Sandalwood Leading OnlineMedia

ವಿದ್ಯೆ, ದಾನ, ಹರಕೆ, ಪೂಜೆ, ದಾನ ಮತ್ತೊಂದು ಅನೀರೀಕ್ಷಿತ ಆಕ್ಸಿಡೆಂಟ್! Sanketh Trailer review

 

  •  ವಿಕೃತ ಮನಸುಗಳ ಅನಾವರಣ
  • ಬದುಕಿನ ವಿಭಿನ್ನ ಮಜಲುಗಳನ್ನು ಹೇಳುವ ಪ್ರಯತ್ನ
  • ಹುಳ-ಹುಪ್ಪಟ್ಟೆಗಳ ಹಿನ್ನಲೆ ಸಂಗೀತ!
  • ಕುತೂಹಲ ಮೂಡಿಸಿದ `ಲಕ್ಲಯಾ ಬ್ಯಾವರ್ಸಿ’ ಎನ್ನುವ ತುಳು ಭಾಷೆಯ ಮಾತು
  •  ಕರಾವಳಿಯ ಅಪರೂಪದ ಕಥೆ

 

 

ಸಿನಿಮಾದ Trailerಗಳು ಪ್ರೇಕ್ಷಕನಿಗೆ ಥೀಯೆಟರ್ ಬಂದು ಸಿನಿಮಾ ನೋಡಲು ನೀಡುವ ಆಮಂತ್ರಣವಿದ್ದ0ತೆ. ಈ ಆಮಂತ್ರಣವನ್ನು ಸಿನಿಮಾ ಆಸ್ಥೆಯಿಂದ ಮಾಡಿದ್ದೇ ಆದರೆ, ಖಂಡಿತಾ ಪ್ರೇಕ್ಷಕ ಟ್ರೇಲರ್‌ನಿಂದ ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿಕೊಂಡು ಸಿನಿಮಾ ಮಂದಿರಕ್ಕೆ ಬಂದೇ ಬರುತ್ತಾನೆ. ನಿಟ್ಟಿನಲ್ಲಿ ಇತ್ತೀಚಿಗೆ ರಿಲೀಸ್ ಆದ, ಹೊಸ ಆಲೋಚನೆಯನ್ನೇ ಹೊತ್ತ ಹೊಸಬರ ತಂಡದ `ಸಾಂಕೇತ್’ ಚಿತ್ರದ Trailer ಸಾಕಷ್ಟು ಕುತೂಹಲ ಮೂಡಿಸಿದೆ. ಈ ಹಿಂದೆ ಒಂದು ಪುಟ್ಟ ಟೀಸರ್ ಮೂಲಕ ನಿರೀಕ್ಷೆ ಹುಟ್ಟಿಸಿದ್ದ ಈ ಕ್ರಿಯಾಶೀಲ ಚಿತ್ರ ತಂಡ Trailerನಿಂದ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

 

 

“ಏನಾಗಿದೆ ಅವನಿಗೆ, ಸಾಕೇಂತ್ ಯಾರು ಅಂತ?’ ಎಂಬ ಪ್ರಶ್ನೆಯೊಂದಿಗೆ ಆರಂಭವಾಗುವ Trailer, ನೋಡಗುನಲ್ಲಿ ಆರಂಭದಿ0ದಲೇ ಕುತೂಹಲ ಮೂಡಿಸುತ್ತದೆ. ನಂತರದಲ್ಲಿ ಕೊಲೆಯ ಪ್ರಯತ್ನ.. ರಕ್ತದ ಕಲೆಗಳು.. ಇವುಗಳ ಜೊತೆ ಜೊತೆಗೆ ವಿಕೃತ ಮನಸುಗಳ ಅನಾವರಣವನ್ನು ಮಾಡುತ್ತಾ, ವಾಮಾಚರದ ಬಗ್ಗೆ ಹಿಂಟ್ ಕೊಟ್ಟು `ಕೆಂಪು ಪಾದೆ’ ಎಂಬ ಸ್ಥಳದ ಬಗ್ಗೆ ಹೇಳಿ ನೋಡಗನನ್ನೂ ಬೇರೆಯದೇ ಒಂದು ಮನಸ್ಥಿತಿಗೆ ಕೊಂಡೋಯ್ದು ಬಿಡುತ್ತದೆ. ಟೀಸರ್‌ನಲ್ಲಿ ಗಮನಸೆಳೆದಿದ್ದ `ಸಾಂಕೇತ್ ಯಾವುದರ ಸಂಕೇತ? `ಮುಂದೆ ಬರಲಿರುವ ಒಳ್ಳೆ ದಿನಗಳ ಸಂಕೇತ’ ಎಂಬ ಸಂಭಾಷಣೆಯನ್ನು Trailerನಲ್ಲೂ ಬಳಸಿದ್ದು ಅರ್ಥಪೂರ್ಣವೆನಿಸಿದೆ. `ಲಕ್ಲಯಾ ಬ್ಯಾವರ್ಸಿ’ ಎನ್ನುವ ತುಳು ಭಾಷೆಯ ಮಾತುಗಳು ನಿರ್ದೇಶಕರು ತಮ್ಮ ನೇಟಿವಿಟೀಯ ಒಂದು ಅಪರೂಪದ ಕಥೆಯನ್ನು ಸಶಕ್ತವಾಗಿ ತೆರೆಯ ಮೇಲೆ ತಂದಿರುವ ಹಿಂಟ್ ನೀಡಿದ್ದಾರೆ.

