Sandalwood Leading OnlineMedia

ಒಂದು ಪ್ರೀತಿ ಕಥೆ ಹೇಳುವ ಇಬ್ಬರು ಪ್ರೇಮಿಗಳ ಮಾತಿನ ದೂರದ ಅಂತರ ಸಪ್ತ ಸಾಗರ;

ಸಪ್ತ ಸಾಗರದಾಚೆ ಎಲ್ಲೊ :

ಹುಡುಗಿಯ ಮನದಾಳದ ಮಾತುಗಳನ್ನು ಹೇಳುವ ಟ್ರೆಲರ್ ಮನ ಮಿಡಿಯುವಂತೆ ಮನೊಜ್ಞವಾಗಿದೆ. ಮನ ಮುಟ್ಟುವಂತೆ ಮನ ಹಾತೊರೆಯುವಂತೆ ಮೂಡಿ ಬಂದಿದೆ. ಇದು ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಟ್ರೇಲರ್‌ನಲ್ಲಿ ಬರುವ ಆ ಚಿತ್ರದ ತುಣುಕು, ಆ ಹಳೆಯ ಟೇಪ್ ರೆಕರ‍್ಡರ್ ಆ ಕ್ಯಾಸೆಟ್ ಆ ಸಂಭಾಷಣೆ ಅದೆಲ್ಲಾ ೧೯೮೦ ರಿಂದ ಈ ೨೦೦೦ ನೇ ಇಸವಿಯ ವರೆಗೆ ಇದ್ದಂತಹ ಪ್ರೇಮಿಗಳ ಸ್ವತ್ತು. ಆ ಸಮಯದ ಪ್ರೇಮಿಗಳೂ ಹಾಗೆ ಅವರ ಭಾವಲೋಕವೂ ಹಾಗೆ, ಆಗಿನ ಕಾಲದಲ್ಲಿ ಇದ್ದ ಅತೀ ದೊಡ್ಡ ಟೆಕ್ನಾಲಜಿ ಅಂದ್ರೇ ಈ ಟೇಪ್ ರೆಕರ‍್ಡರ್ ಮತ್ತು ಕ್ಯಾಸಟ್. ಪತ್ರದಲ್ಲಿ,  ಆಗ ಹೇಳಲು ಆಗುತರ‍್ತಲಿಲ್ಲಾ ಮನೆಯವರ ಮುಂದೆ ಅಥವಾ ಎಸ್.ಟಿ.ಡಿ ಬೂತ್‌ಗಳಲ್ಲಿ ಮಾತನಾಡಲಾಗುತ್ತಿರಲಿಲ್ಲಾ. ಆ ಕಾಲದಲ್ಲಿ ಒಂದು ಎಸ್.ಟಿ.ಡಿ ಅಥವಾ ಐ.ಎಸ್.ಡಿ ಪೋನ್ ಕಾಲ್ ಬಹಳ ದುಬಾರಿಯಾಗಿದ್ದವು. ಪತ್ರದಲ್ಲಿ ಬರೆದರೆ ಪತ್ರ ಯಾರಿಗಾದರೂ ಸಿಕ್ಕಿಬಿದ್ದರೆ ಅನ್ನುವ ಭಯ ಇರುತಿತ್ತು. ಎಲ್ಲದಕಿಂತ ಹೆಚ್ಚಾಗಿ ಪತ್ರದಲ್ಲಿ ಧ್ವನಿ ಕೇಳುತ್ತಿರಲಿಲ್ಲಾ. ಆಗ ಎಲ್ಲಾ ಪ್ರೇಮಿಗಳು ತಮ್ಮ ಸಂದೇಶ ಹೇಳಲು ಅತಿಯಾಗಿ ಬಳಸಿಕೊಂಡಿದ್ದೆ ಟೇಪ್ ರೆಕರ‍್ಡರ್. ಈ ಕಾಲದ ತರಹ ಮೊಬೈಲ್‌ಗಳು ಇರಲಿಲ್ಲಾ, ಟೆಲಿಫೋನ್‌ಗಳಿದ್ದರೂ ಅವು ಕೆಲವೇ ಶ್ರೀಮಂತ ಮನೆಯವರ ಸ್ವತ್ತು. ಆ ಕಾಲದಲ್ಲಿನ ಪ್ರೇಮಿಗಳ ಪ್ರೀತಿಯ ಸಂಬಾಷಣೆಗಳು ಈ ಕ್ಯಾಸೆಟ್ಗಳಲ್ಲಿಯೇ ನಡೆಯುತ್ತಿದ್ದವು. ಅವರ ಪ್ರೀತಿಯ ಸಂದೇಶಗಳು ಕ್ಯಾಸೆಟ್‌ಗಳಲ್ಲ್ಲಿಯೇ ರವಾನೆಯಾಗುತ್ತಿದ್ದವು. ಒಂದು ಊರಿನಿಂದ ಒಬ್ಬ ಪ್ರೆಯಸಿ ಅಥವಾ ಪ್ರಿಯತಮ ತನ್ನ ಪ್ರೀತಿ ತುಂಬಿದ ಬಾವನೆಗಳನ್ನು, ತಮ್ಮ ಕನಸುಗಳನ್ನು, ತಮ್ಮ ಮಾತುಗಳನ್ನು ಒಂದು ಕ್ಯಾಸೆಟ್‌ನ ಕಡೆ ರೆಕರ‍್ಡ್ ಮಾಡಿ ಕಳಿಸಿದರೇ ಅದು ಸೈಡ್ ‘ಎ’ ಅದನ್ನು ಕೇಳಿಸಿಕೊಂಡ ಪ್ರೇಯಸಿಯೋ, ಪ್ರಿಯತಮನೋ ಈ ಕಡೆಯಿಂದ ಅದಕ್ಕೆ ಉತ್ತರವಾಗಿ ತಮ್ಮ ಮಾತುಗಳನ್ನು ಕ್ಯಾಸೆಟ್‌ನ ಇನ್ನೊಂದು ಬದಿ ರೆಕರ‍್ಡ್ ಮಾಡಿ ಕಳಿಸುತ್ತಾರೆ ಅದು ಸೈಡ್ ‘ಬಿ’.

