡಿಯಾಗಿ ನಟಿಸಿದ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಹಿಟ್​ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ 80 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದೆ. ‘ಆದಿಪುರುಷ್​’ ತೆರೆಕಂಡ ಬಳಿಕ ಇದರ ಹವಾ ಕಡಿಮೆ ಆಗಬಹುದು ಎಂದು ಊಹಿಸಲಾಗಿತ್ತು. ಆದರೆ ಇನ್ನೂ ಅನೇಕ ಕಡೆಗಳಲ್ಲಿ ‘ಜರಾ ಹಟ್ಕೆ ಜರಾ ಬಚ್ಕೆ’ ಚಿತ್ರ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಗೆಲುವಿನಿಂದ ಸಾರಾ ಅಲಿ ಖಾನ್​ ಅವರಿಗೆ ಡಿಮ್ಯಾಂಡ್​ ಹೆಚ್ಚಿದೆ. ಟ್ರೋಲಿಗರಿಗೂ ಕೆಲಸ ಹೆಚ್ಚಿದೆ.

Share this post:

Translate »