 

 

ಒಂದಷ್ಟು ಪಾತ್ರಗಳ ಮೂಲಕ ಸಂತಾನ ಭಾಗ್ಯ ಇಲ್ಲದವರ, ಸಂತಾನ ಭಾಗ್ಯ ಇದ್ದೂ ಬಾಳು ಕಟ್ಟಿಕೊಳ್ಳಲಾಗದೆ ಪರದಾಡುವ.. ಹೀಗೆ ಬದುಕಿನ ವಿಭಿನ್ನ ಮಜಲುಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಕರಿ ರಕ್ತವನ್ನು ಕೈಯಲ್ಲಿ ಮೆತ್ತಿಕೊಂಡು ತೊಟ್ಟಿಲು ತೂಗುವ ದೃಶ್ಯ ನಿಜಕ್ಕೂ ಭೀಕರವಾಗಿದೆ. ಕಡಲ ಕಿನಾರೆಯಲ್ಲಿ `ಅಪಾಯ ವಲಯ ದಾಟಬೇಡಿ’ ಅನ್ನುವ ಫಲಕ, ಸಿನಿಮಾದಲ್ಲಿ ಅದಾಗಲೇ ಒಂದು ಪಾತ್ರ ಅಪಾಯದ ವಲಯವನ್ನು ದಾಟಿದೆ ಎಂಬುದಕ್ಕೆ ಮೆಟಾಫರ‍್ರಾ ಎಂಬುವುದಕ್ಕೇ ಸಿನಿಮಾವನ್ನೇ ನೋಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುವಲ್ಲಿ ಇಡೀ ಚಿತ್ರ ತಂಡ ಗೆದ್ದಿದೆ.

 

 