ರಕ್ಷಿತ್ ಶೆಟ್ಟಿಯ ಸಪ್ತ ಸಾಗರದಾಚೆ ಎಲ್ಲೋ, ಇದು ಸೈಡ್ ‘ಎ’.
ಕರಾವಳಿಯ ತೀರ, ಸಪ್ತ ಸಾಗರದ ದೂರ, ಸಂವಹನಕ್ಕೊಂದು ರೀಲು ತುಂಬಿದ ಕ್ಯಾಸೆಟ್ಟು, ರೀಲಿನಲ್ಲಿ ಮಾತಿರುತ್ತದೆ ಅದನ್ನು ಕೇಳಲು ಒಂದು ಟೇಪ್ ರೆಕರ‍್ಡರ್ ಬೇಕೇ ಬೇಕು. ಇಲ್ಲದಿದ್ದರೆ ಕ್ಯಾಸೆಟ್ಟಿನ ರೀಲಿನೊಳಗೆ ತುಂಬಿರುವ ಮಾತು ಕೂಡ ಮೌನ ಮೌನ. ಟೇಪ್ ರೆಕರ‍್ಡ್ರ್ ಇದ್ದೂ ಕರೆಂಟ್ ಇಲ್ಲದಿದ್ದಾಗ, ಅಥವಾ ಆ ಟೇಪ್ ರೆಕರ‍್ಡರ್‌ಗೆ ಹಾಕುವ ಶೆಲ್ ಇಲ್ಲದಿದ್ದರೂ ರೀಲಿನೊಳಗೆ ತುಂಬಿದ ಮಾತು ಮೌನ. ಎಷ್ಟೊ ದಿನದಿಂದ ಅವಳ/ಅವನ ಮಾತು ಕೇಳದೆ ಪ್ರೇಮಿಗಳ ಪಡುವ ಪಾಡು, ಅನುಭವಿಸುವ ತೊಳಲಾಟವಿದೆಯಲ್ಲಾ ಅದು ಅನುಭವಿಸಿದ ಆ ಕಾಲದ ಪ್ರೇಮಿಗಳಿಗೆ ಮತ್ತು ಅಂತಹವರನ್ನು ನೋಡುತ್ತಾ ಬೆಳೆದ ಆ ಕಾಲದ ಜನಗಳಿಗೆ ಇವತ್ತೂ ರ‍್ಥವಾಗುತ್ತೆ. ಸಪ್ತ ಸಾಗರದಾಚೆ ಎಲ್ಲೊ ಇದೂ ಒಂಥರಾ ಹಾಗೆ, ಎಂತಹವರನ್ನು ಒಂದು ಕ್ಷಣ ಆ ಕಾಲಘಟ್ಟಕ್ಕೆ ಎಳೆದುಕೊಂಡುಹೊಗಿ ಕೂರಿಸಿಬಿಡುತ್ತೆ. ಮರೆತ ನೆನಪುಗಳನ್ನು ತರಿಸಿ ಭಾವುಕರನ್ನಾಗಿ ಮಾಡುತ್ತೆ, ಕಳೆದ ಕ್ಷಣಗಳು ನೆನಪಿಗೆ ಬಂದು ಕಣ್ಣೀರು ತರಿಸುವುದರಲ್ಲಿ ಅನುಮಾನವೇ ಇಲ್ಲಾ. ಒಂದು