Left Ad
ಯಶ್‌ ನಟನೆಯ ‘ಟಾಕ್ಸಿಕ್’ ಪರಿಣಾಮ: ಬನ್ಸಾಲಿ ನಿರ್ದೇಶನದ ‘ಲವ್ ಅಂಡ್ ವಾರ್’ ರಿಲೀಸ್ ಮುಂದಕ್ಕೆ - Chittara news
# Tags

ಯಶ್‌ ನಟನೆಯ ‘ಟಾಕ್ಸಿಕ್’ ಪರಿಣಾಮ: ಬನ್ಸಾಲಿ ನಿರ್ದೇಶನದ ‘ಲವ್ ಅಂಡ್ ವಾರ್’ ರಿಲೀಸ್ ಮುಂದಕ್ಕೆ

ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಹೊಸ ಸಿನಿಮಾ ಲವ್ ಅಂಡ್ ವಾರ್ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಈ ಸಿನಿಮಾ ಮೊದಲಿಗೆ 2026ರ ಮಾರ್ಚ್ 20ರಂದು ಬಿಡುಗಡೆಯಾಗಬೇಕಾಗಿದ್ದರೂ, ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಅದಕ್ಕೂ ಮುಂಚೆ ಮಾರ್ಚ್ 19ರಂದು ಬಿಡುಗಡೆಯಾಗುತ್ತಿರುವುದರಿಂದ ಬನ್ಸಾಲಿ ಚಿತ್ರತಂಡ ದಿನಾಂಕ ಬದಲಿಸಲು ನಿರ್ಧರಿಸಿದೆ.

ಹೊಸ ವೇಳಾಪಟ್ಟಿಯಂತೆ ಲವ್ ಅಂಡ್ ವಾರ್ ಸಿನಿಮಾ ಈಗ 2026ರ ಆಗಸ್ಟ್ 14ರಂದು, ಸ್ವಾತಂತ್ರ್ಯ ದಿನಾಚರಣೆಯ ಮುನ್ನದ ವೀಕೆಂಡ್‌ನಲ್ಲಿ ಬಿಡುಗಡೆಯಾಗಲಿದೆ.

ಗಂಗೂಬಾಯಿ ಕಾತಿಯಾವಾಡಿ ನಂತರ ಬನ್ಸಾಲಿ ಕೈಗೆತ್ತಿಕೊಂಡಿರುವ ಈ ಪ್ರಾಜೆಕ್ಟ್‌ನಲ್ಲಿ ಆಲಿಯಾ ಭಟ್, ರಣಬೀರ್ ಕಪೂರ್ ಮತ್ತು ವಿಕ್ಕಿ ಕೌಶಾಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಕಾನ್ಸೆಪ್ಟ್‌ನ ಪ್ರೇಮಕಥೆ–ಡ್ರಾಮಾ ಶೈಲಿಯ ಈ ಸಿನಿಮಾದ ಕೆಲವು ದೃಶ್ಯಗಳನ್ನು ಇಟಲಿಯಲ್ಲಿ ಚಿತ್ರೀಕರಿಸುವ ಪ್ಲ್ಯಾನ್‌ ಕೂಡ ಇದೆ ಎಂದು ಮೂಲಗಳು ತಿಳಿಸಿವೆ.

Spread the love
Translate »
Right Ad