ಬಿಗ್ ಬಾಸ್ ಕನ್ನಡ ಸೀಸನ್ 9’ರ ಸ್ಪರ್ಧಿ ಸಾನ್ಯಾ ಐಯ್ಯರ್ ಅವರು 6ನೇ ವಾರದಲ್ಲೇ ಎಲಿಮಿನೇಟ್ ಆಗಿದ್ದಾರೆ. ಕೊನೇ ಹಂತದಲ್ಲಿ ಪ್ರಶಾಂತ್ ಸಂಬರ್ಗಿ ಅವರು ಸೇಫ್ ಆಗಿದ್ದಾರೆ.. ಸಾನ್ಯ ಎಲಿಮಿನೇಷನ್ ನಿಂದ ರೂಪೇಶ್ ಶೆಟ್ಟಿ ಗಳಗಳನೇ ಅತ್ತಿದ್ದಾರೆ. ಇದೀಗ ಸಾನ್ಯ ನಿರ್ಗಮನದಿಂದ ರೂಪೇಶ್ ಕಣ್ಣೀರಿಟ್ಟಿದ್ದಾರೆ. ಸಾನ್ಯ ಮಡಿಲಿನಲ್ಲಿ ತಲೆಯಿಟ್ಟು ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ನಿನ್ನ ನಾನು ತುಂಬ ಮಿಸ್ ಮಾಡಿಕೊಳ್ತೀನಿ. ನನ್ನೊಳಗಿನ ಫೀಲ್ ಬದಲಾಗಿದೆ. ಯಾವತ್ತೂ ಯಾವ ಹುಡುಗಿಗೂ ಇಷ್ಟೊಂದು ಸ್ಲೇಸ್ ಕೊಡುತ್ತೀನಿ ಎಂದುಕೊಂಡಿರಲಿಲ್ಲ. ನನಗೆ ನನ್ನ ಫ್ಯಾಮಿಲಿ ಬಗ್ಗೆ ಪ್ರೀತಿ ಬರುವಂತೆ ಮಾಡಿದ್ದೀಯಾ. ನನ್ನಲ್ಲಿ ಇಷ್ಟೊಂದು ಮೌಲ್ಯ ಬರುವಂತೆ ಮಾಡಿದ್ದಿಯಾ. ನಾನು ಜೀವನವನ್ನು ನೋಡುವ ವಿಧಾನ ಬದಲಾಗಿದೆ.
ಸ್ಪರ್ಧಿಯಾಗಿ ನೀನು ಇಲ್ಲಿ ಸೋತಿರುವೆ, ಆದರೆ ಮನುಷ್ಯಳಾಗಿ ನೀನು ಗೆದ್ದಿದ್ದೀಯಾ. ನೀನು ಮನೆಯಿಂದ ಹೊರಗಡೆ ಹೋದ ಮೇಲೆ ದಯವಿಟ್ಟು ಬದಲಾಗಬೇಡ, ನೀನು ಬದಲಾದರೆ ನಾನು ಬದಲಾಗಿರೋದಿಕ್ಕೆ ಮೌಲ್ಯವೇ ಇರೋದಿಲ್ಲ. ನೀನು ಬಿಗ್ ಬಾಸ್ ಮನೆಯಲ್ಲಿ ತುಂಬ ಮುಖ್ಯ ಆಗಿದ್ದೆ, ನನ್ನ ಜೀವನದಲ್ಲಿ ಕೂಡ ಮುಖ್ಯ ಇರುತ್ತೀಯಾ. ನನ್ನ ಹೃದಯದಲ್ಲಿ ನೀನು ಯಾವಾಗಲೂ ಇರುತ್ತೀಯಾ. ಇದುವರೆಗೂ ನಾನು ಎರಡು ಬಾರಿ ಕಣ್ಣೀರು ಹಾಕಿದ್ದೀನಿ, ಅದು ನಿನ್ನ ವಿಚಾರಕ್ಕೆ, ರೂಪೇಶ್ ಶೆಟ್ಟಿ ಅವರಿಗೆ ಸಾನ್ಯಾ ಅಯ್ಯರ್ ಅವರು ತನ್ನ ಕೈ ಬೆರಳಲ್ಲಿದ್ದ ಉಂಗುರವನ್ನು ಹಾಕಿದ್ದಾರೆ.
“ನಮ್ಮ ಮನೆಯಲ್ಲಿ ಕೂಡ ನಾನು ಊಟ ಮಾಡಿದ್ನ ಇಲ್ಲವಾ ಅಂತ ಕೇಳುತ್ತಿರಲಿಲ್ಲ. ನಾನು ಊಟ ಮಾಡಿಲ್ಲ ಅಂತ ಅವಳು ಊಟ ಮಾಡುತ್ತಿರಲಿಲ್ಲ. ನಾನು ಅವಳಿಗೆ ಗುಡ್‌ಮಾರ್ನಿಂಗ್ ಹೇಳದೆ ಎದ್ದಿರಲಿಲ್ಲ. ನಾನು ಗೆದ್ದಾಗ ಸೆಲೆಬ್ರೇಟ್ ಮಾಡ್ತಿದ್ಳು, ನಾನು ಸೋತಾಗ ನನ್ನ ಪಕ್ಕದಲ್ಲಿ ಇರುತ್ತಿದ್ದಳು. ನನಗೆ ಹುಡುಗಿಯರ ಬಗ್ಗೆ ಏನೂ ಅನಿಸ್ತಿರಲಿಲ್ಲ, ಸಿಂಗಲ್ ಆಗಿರಬೇಕು ಎಂದುಕೊಂಡಿದ್ದೆ.
ಬಿಗ್ ಬಾಸ್‌ನಲ್ಲಿ ನನ್ನ ಲೈಫ್‌ಗೆ ಸಿಕ್ಕಿರುವ ಬೆಸ್ಟ್ ಫ್ರೆಂಡ್ ಅವಳು” ನಾನು ನಿನಗೆ ಸಮಯ ಕೊಡಬೇಕಿತ್ತು. ಆಗಲಿಲ್ಲ, ನಿನಗೆ ನಾನು ಬೇಜಾರು ಮಾಡಿದ್ದರೆ ದಯವಿಟ್ಟು ಕ್ಷಮಿಸಿ. ಪ್ರತಿ ವಾರ ರೆಡ್ ಟೀ ಶರ್ಟ್ ಕಳಿಸು, ಅದರಲ್ಲಿ ಯೆಸ್ ಅಂತ ಇರಲಿ. ನಾನು ಯಾವತ್ತೂ ಅಳೋದಿಲ್ಲ. ಆದರೆ ನಿನಗೋಸ್ಕರ ಎರಡು ಬಾರಿ ಅತ್ತಿದ್ದೇನೆ. ಇದು ಯಾರಿಗೂ ಅರ್ಥವಾಗದೆ ಇರಬಹುದು, ಆದರೆ ನಿನಗೆ ಅರ್ಥವಾಗತ್ತೆ. ಇದು ನನ್ನ ಜೆನ್ಯೂನ್ ಫೀಲಿಂಗ್ ಎಂದು ರೂಪೇಶ್ ಶೆಟ್ಟಿ ಕಣ್ಣೀರು ಹಾಕಿದ್ದಾರೆ. ಬಳಿಕ ರೂಪೇಶ್‌ಗಾಗಿ ಸಾನ್ಯ ರಚಿಸಿದ್ದ ಹಾಡನ್ನ ಹಾಡಿ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.
.