Sandalwood Leading OnlineMedia

`ಕಾಂತಾರ-2’ನಲ್ಲೂ ಸಪ್ತಮಿ?!

ಸಪ್ತಮಿ ಗೌಡ ಎಂಬ ಹೆಸರು ಎಷ್ಟು ಮಂದಿಗೆ ಗೊತ್ತಿದೆಯೋ ಇಲ್ಲವೋ, ಆದರೆ `ಕಾಂತಾರ ಚಿತ್ರದಲ್ಲಿನ `ಲೀಲಾಳಾಗಿ ಚಿರಪರಿಚಿತ. ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರದಲ್ಲಿ ಲೀಲಾಜಾಲವಾಗಿ ನಟಿಸಿ, ಸೈ ಅನ್ನಿಸಿಕೊಂಡವರು ಸಪ್ತಮಿ. ಕಾಂತಾರ ವಿಶ್ವ ದಾಖಲೆ ಮಾಡಿ ಸಿನಿಮಾ ರಂಗದವರ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡಿ ಬಿಟ್ಟಿದೆ. ಸಿನಿಮಾದಲ್ಲಿ ನಟ ನಟಿಯರು ಸಾಕಷ್ಟು ಬೇಡಿಕೆಯನ್ನು ಪಡೆದುಕೊಂಡಿದ್ದಾರೆ. ಅದರಲ್ಲೂ ಶಿವನ ಮನದನ್ನೆ ಲೀಲಾಳಾಗಿ ಅದ್ಭುತ ನಟನೆಯನ್ನು ನೀಡಿದ ಸಪ್ತಮಿ ಗೌಡ ಅವರಿಗೆ ಅವಕಾಶಗಳ ಸುರಿಮಳೆಯೇ ಆಗುತ್ತಿದೆ. ಪಾತ್ರಗಳ ಆಯ್ಕೆಯಲ್ಲಿ ಚೂಸಿ ಆಗಿರುವ ಸಪ್ತಮಿ ಅವರ ಮುಂದಿನ ಯೋಜನೆಯೋಚನೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

`ಮಾಸ್ತಿಗುಡಿ’ ದುರಂತಕ್ಕೆ ಹೊಸ ಟ್ವಿಸ್ಟ್: ಸಿಕ್ಸ್ ಪ್ಯಾಕ್ ತೆಗೀತಾ ಪ್ರಾಣ?!

 ಶಿವಣ್ಣ, ಉಪೇಂದ್ರ, ರಾಜ್.ಬಿ.ಶೆಟ್ಟಿ ಅಭಿನಯದ `45′ ಚಿತ್ರ ಮೈಸೂರಿನಲ್ಲಿ ಆರಂಭ

`ಯುವರಾಜನಿಗೊಬ್ಬಳು ಯುವರಾಣಿ!

ಡಾ. ರಾಜ್ ಕುಮಾರ್ ಮೊಮ್ಮಗ ಯುವ ರಾಜ್ಕುಮಾರ್ ಸಿನಿಮಾ ಸೆಟ್ಟೇರಿದ್ದು, `ಯುವ ಚಿತ್ರದ ಮುಹೂರ್ತ ಇತ್ತೀಚಿಗೆ ಅದ್ದೂರಿಯಾಗಿ ನಡೆಯಿತು. ಮುಹೂರ್ತದ ವೇಳೆ ಸಿನಿಮಾ ನಾಯಕ ನಟಿ ಯಾರೆಂದು ಚಿತ್ರತಂಡ ರಿವೀಲ್ ಮಾಡಿರಲಿಲ್ಲ. ಇದೀಗ ಸಪ್ತಮಿ ಗೌಡ ಯುವ ರಾಜನಿಗೆ ರಾಜಕುಮಾರಿ ಆಗಿದ್ದಾರೆ. ದೊಡ್ಮನೆ ಕುಡಿ ಯುವ ರಾಜ್ಕುಮಾರ್ ಯುವ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಯುವ ರಾಜ್ಗೆ ಜೋಡಿಯಾಗಿ ನಟಿ ಸಪ್ತಮಿ ಗೌಡ ನಟಿಸಲಿದ್ದಾರೆ. ಆದ್ರೆ ಇದೀಗ HOMBALE FILMS `ಕಾಂತಾರ ನಂತರ ಸಪ್ತಮಿ ಗೌಡಗೆ ಮತ್ತೊಂದು ಚಾನ್ಸ್ ನೀಡಿದ್ದು ಯುವ ಜೊತೆ ರೊಮ್ಯಾನ್ಸ್ ಮಾಡಲು ಕಾಂತಾರ ಲೀಲಾ ರೆಡಿ ಎಂದಿದ್ದಾರೆ.

