ಸೆಲೆಬ್ರಿಟಿ ಸ್ಟಾರ್‌ಗಳ ಲೈಫ್ ಬಗ್ಗೆ ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಒಂದಷ್ಟು ಕುತೂಹಲಗಳಿರುತ್ತದೆ. ತೆರೆಯ ಮುಂದೆ ಮಿಂಚುವ ತಮ್ಮ ನೆಚ್ಚಿನ ಸೆಲಬ್ರಿಟಿಗಳು ತೆರೆಯ ಹಿಂದೆ ಹೇಗಿರುತ್ತಾರೆ ಎಂಬ ಒಂದಷ್ಟು ಕುತೂಹಲಗಳು ಅಭಿಮಾನಿಗಳನ್ನು ಸದಾ ಕಾಡುತ್ತಲೇ ಇರುತ್ತವೆ. ಇನ್ನು ಸ್ಲಿಮ್ ಆ್ಯಂಡ್ ಫಿಟ್ ಆಗಿರುವ ತಮ್ಮ ನೆಚ್ಚಿನ ಸ್ಟಾರ್‌ಗಳು ಏನು ತಿಂತಾರೆ, ಯಾವ ಅಡುಗೆ ಇಷ್ಟಪಡುತ್ತಾರೆ, ಅಡುಗೆ ಬಗ್ಗೆ ಅವರಿಗೆಷ್ಟು ಗೊತ್ತು, ಯಾವ ಫುಡ್ ಅವರಿಗೆ ಫೇವರೆಟ್ ಎಂಬ ಕುತೂಹಲವು ಅಭಿಮಾನಿಗಳಲ್ಲಿರುತ್ತದೆ. ಅಭಿಮಾನಿಗಳ ಈ ಕುತೂಹಲವನ್ನು ಕೊಂಚ ಮಟ್ಟಿಗೆ ತಣಿಸುವ ಅಂಕಣವೇ `ಚಿತ್ತಾರ ಸ್ಟಾರ್ ಕಿಚನ್’.
ಶ್ರುತಿ ಪ್ರಕಾಶ್ ಮನೆ ಅಡುಗೆಗೇ ಮಹತ್ವ ನೀಡುತ್ತಾರೆ. ಅದರ ಜೊತೆ ಅಪ್ಪ ತಯಾರಿಸಿದ ಚಾಟ್‌ಗಳು, ಚಾಕೊಲೇಟ್ ಮಿಠಾಯಿ, ಹುಣಸೆ ಅಕ್ಕಿ ಅನ್ನ.. ಎಲ್ಲವನ್ನೂ ಇಷ್ಟ ಪಟ್ಟು ತಿನ್ನುತ್ತಾರೆ. ಇದರ ಜೊತಗೆ ಪಿಜ್ಜಾ, ರವೆ ಉಂಡೆ, ಬೇಸಿನ್ ಉಂಡೆ, ಚೀಸ್ ಶ್ರುತಿಗೆ ಅಚ್ಚು ಮೆಚ್ಚು. ಶೂಟಿಂಗ್ ಇಲ್ಲದ ಸಮಯದಲ್ಲಿ ಶ್ರುತಿ ಅವರು ದಾಲ್, ಅನ್ನ, ಸಬ್ಜಿಯನ್ನು ತಾವೇ ಸಿದ್ಧ ಪಡಿಸುತ್ತಾರೆ. ಇವರಿಗೆ ಊಟದ ಜೊತೆ ಸಲಾಡ್ ಕಡ್ಡಾಯ. ಅವಗಾವಾಗ ಭಾರತೀಯ ಅಡುಗೆಯ ಜೊತೆ ಇಟಾಲಿಯನ್ ಮತ್ತು ಮೆಕ್ಸಿಕನ್ ಪಾಕ ವಿಧಾನಗಳ ಅಡುಗೆಯನ್ನೂ ಮಾಡುತ್ತಾರೆ. ಆದಷ್ಟು ಸಕ್ಕರೆಯಿಂದ ದೂರ ಇರುವ ಇವರು ಖರ್ಜೂರ, ವಾಲ್‌ನಟ್ಸ್ ಇತ್ಯಾದಿಗಳೊಂದಿಗೆ ಆರೋಗ್ಯಕರ ಸ್ಮೂಥಿಗಳನ್ನು ಅವಾಗವಾಗ ಸೇವಿಸುತ್ತಾರೆ.
