Sandalwood Leading OnlineMedia

ನಾಗಿಣಿ ಅವತಾರದಲ್ಲಿ ಸಂಗೀತಾ ಭಟ್​

2011ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಪ್ರೀತಿ ಗೀತಿ ಇತ್ಯಾದಿ’, ‘ಮಾಮೂ ಟೀ ಅಂಗಡಿ’, ‘ದಯವಿಟ್ಟ ಗಮನಿಸಿ, ಎರಡನೇ ಸಲʼ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಗಮನ ಸೆಳೆದ ಸಂಗೀತಾ ಭಟ್ ಈಗ  ಸ್ಯಾಂಡಲ್‌ವುಡ್‌ ಗೆ `ರೂಪಾಂತರ’ ಚಿತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.

 

 

 

ಈಗ ಕಿರುತೆರೆಗೆ ವಿಶೇಷ ಪಾತ್ರದ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ನಾಗಿಣಿ ಅವತಾರದಲ್ಲಿ ಸಂಗೀತಾ ಭಟ್ ಬರುತ್ತಿದ್ದಾರೆ. ಒಂದು ಅತಿಥಿ ಪಾತ್ರ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.

ಈ ಮೊದಲು ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದ ಅವರು ಈಗ ಸ್ಟಾರ್​ ಸುವರ್ಣ ವಾಹಿನಿಯ ‘ಎಡೆಯೂರು ಶ್ರೀ ಸಿದ್ದಲಿಂಗೇಶ್ವರ’ ಸೀರಿಯಲ್​ನಲ್ಲಿ ಚಿಕ್ಕದೊಂದು ಪಾತ್ರ ನಿಭಾಯಿಸಿದ್ದಾರೆ.ಅವರ ಪಾಲಿಗೆ ಈ ಪಾತ್ರ ತುಂಬ ವಿಶೇಷವಾಗಿದೆ. `ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ’ ಸೀರಿಯಲ್‌ನಲ್ಲಿ ವಿಶೇಷ ಪಾತ್ರದಲ್ಲಿ ಅತಿಥಿ ಯಾಗಿ ನಿರ್ವಹಿಸಿದ್ದಾರೆ.

https://www.instagram.com/p/CghNMciJnvZ/

ನಾಗರ ಪಂಚಮಿ ಹಬ್ಬದ ಪ್ರಯುಕ್ತ ಪ್ರಸಾರ ಆಗಲಿರುವ ‘ನಾಗಮಣಿ ರಹಸ್ಯ’ ಎಂಬ ವಿಶೇಷ ಎಪಿಸೋಡ್​ಗಾಗಿ ಸಂಗೀತಾ ಭಟ್​ ಅವರು ಈ ಪಾತ್ರ ಮಾಡಿದ್ದಾರೆ. ಅವರ ಗೆಟಪ್​ ಗಮನ ಸೆಳೆಯುವಂತಿದೆ. ಇದು ಅವರಿಗೆ ಹೊಸ ಅನುಭವ. 3 ಗಂಟೆಗಳ ಮಹಾ ಸಂಚಿಕೆ ಇದಾಗಿದ್ದು ನಾಗಿಣಿಯಾಗಿ ಸಂಗೀತಾ ಭಟ್​ ಕಾಣಿಸಿಕೊಳ್ಳಲಿದ್ದಾರೆ. ಇದರ ಪ್ರೋಮೋ ಬಿತ್ತರವಾಗುತ್ತಿದ್ದು, ಈಗಾಗಲೇ ಹೈಪ್​ ಸೃಷ್ಟಿ ಮಾಡಿದೆ.

 

Share this post:

Related Posts

To Subscribe to our News Letter.

Translate »