ವಿದ್ಯೆಯೊಂದನ್ನು ಒಲಿಸಿಕೊಳ್ಳಲು ಮಾಡಿದ ದಾನ, ಹೊತ್ತ ಹರಕೆ, ಮಾಡಿದ ಪೂಜೆ, ಕೊಟ್ಟ ದಾನ.. ಎಲ್ಲಾ ಆದ ಮೇಲೆ ಒಂದು ಆಕ್ಸಿಡೆಂಟ್! ಈ ಒಂದು ಭಾಗ ಇಡೀ ಸಿನಿಮಾದ ಬಗ್ಗೆ ಪ್ರೇಕ್ಷಕನಲ್ಲಿ `ವಾಹ್’ ಫ್ಯಾಕ್ಟರ್ ಕ್ರೀಯೇಟ್ ಮಾಡಿ ಬಿಡುತ್ತದೆ. ಇಳಿ ರಾತ್ರಿ, ಮಬ್ಬು ಗತ್ತಲಿನಲ್ಲಿ ಹಸುಗೂಸಿನ ತೂಗುವ ತೊಟ್ಟಿಲ ಸುತ್ತಾ ದೀಪ ಉರಿಸಿ ಕೂತಿರುವ ಪಾತ್ರ ಒಂದು ವಿಲಕ್ಷಣ ಭಯ ಮೂಡಿಸುತ್ತದೆ. ಈ ದೃಶ್ಯಕ್ಕೆ ಬಳಸಿರುವ ರಾತ್ರಿಯ ಹುಳ-ಹುಪ್ಪಟ್ಟೆಗಳ ಹಿನ್ನಲೆ ಸಂಗೀತ `ಸಾಂಕೇತ್’ ಅನ್ನು ಒಂದು ವಿಭಿನ್ನ ಚಿತ್ರವನ್ನಾಗಿಸಿದೆ. ಕೊನೆಯಲ್ಲಿ, ಬರುವ  OCCULT ELEMENTS ARE TIED WITH REGION’S CULTURE TRADITION  ಒಕ್ಕಣೆ, ಚಿತ್ರದ ಕಥೆಯ ಬಗ್ಗೆ ಕುತೂಹಲ ಮೂಡಿಸುತ್ತದೆ. Jyotsna.K.Raj ನಿರ್ದೇಶನದ ಜೊತೆಗೆ ಸಂಕಲನಕಾರರಾಗಿ, ಸೌಂಡ್ ಡಿಸೈನರ್ ಆಗಿಯೂ ಕಾರ್ಯನಿರ್ವಹಿಸಿರುವುದರಿಂದ Trailer ಸಂಕಲನದಲ್ಲಿ ಶಾರ್ಫ್ನೆಸ್ ಇದೆ, ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಂಟೆAಟ್‌ಗೆ ಬೇಕಾದ ಅದ್ಭುತ ಸೌಂಡ್ ಡಿಸೈನ್ ಕೂಡ ಇಲ್ಲಿದೆ.  Trailerನಲ್ಲಿರುವ ತಾಜಾತಾನ, ವಿಭನ್ನತೆ, ವೇಗ ಸಿನಿಮಾದಲ್ಲೂ ಮುಂದುವರಿದರೆ ನಿಜಕ್ಕೂ `ಸಾಂಕೇತ್’ ಚಿತ್ರ 2024ರ ಒಂದು ಅದ್ಭುತ ಪ್ರಯತ್ನ ಅನ್ನಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ.

 

ಚಿತ್ರದಲ್ಲಿ ಚೈತ್ರ ಶೆಟ್ಟಿ, ವಿಕ್ಕಿ ರಾವ್, ಮೋಹನ್ ಶೆಣಿ, ರೂಪಶ್ರೀ ವರ್ಕಾಡಿ, ರಾಹುಲ್ ಅಮೀನ್, ನಿರೀಕ್ಷಾ ಶೆಟ್ಟಿ, ಸದಾಶಿವ ಅಮೀನ್, ನಿರಿಕ್ಷಾ ರಾಣಿ, ರಜೀತ್ ಕದ್ರಿ ಮತ್ತು ಮೇಘನಾ ರಕ್ಷಿತಾ ಅಭಿನಯಿಸಿದ್ದು, ಚಿತ್ರದ ಜಾನರ್ ಅನ್ನು ಅರ್ಥ ಮಾಡಿಕೊಂಡು ಪಾತ್ರವಾಗಿದ್ದಾರೆ. `Riverstream Studios’ ಬ್ಯಾನರ್‌ನಡಿಯಲ್ಲಿ ನಿರ್ಮಾಣವಾಗಿರುವ `ಸಾಂಕೇತ್’ ಚಿತ್ರಕ್ಕೆ ಪ್ರಕಾಶ್.ವಿ.ರಾವ್ ಸಾಹಿತ್ಯವಿದ್ದು, ಸನತ್ ಕುಮಾರ್ ಸಹಾಯಕ ನಿರ್ದೇಶಕರಾಗಿ ಹಾಗೂ ನಿಶಾನ್ ತೆಲ್ಲಿಸ್ ಪ್ರೊಡಕ್ಷನ್ ಮ್ಯಾನೆಜರ್ ಆಗಿ ಕೆಲಸ ನಿರ್ವಹಿಸಿದ್ದಾರೆ.

 

Share this post:

Related Posts

To Subscribe to our News Letter.

Translate »