ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಬಿಡುಗಡೆಗೂ ಮುನ್ನ ಭಾರಿ ಸುದ್ದಿಯಲ್ಲಿದೆ. ಇದೀಗ ಈ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದ್ದು, ಭಾರಿ ಸದ್ದು ಮಾಡುತ್ತಿದೆ. ‘ಹೋರಾಟ.. ‘ಹೋರಾಟ ಎಂಬ ಸಾಹಿತ್ಯ ದಿಂದ ಕೂಡಿದ ಹಾಡು ಇದೀಗ ವೈರಲ್ ಆಗಿದೆ
*ಜುಲೈ 21 ರಂದು ಬಿಡುಗಡೆಯಾಗಲಿದೆ ಶ್ರೇಯಸ್ ಚಿಂಗಾ ನಟಿಸಿ, ನಿರ್ದೇಶಿಸಿರುವ “ಡೇವಿಡ್”*
ಈ ಹಾಡನ್ನು ಕೇಳಿದ ನೆಟ್ಟಿಗರು ಜೀವನದಲ್ಲಿ ಸೋತು ಗೆಲುವಿನ ದಾರಿ ಹುಡುಕುವ ತವಕದ ಹಾಡಾಗಿದೆ. ಇನ್ನು ಈ ಚಿತ್ರವು ಹೇಗೆ ಇರಬಹುದೆಂದು ನೆಟ್ಟಿಗರು ಊಹಿಸಿದ್ದಾರೆ. ರಕ್ಷಿತ್ ಶೆಟ್ಟಿ ಸಿನಿಮಾಗಳೆಂದರೆ ಅಲ್ಲೊಂದು ರೋಚಕ ಕಥೆ ಇದ್ದೆ ಇರುತ್ತದೆ. ಹೀಗಾಗಿ ‘777 ಚಾರ್ಲಿ’ ಬಳಿಕ ಈ ಚಿತ್ರದ ಮೇಲೂ ನೀರಿಕ್ಷೆ ಹೆಚ್ಚಿಸಿದೆ.
*ಜುಲೈ 21 ರಂದು ಬಿಡುಗಡೆಯಾಗಲಿದೆ ಶ್ರೇಯಸ್ ಚಿಂಗಾ ನಟಿಸಿ, ನಿರ್ದೇಶಿಸಿರುವ “ಡೇವಿಡ್”*
ಈ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿದ್ದೂ, ಕೇಳುಗರಿಗೆ ಮತ್ತೆ ಮತ್ತೆ ಕೇಳಬೇಕನಿಸುತ್ತಿದೆ. ಹೇಮಂತ್ ರಾವ್ ಹಾಗೂ ರಕ್ಷಿತ್ ಶೆಟ್ಟಿ ಕಾಂಬಿನೇಷನ್ನಲ್ಲಿ ಮೂಡಿದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಮೋಡಿ ಮಾಡಿತ್ತು.ಇದೀಗ ಸಪ್ತ ಸಾಗರದಾಚೆ ಎಲ್ಲೋ’ ಮೂಲಕ ಮತ್ತೆ ಈ ಜೋಡಿಗಳು ಮತ್ತೆ ಸಂಚಲನ ಮೂಡಿಸಲಿದ್ದಾರೆ.
ಬಾವನೆಗಳ ಲೋಕದ ಪಯಣಕ್ಕೆ ಕರೆದುಕೊಂಡು ಹೋಗುವಂತಿರುವ ಕಥೆಗೆ ಸೋತು ಹೋದವನಿಗೊಂದು ಸ್ಫೂರ್ತಿ ತುಂಬುವ ಕಾಯಕ ಮಾಡುವಂತಿದೆ ಈ ಹಾಡು , ಈ ಚಿತ್ರದ ಮೇಲೆ ಈ ವರ್ಷ ಭಾರೀ ನಿರೀಕ್ಷೆ ಇದೆ.