ಎಸ್ ಸ್ಕ್ವೇರ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಸಿದ್ದು ಎಸ್ ನಿರ್ಮಿಸಿ, ನಿರ್ದೇಶಿಸಿರುವ ” ಸಂತೋಷ ಸಂಗೀತ ” ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಪ್ರಮಾಣಪತ್ರ ನೀಡಿದೆ. ಸದ್ಯದಲ್ಲೇ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಒಂದು ಹುಡುಗ ಅಥವಾ ಹುಡುಗಿಯ ಪ್ರತಿಭೆ, ಪ್ರೇರಣೆ, ಚಲ, ಗುರಿ, ಜಾತಕ, ನಂಬಿಕೆ ಹಾಗೂ ಸನ್ನಿವೇಶಗಳ ಆಕರ್ಷಣೆಗೆ ಒಳಪಟ್ಟರೆ ಏನೆಲ್ಲಾ ತೊಂದರೆಯಾಗುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ತೋರಿಸಿದ್ದೇವೆ. ನಮ್ಮ ಚಿತ್ರತಂಡದಿಂದ ಲಕ್ಷಕ್ಕೂ ಅಧಿಕ ಜನರನ್ನು ಸಂಪರ್ಕಿಸಿ ಚಿತ್ರ ವೀಕ್ಷಣೆಗೆ ಆಹ್ವಾನ ನೀಡಲಾಗುವುದು ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಸಿದ್ದು ತಿಳಿಸಿದ್ದಾರೆ.
ಆರ್ನವ್ ವಿನ್ಯಾಸ್, ರಾಣಿ ವರದ್, ದೊಡ್ಡಣ್ಣ, ಅವಿನಾಶ್, ವಾಣಿ, ಲಯಕೋಕಿಲ, ಮಿಮಿಕ್ರಿ ಗೊಪಿ, ಮಡೆನೂರ್ ಮನು, ನಕ್ಷತ್ರ, ಅಮಿತ್, ಲೋಕೇಶ್, ಸೂರ್ಯ, ಅನೀಶ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.