ನಿಶ್ಕಲ್ಮಷ ಪ್ರೇಮ, ಒಂದು ಶುದ್ದ ಪ್ರೀತಿ, ಆ ಕಾಲದ ಪ್ರೇಮಿಗಳ ಸರಕುಗಳು. ಅದನ್ನು ಬಳಸಿಕೊಂಡ ಕಥಾನಕಗಳು. ಪ್ರೀತಿಯ ನೆನಪುಗಳನ್ನು ಅವರು ಕಾಪಾಡಿಕೊಂಡು ಬರುವ ರೀತಿ, ಆ ಪ್ರೇಮಿಗಳಿಗೆ ಅವರ ಪ್ರೀತಿಯ ಮೇಲಿರುವ ನಂಬಿಕೆ , ಪ್ರೀತಿಯನ್ನೇ ನಂಬಿಕೊಂಡಿರುವ ಪ್ರೇಮಿಗಳು ಆಗಿನ ಕಾಲದ ಇಂತಹ ಪ್ರೇಮ ಕಥೆಗಳು. ಕೊನೆ ಇಲ್ಲದ ಪ್ರೇಮಕಥೆಗಳ ಸಿನಿಮಾ ಹಿಂದಿನಿಂದಲೂ ಬಂದಿವೆ, ಬರುತ್ತಿವೆ ಮತ್ತು ಬರುತ್ತಿರುತ್ತವೆ. ಒಂದೊಂದು ಕಥೆಯಲ್ಲೂ ಅದರದೇ ಆದ ಒಂದು ಪ್ರೀತಿಯ ಘಮವಿರುತ್ತದೆ, ಆ ಘಮಲು ಚಿತ್ರ ನೊಡಿ ಬಂದಮೇಲೂ ಎಷ್ಟೊ ದಿನ ನಮ್ಮಲ್ಲೆ ಉಳಿದುಬಿಟ್ಟಿರುತ್ತೆ. ಆ ಕಥೆ ನಮ್ಮನ್ನು ಬಹಳ ದಿನಗಳವರೆಗೆ ಕಾಡುತ್ತಿರುತ್ತದೆ, ಆ ಕಾಲ ಘಟ್ಟದ ಪ್ರೀತಿಯ ಪರಿಮಳ ಹಾಗಿರುತ್ತದೆ. ಆ ಪ್ರೇಮದ ಘಮಲು ಮತ್ತು ಅಮಲನ್ನೂ ಸಪ್ತ ಸಾಗರದಾಚೆ ಎಲ್ಲೊ…ಚಿತ್ರದಲ್ಲಿ ಸೆರೆ ಹಿಡಿದಿರುವುದು ಟ್ರೇರ‍್ನಲ್ಲೇ ಗೊತ್ತಾಗುತ್ತಿದೆ. ಇನ್ನೂ ಚಿತ್ರಮಂದಿರಕ್ಕೆ ಹೊಗಿ ಆ ಕಾಲ ಘಟ್ಟದ ಪ್ರೇಮಿಗಳನ್ನೂ ಆ ಪ್ರೇಮಿಗಳು ಅನುಭವಿಸುವ ಪಡಿಪಾಟಲನ್ನು ನೊಡಿಬರಬೇಕು ಅಷ್ಟೆ.

Share this post:

Translate »