 

ಕನ್ನಡಕ್ಕೊಂದು ಹೊಸ ನಿರ್ಮಾಣ ಸಂಸ್ಥೆ;ಗೆಳೆಯನ ಕನಸಿಗೆ ಸಾಥ್ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್

`ಕಾಳಿಯಲ್ಲೂ ಸಪ್ತಮಿ ಮೋಡಿ

ಕಾಂತಾರ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಸಪ್ತಮಿ ಗೌಡಗೆ ಇದೀಗ ಆಫರ್ಗಳ ಸುರಿಮಳೆಯಾಗ್ತಿದೆ. ಅಂಬಿ ಪುತ್ರ ಅಭಿಷೇಕ್ ಮುಂದಿನ ಸಿನಿಮಾ ಕಾಳಿಯಲ್ಲೂ ಸಪ್ತಮಿ ಗೌಡ ಅವರೇ ನಾಯಕಿಯಾಗಿದ್ದಾರೆ. ಹೆಬ್ಬುಲಿ, ಪೈಲ್ವಾನ್ ನಿರ್ದೇಶಕ ಎಸ್.ಕೃಷ್ಣ ಅವರು `ಕಾಳಿ ಚಿತ್ರದ ನಿರ್ದೇಶಕರು. ೧೯೯೦ ಕಾವೇರಿ ಗಲಾಟೆಯ ವೇಳೆ ನಡೆಯು ರೊಮ್ಯಾಂಟಿಕ್ ಕಥೆ ಇದಾಗಿದ್ದು, `ಕಾಂತಾರ ನಂತರ ಅಭಿನಯಕ್ಕೆ ಸಾಕಷ್ಟು ಸ್ಕೋಪ್ ಇರುವ ಚಿತ್ರವನ್ನು ಸಪ್ತಮಿ ಆಯ್ಕೆ ಮಾಡಿಕೊಮಡಿದ್ದಾರೆ. ಕಾಳಿ ಸಿನಿಮಾ ಜೂನ್ ನಲ್ಲಿ ಆರಂಭವಾಗುವ ಸಾಧ್ಯತೆಯಿದ್ದು, `ಆರ್.ಆರ್.ಆರ್ ಮೋಷನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗಲಿದೆ.

 

‘ಮತ್ತೆ ಮದುವೆ’ ಅಂಗಳದಿಂದ ಬಂತು `ಉರುಳೋ ಕಾಲವೇ’ ಮೊದಲ ಸಾಂಗ್

ಬಾಲಿವುಡ್ನಲ್ಲೂ ಲೀಲಾ ಲೀಲೆ!

 ಸ್ಯಾಂಡಲ್ವುಡ್ ನಟಿ ಸಪ್ತಮಿ ಗೌಡ ಬಾಲಿವುಡ್ಗೆ ಜಿಗಿದಿದ್ದಾರೆ. ಕಾಂತಾರ ಸಿನಿಮಾದ ಯಶಸ್ಸು ಅವರನ್ನು ಮತ್ತೊಂದು ಹಂತಕ್ಕೆ ಕರೆದೊಯ್ದಿದೆ. `ದಿ ಕಾಶ್ಮೀರ್ ಫೈಲ್ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂಬರುವ ಸಿನಿಮಾ `ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸದ್ಯ ಚೊಚ್ಚಲ ಬಾಲಿವುಡ್ ಸಿನಿಮಾ `ದಿ ವ್ಯಾಕ್ಸಿನ್ ವಾರ್ ಸಿನಿಮಾದ ಶೂಟಿಂಗ್ ನಂತರ ಸಪ್ತಮಿ ಗೌಡ, ಇನ್ನಷ್ಟು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.

 

ಸಂತೋಷ್ ಆನಂದ್ರಾಮ್ ನಿರ್ದೇಶನದಲ್ಲಿ ಕೆಲಸ ಮಾಡಬೇಕು ಎಂಬ ಆಸೆ ನನಗೆ ಬಹಳ ದಿನಗಳಿಂದ ಇತ್ತು. ಅದೀಗ ಈಡೇರುತ್ತಿದೆ. ಕಾಂತಾರ ಸಿನಿಮಾ ಮೂಲಕ ನನ್ನನ್ನು ಇಡೀ ದೇಶಕ್ಕೆ ಪರಿಚಯಿಸಿದ್ದು ಹೊಂಬಾಳೆ FILMS, ಅದೇ ನಿರ್ಮಾಣ ಸಂಸ್ಥೆ, ಮತ್ತೊಂದು ಸಿನಿಮಾದಲ್ಲಿ ನನಗೆ ಅವಕಾಶ ನೀಡಿರುವುದು ಅತಿ ಹೆಚ್ಚು ಖುಷಿ ನೀಡಿದೆ. ಒಳ್ಳೊಳ್ಳೆಯ ಪಾತ್ರಗಳನ್ನು ನಾನು ನಿರೀಕ್ಷೆ ಮಾಡುತ್ತೇನೆ. ಅಂತಹ ಪಾತ್ರ ಚಿತ್ರದಲ್ಲಿದೆ. `ಯುವ ಟೈಟಲ್ ಯೂತ್ಫುಲ್ ಆಗಿದೆ. ಇಂತಹ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ನಿಜಕ್ಕೂ ನಾನು ಅದೃಷ್ಟವಂತೆ

 

 

 

Share this post:

Related Posts

To Subscribe to our News Letter.

Translate »