ಪ್ರಯೋಗಾತ್ಮಕ, ದೂರದೃಷ್ಟಿಯ ಸಿನಿಮಾಗಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗುತ್ತಿರುವ ಈ ಸಮಯದಲ್ಲಿ, ಇದೇ ಸಾಲಿಗೆ ಸೇರುವ, Jyotsna.K.Raj ನಿರ್ದೇಶನದ `ಸಾಂಕೇತ್’ ಚಿತ್ರ ತನ್ನ ಟೀಸರ್ ಮೂಲಕ ಸಿನಿಮಾದ ಬಗ್ಗೆ ಸಾಕಷ್ಟು ಭರವಸೆ ಮಾಡಿಸಿದೆ. ಟೀಸರ್‌ನ ಆರಂಭದಲ್ಲಿ ಸಿನಿಮಾ ಬ್ಯಾನರ್ ತೋರಿಸುವಲ್ಲಿಯೇ ಕ್ರಿಯಾಶೀಲತೆಯನ್ನು ತೋರಿಸಿರುವ ಚಿತ್ರತಂಡ ಆರಂಭದಲ್ಲಿಯೇ ನೋಡಗನಲ್ಲಿ ಸಿನಿಮಾ ತಂಡದ ಸಿನಿ ಪ್ರೇಮದ ಬಗ್ಗೆ ಗೌರವ ಮೂಡಿಸುತ್ತದೆ.
READ MORE: Mrs.Ashwini Puneeth Rajkumar wins the Chittara Star Achiever Award -2024 ; exclusive images inside
“ಯಾರದು ಸಾ0ಕೇತ್?’ ಎಂಬ ಪ್ರಶ್ನೆಯೊಂದಿಗೆ ಆರಂಭವಾಗುವ ಟೀಸರ್, ನೋಡಗುನಲ್ಲೂ ಟೀಸರ್ ಉದ್ದಕ್ಕೂ ಸಾಕಷ್ಟು ಪ್ರಶ್ನೆಗಳನ್ನು ಬಿತ್ತುತ್ತಾ ಹೋಗುತ್ತದೆ. ಅದೇ ಈ ಟೀಸರ್‌ನ ಶಕ್ತಿ. ನಂತರದಲ್ಲಿ ಬರುವ `ವಿಧಿ’ಯಾಟದ ಸಬ್ಜೆಕ್ಟ್ `ಸಾಂಕೇತ್’ ಒಂದು ಗಟ್ಟಿ ಸಬ್ಜೆಕ್ಟ್ ಇರುವ ಚಿತ್ರ ಎಂಬುದನ್ನು ಬಿಂಬಿಸುತ್ತದೆ. ಹುಲಿವೇಷಧಾರಿಯನ್ನು ಪ್ರೊಫೈಲ್ ಶಾಟ್ ಮೂಲಕ ತೋರಿಸುವ ನಿರ್ದೇಶಕರು, ಅಲ್ಲಲ್ಲಿ ಇದೇ ರೀತಿಯ ವಿಭಿನ್ನ ಆ್ಯಂಗಲ್‌ನ ಶಾಟ್‌ಗಳ ಮೂಲಕ ಕಥೆಯನ್ನು ವಿಭಿನ್ನವಾಗಿ ತರೆಮೇಲೆ ಕಟ್ಟಿಕೊಟ್ಟಿರುವ ಭರವಸೆ ಮೂಡಿಸುತ್ತಾರೆ. Jyotsna.K.Raj ನಿರ್ದೇಶನದ ಜೊತೆಗೆ ಸಂಕಲನಕಾರರಾಗಿ, ಸೌಂಡ್ ಡಿಸೈನರ್ ಆಗಿಯೂ ಕಾರ್ಯನಿರ್ವಹಿಸಿರುವುದು ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ. ಯಾಕೆಂದರೆ ಟೀಸರ್ ಸಂಕಲನದಲ್ಲಿ ಶಾರ್ಫ್ನೆಸ್ ಇದೆ, ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಂಟೆ0ಟ್‌ಗೆ ಬೇಕಾದ ಅದ್ಭುತ ಸೌಂಡ್ ಡಿಸೈನ್ ಇಲ್ಲಿದೆ.
