Left Ad
ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆಯರಿಗೆ ಸಂದೇಶ ನೀಡಿದ ನಟಿ ಸಂಗೀತಾ ಭಟ್ - Chittara news
# Tags

ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆಯರಿಗೆ ಸಂದೇಶ ನೀಡಿದ ನಟಿ ಸಂಗೀತಾ ಭಟ್

ಸ್ಯಾಂಡಲ್‌ವುಡ್ ನಟಿ ಸಂಗೀತಾ ಭಟ್ (Sangeetha Bhat) ಆರೋಗ್ಯ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತೀಚೆಗೆ “ಮಕ್ಕಳು ಬೇಡ” ಎಂಬ ಹೇಳಿಕೆಯೊಂದಿಗೆ ಸುದ್ದಿಯಲ್ಲಿದ್ದ ಅವರು ಈಗ ತಮ್ಮ ಆರೋಗ್ಯದ ಕುರಿತು ಮಹಿಳೆಯರಿಗೆ ಜಾಗೃತಿ ಮೂಡಿಸುವ ಸಂದೇಶ ನೀಡಿದ್ದಾರೆ.

ಸಂಗೀತಾ ಭಟ್ ಗರ್ಭಾಶಯದೊಳಗೆ ಬೆಳವಣಿಗೆಯಾದ 1.75 ಸೆಂ.ಮೀ. ಉದ್ದದ ಪಾಲಿಪ್‌ನ ಕಾರಣದಿಂದಾಗಿ ಹೈಸ್ಟರೊಸ್ಕೋಪಿಕ್ ಪೊಲಿಫೆಕ್ಟಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಗೆಡ್ಡೆಯಿಂದ ರಕ್ತಸ್ರಾವ, ತೀವ್ರ ನೋವು, ಅನಿಯಮಿತ ಚಕ್ರಗಳು, ಹಾರ್ಮೋನ್ ಅಡಚಣೆ, ಮೊಡವೆಗಳು, ತೂಕ ಹೆಚ್ಚಾಗುವುದು ಮತ್ತು ಕೂದಲು ಉದುರುವಂತಹ ತೊಂದರೆಗಳು ಉಂಟಾಗುತ್ತವೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

“ಈ ಗೆಡ್ಡೆ ಪತ್ತೆಯಾದ ನಂತರ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕೇ ಅಥವಾ ಬೇಡವೇ ಎನ್ನುವ ನಿರ್ಧಾರಕ್ಕೆ ಬರಲು ನನಗೆ ಒಂದು ತಿಂಗಳ ಸಮಯ ಬೇಕಾಯಿತು. ಕೆಲಸದ ಕಮಿಟ್ಮೆಂಟ್‌ಗಳ ನಡುವೆಯೂ ಅದನ್ನು ಮುಂದೂಡುತ್ತಿದ್ದೆ. ಆದರೆ ಇದೀಗ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ನಿಜವಾದ ತೀರ್ಮಾನ ಕೈಗೊಂಡಿದ್ದೇನೆ,” ಎಂದು ಸಂಗೀತಾ ಬರೆದುಕೊಂಡಿದ್ದಾರೆ.

ಅವರು ಮಹಿಳೆಯರಿಗೆ, “ಅನಿಯಮಿತ ರಕ್ತಸ್ರಾವ, ಮುಟ್ಟಿನ ಸಮಯದ ವ್ಯತ್ಯಾಸ ಅಥವಾ ಹಾರ್ಮೋನ್ ಅಡಚಣೆಗಳ ಲಕ್ಷಣ ಕಂಡುಬಂದರೆ ನಿರ್ಲಕ್ಷಿಸಬೇಡಿ. ತಕ್ಷಣ ತಜ್ಞರ ಸಲಹೆ ಪಡೆಯಿರಿ,” ಎಂದು ಸಲಹೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಪತಿ ಸುದರ್ಶನ್ ಜೊತೆ “ಮಕ್ಕಳು ಬೇಡ” ಎಂದು ಹೇಳಿದ ಕಾರಣಕ್ಕೆ ವಿವಾದ ಎದುರಿಸಿದ್ದ ಸಂಗೀತಾ ಭಟ್, ಇದೀಗ ತಮ್ಮ ಆರೋಗ್ಯ ಸಮಸ್ಯೆಯ ಹಿನ್ನಲೆಯಲ್ಲಿ ಆ ನಿರ್ಧಾರಕ್ಕೂ ಇದೇ ಕಾರಣ ಇರಬಹುದೇ ಎನ್ನುವ ಚರ್ಚೆಗಳು ಜೋರಾಗಿವೆ.

Spread the love
Translate »
Right Ad