Left Ad
ತೆಲುಗು ಇಂಡಸ್ಟ್ರಿಯಲ್ಲೂ ಜರ್ನಿ ಶುರು ಮಾಡಿದ ಸಪ್ತಮಿ ಗೌಡ - Chittara news
# Tags

ತೆಲುಗು ಇಂಡಸ್ಟ್ರಿಯಲ್ಲೂ ಜರ್ನಿ ಶುರು ಮಾಡಿದ ಸಪ್ತಮಿ ಗೌಡ

ಕಾಂತಾರ ಮೂಲಕ ಭಾಷೆಯ ಭೇದ ಭಾವ ಇಲ್ಲದೇ, ಎಲ್ಲ ವರ್ಗದ ಜನರ ಹೃದಯವನ್ನ ಗೆದ್ದ ಸಪ್ತಮಿಗೌಡ ಯುವ ಸಿನಿಮಾದಲ್ಲಿಯೂ ತಮ್ಮ ಛಾಪು ಮೂಡಿಸಿದರು. ಮೋಡಿಯನ್ನ ಮಾಡಿದರು. ಇವತ್ತು ಕೂಡ ಯುವ ಚಿತ್ರದಲ್ಲಿ ಸಪ್ತಮಿ ಅವರ ಸಹಜಾಭಿನಯವನ್ನ ಅನೇಕರು ಕಣ್ತುಂಬಿಕೊಳ್ಳುತ್ತಿದ್ದಾರೆ. ಇದರ ನಡುವೆ ಸಪ್ತಮಿ ಗೌಡ ದಕ್ಷಿಣದ ಬೇರೆ ರಾಜ್ಯಗಳತ್ತ ದಂಡೆತ್ತಿ ಹೊರಟಿದ್ದಾರೆ.

 

 

 

Nithiin To Romance Sapthami Gowda In Thammudu | cinejosh.com

 

ಇದನ್ನೂ ಓದಿ :Priyamani :ಪ್ರಿಯಾಮಣಿ ಪಡೆದ ಮೊದಲ ಸಂಬಳ ಎಷ್ಟು ಗೊತ್ತಾ?

 

ಸಪ್ತಮಿ ಗೌಡ ಅವರು ‘ಪಾಪ್ಕಾರ್ನ್ ಮಂಕಿ ಟೈಗರ್’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡರು. ಈ ಚಿತ್ರದಿಂದ ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ಆ ಬಳಿಕ ಅವರಿಗೆ ಸಿಕ್ಕಿದ್ದು ‘ಕಾಂತಾರ’ ಸಿನಿಮಾ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಸಿನಿಮಾ ಸೂಪರ್ ಹಿಟ್ ಆಯಿತು. ನಂತರ ಅವರು ಹಿಂದಿ ಚಿತ್ರರಂಗಕ್ಕೂ ಕಾಲಿಟ್ಟರು. ಈಗ ತೆಲುಗಿನ ಸಿನಿಮಾದಲ್ಲಿ ಸಪ್ತಮಿ ಗೌಡ ಅವರು ನಟಿಸುತ್ತಿದ್ದಾರೆ.

 

 

 

 

ಇದನ್ನೂ ಓದಿ :ಕಾಟೇರ ಚಿತ್ರಕ್ಕೆ 100 ದಿನದ ಸಂಭ್ರಮ

ತಮ್ಮುಡು ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಲು, ಸಪ್ತಮಿ ಗೌಡ ತೂಕ ಇಳಿಸಿಕೊಂಡಿದ್ದಾರೆ. ಸ್ಲಿಮ್ ಆಗಿದ್ದಾರೆ. ಇನ್ನೂ ರೇಸ್ ಕೋರ್ಸ್ ಮೈದಾನದಲ್ಲಿನ ಜಾಕಿಗಳಿಗೂ ಸೆಡ್ಡು ಹೊಡೆಯುವಂತೆ ಸಪ್ತಮಿ ಗೌಡ ಈ ಚಿತ್ರಕ್ಕೆ ಕುದುರೆ ಸವಾರಿಯನ್ನ ಕಲಿತಿದ್ದಾರೆ. ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಸಪ್ತಮಿ ಗೌಡ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ನಿತಿನ್ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ. ಸಿನಿಮಾ ಶೂಟಿಂಗ್ ಕೂಡ ಶುರುವಾಗಿದೆ. ನಾನು ಹೋಗಿ ಸೆಟ್ ಸೇರಿಕೊಳ್ಳಬೇಕಿದೆ’ಎಂದಿದ್ದಾರೆ.

 

 

 

Kannada films will always be my priority: Sapthami on Bollywood debut |  Bollywood - Hindustan Times

 

 

ಇನ್ನೂ ತಮ್ಮ ಮೊದಲ ತೆಲುಗು ಚಿತ್ರದಲ್ಲಿಯೇ ನಿತಿನ್ ಅವರಂತಹ ಪ್ರತಿಭಾವಂತ ನಟನ ಜೊತೆ ತೆರೆಹಂಚಿಕೊಳ್ಳುತ್ತಿರುವುದಕ್ಕೆ ಸಪ್ತಮಿಗೌಡ ಅವರಿಗೆ ಸಿಕ್ಕಾಪಟ್ಟೆ ಖುಷಿ ಇದೆ. ಸೋನೆ ಪೆ ಸುಹಾಗ ಅನ್ನುವಂತೆ ವಕೀಲ್ ಸಾಬ್ ಅಂತಹ ಚಿತ್ರವನ್ನ ನಿರ್ದೇಶಿಸಿರುವ ವೇಣು ಶ್ರೀರಾಮ್ ಈ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಟಾಲಿವುಡ್ನ ಖ್ಯಾತ ನಿರ್ಮಾಪಕ ದಿಲ್ ರಾಜು ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಇವೆಲ್ಲ ಕಾರಣಗಳಿಂದ ಸಪ್ತಮಿ ಗೌಡ ಸದ್ಯಕ್ಕೆ ಕ್ಲೌಡ್ ನೈನ್ ನಲ್ಲಿದ್ದಾರೆ.

Spread the love
Translate »
Right Ad