READ MORE: Miss.Chaihra J Achar wins the Chittara Rising Star Award-2024 ; exclusive images inside
ಇಷ್ಟೇ ಅಲ್ಲದೆ, ಒಂದು ನಿಮಿಷ, ಇಪ್ಪತೈದು ಸೆಕೆಂಡ್‌ನ ಟೀಸರ್ `ಫ್ಲಾಟ್-ವಿಷ-ಸಾವು’ ಎಂಬ ಸಂಗತಿಗಳ ಮೂಲಕ ನೋಡುಗನಲ್ಲಿ ಚಿತ್ರದ ಅಸಲಿ ಕಥೆಯ ಬಗ್ಗೆ ಕುತೂಹಲ ಕೆರಳಿಸುವಲ್ಲಿ ಯಶಸ್ವಿಯಾಗುತ್ತದೆ. ರಾತ್ರಿಯಲ್ಲಿ ಸೆರೆಹಿಡಿದ ದೃಶ್ಯಗಳು ರಾಜ್‌ಕಾರ್ತಿಕ್ ಅವರ ಛಾಯಾಗ್ರಹಣದ ಬಗ್ಗೆ ಬೆರಗು ಮೂಡಿಸುತ್ತದೆ. ಛಾಯಾಗ್ರಹಣದ ಜೊತೆಗೆ ಚಿತ್ರಕಥೆ, ಹಿನ್ನಲೆ ಸಂಗೀತ ಮತ್ತು ವಿಎಫ್‌ಎಕ್ಸ್ನಲ್ಲೂ Jyotsna.K.Raj ಅವರ ಕನಸಿಗೆ ಸಾಥ್ ನೀಡಿದ್ದಾರೆ. ಇನ್ನು, `ಮುಂದೆ ಬರಲಿರುವ ಒಳ್ಳೆ ದಿನಗಳ ಸಂಕೇತ’ ಎಂಬ ಸಭಾಷಣೆಯ ಸಾಲುಗಳು, ಚಿತ್ರದಲ್ಲಿ ಉತ್ತಮ ಸಂಭಾಷಣೆಯನ್ನೂ ನಿರೀಕ್ಷಿಸಬಹುದು ಎಂಬುದನ್ನು ಸೂಚಿಸುತ್ತದೆ. ಧಗಧಗನೆ ಹೊತ್ತಿ ಉರಿಯುತ್ತಿರುವ ಒಂದು ಸಣ್ಣ ಕ್ಲಿಪ್ ಚಿತ್ರತಂಡ ಮೈನೂಟ್ ಸಂಗತಿಗಳನ್ನೂ ಗಂಭೀರವಾಗಿ ಪರಿಗಣಿಸಿರೋದು ಗಮನಕ್ಕೆ ಬರುತ್ತದೆ. ಸೈರನ್ ಸೌಂಡ್‌ನೊ0ದಿಗೆ ಮುಗಿಯುವ ಟೀಸರ್, ಕನ್ನಡ ಚಿತ್ರರಂಗಕ್ಕೆ ಒಂದು ಉತ್ತಮ ಚಿತ್ರ `ಆನ್ ದೀ ವೇ’ ಎಂಬುದನ್ನು ಸಾಂಕೇತಿಕವಾಗಿ ಹೇಳಿದಂತಾಗಿದೆ. ಜೊತೆಗೆ ನಿರ್ದೇಶಕರು `ಗರ್ಭಿಣಿ ಹೆಂಗಸಿನ ಕಥೆ’ ಇದು ಎಂಬ ಹಿಂಟ್ ಕೊಡುವ ಮೂಲಕ ಕನ್ನಡ ಚಿತ್ರರಂಗಕ್ಕೊ0ದು ವಿಭಿನ್ನ ಚಿತ್ರ ಜನ್ಮ ತಾಳುವಂತೆ ಮಾಡುತ್ತಾರಾ ಕಾದು ನೋಡಬೇಕಿದೆ.
READ MORE: Mr.Prajwal Devaraj wins the Chittara Readers’ Choice Award-2024 ; exclusive images inside
ಚಿತ್ರದಲ್ಲಿ ಚೈತ್ರ ಶೆಟ್ಟಿ, ವಿಕ್ಕಿ ರಾವ್, ಮೋಹನ್ ಶೆಣಿ, ರೂಪಶ್ರೀ ವರ್ಕಾಡಿ, ರಾಹುಲ್ ಅಮೀನ್, ನಿರೀಕ್ಷಾ ಶೆಟ್ಟಿ, ಸದಾಶಿವ ಅಮೀನ್, ನಿರಿಕ್ಷಾ ರಾಣಿ, ರಜೀತ್ ಕದ್ರಿ ಮತ್ತು ಮೇಘನಾ ರಕ್ಷಿತಾ ಅಭಿನಯಿಸಿದ್ದು, ಚಿತ್ರದ ಜಾನರ್ ಅನ್ನು ಅರ್ಥ ಮಾಡಿಕೊಂಡು ಪಾತ್ರವಾಗಿದ್ದಾರೆ. `ರಿವರ್ ಸ್ಟಿçÃಮ್ ಸ್ಟುಡಿಯೋಸ್’ ಬ್ಯಾನರ್‌ನಡಿಯಲ್ಲಿ ನಿರ್ಮಾಣವಾಗಿರುವ `ಸಾಂಕೇತ್’ ಚಿತ್ರಕ್ಕೆ ಪ್ರಕಾಶ್.ವಿ.ರಾವ್ ಸಾಹಿತ್ಯವಿದ್ದು, ಸನತ್ ಕುಮಾರ್ ಸಹಾಯಕ ನಿರ್ದೇಶಕರಾಗಿ ಹಾಗೂ ನಿಶಾನ್ ತೆಲ್ಲಿಸ್ ಪ್ರೊಡಕ್ಷನ್ ಮ್ಯಾನೆಜರ್ ಆಗಿ ಕೆಲಸ ನಿರ್ವಹಿಸಿದ್ದಾರೆ.