“ನಾನು ಮಿತವಾಗಿ ಎಲ್ಲ ರೀತಿಯ ಆಹರವನ್ನೂ ತಿನ್ನುತ್ತೇನೆ. ನಾನು ಶುದ್ಧ ಸಸ್ಯಾಹಾರಿ. ನಾನು ಚಪಾತಿಯನ್ನು ಸಂಪೂರ್ಣ ತ್ಯಜಿಸಿದ್ದು, ಸ್ವಲ್ಪ ಕೆಂಪು ಅಕ್ಕಿ ಅಥವಾ ಬಿಳಿ ಅಕ್ಕಿಯ ಅನ್ನದ ಜೊತೆ ಬಹಳಷ್ಟು ತರಕಾರಿಗಳೊಂದಿಗೆ ತಿನ್ನುತ್ತೇನೆ. ಒಂದು ಕಪ್ ದಾಲ್, ಬಹಳಷ್ಟು ಮೊಸರು ಮತ್ತು ಸಲಾಡ್ ನನ್ನ ಇಷ್ಟದ ಆಹಾರ’’ ಎಂದು ತಮ್ಮ ಆಹಾರಕ್ರಮದ ಬಗ್ಗೆ ಹೇಳುತ್ತಾರೆ ಶ್ರುತಿ ಪ್ರಕಾಶ್. ನನ್ನ ಉಪಹಾರದಲ್ಲಿ ಸಾಮಾನ್ಯವಾಗಿ ಹಣ್ಣಿನ ಸ್ಮೂತಿ ಮತ್ತು ಹಣ್ಣುಗಳು ಇದ್ದೇ ಇರುತ್ತವೆ. ಆದಷ್ಟು ನನ್ನ ಡಿನ್ನರ್ ಅನ್ನು ಸಂಜೆ ಏಳರ ಒಳಗೆ ಮುಗಿಸಿರುತ್ತೇನೆ, ಏಕೆಂದರೆ ನೀವು ಆಹಾರವನ್ನು ಚೆನ್ನಾಗಿ ಜೀರ್ಣಿಸಿಕೊಳ್ಳಲು ನಿಮ್ಮ ದೇಹಕ್ಕೆ ಸಮಯವನ್ನು ನೀಡಬೇಕಾಗಿದೆ, ಇದರಿಂದ ನೀವು ಮಲಗಲು ಹೋದಾಗ ನಿಮ್ಮ ದೇಹವು ಸಂಪೂರ್ಣವಾಗಿ ವಿಶ್ರಾಂತಿ ಪಡೆಯುತ್ತದೆ ಮತ್ತು ದೇಹಕ್ಕೆ ಅಗತ್ಯವಿರುವ ದುರಸ್ತಿ ಕೆಲಸದ ಸುಲಲಿತವಾಗಿ ನಡೆಯುತ್ತದೆ.
ನನ್ನ ಸ್ವಂತ ಊಟವನ್ನು ನಾನೇ ತಯಾರಿಸಿಕೊಳ್ಳುವಷ್ಟು ನಾನು ಅಡುಗೆ ಕಲಿತಿದ್ದೇನೆ ಮತ್ತು ನಿಮ್ಮ ದೈನಂದಿನ ಅಡುಗೆ ಮಾಡಲು ಕನಿಷ್ಟ ಎಣ್ಣೆಯನ್ನು ಬಳಸುತ್ತೇನೆ, ಕೆಲವು ಅಡುಗೆಗೆ ಬಹಳಷ್ಟು ಎಣ್ಣೆಯನ್ನು ಬಳಸುತ್ತಾರೆ ಏಕೆಂದರೆ ಆಹಾರವು ವೇಗವಾಗಿ ಬೇಯಿಸುತ್ತದೆ ಮತ್ತು ಅದು ಅವರ ಸಮಯವನ್ನು ಉಳಿಸುತ್ತದೆ ಎಂದು. ಅದರೆ ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಾನು ತುಪ್ಪ ಅಥವಾ ಆಲಿವ್ ಎಣ್ಣೆಯನ್ನು ಸಲಾಡ್‌ಗಳಿಗೆ ಮತ್ತು ಎಳ್ಳಿನ ಎಣ್ಣೆಯನ್ನು ಕೆಲವೊಮ್ಮೆ ಬಳಸುತ್ತೇನೆ. ನನ್ನ ಅಮ್ಮ ಅದ್ಭುತ ಅಡುಗೆಯನ್ನು ಮಾಡುತ್ತಾರೆ ಮತ್ತು ನನಗೆ ಅಡುಗೆಯಲ್ಲಿ ಸಂದೇಹವಿದ್ದಲ್ಲಿ ನಾನು ಕೆಲವೊಮ್ಮೆ ಅವಳಿಗೆ ಕರೆ ಮಾಡುತ್ತೇನೆ ಅಥವಾ `ಈ ಹೊಸ ಪಾಕವಿಧಾನವನ್ನು ಪ್ರಯತ್ನಿಸು’ ಎಂದು ಅವರೇ ನನಗೆ ಸಲಹೆ ನೀಡುತ್ತಾರೆ. ಅಮ್ಮನ ಕೈಯಲ್ಲಿ ಅದೇನೋ ಮ್ಯಾಜಿಕ್ ಇದೆ, ನಾನು ಮನೆಗೆ ಹೋದಾಗ ಹಬ್ಬದಡುಗೆಯನ್ನೇ ಯಾವುದೇ ಆಯಾಸವಿಲ್ಲದ ಅತೀ ಕಡಿಮೆ ಸಮಯದಲ್ಲಿ ಮಾಡಿ ಬಳಸುತ್ತಾರೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಲು, ನೀವು ಏನು ತಿನ್ನುತ್ತೀರಿ ಮತ್ತು ನಿಮ್ಮ ಜೀವನಕ್ರಮಗಳು ಏನು ಎಂಬುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ನಾನು ಮೊದಲು ಜಿಮ್‌ಗೆ ಹೋಗುತ್ತಿದ್ದೆ ಈಗ ಅಷ್ಟಾಂಗ ಯೋಗಕ್ಕೆ ಸೇರಿಕೊಂಡು ನೆಮ್ಮದಿಯಾಗಿದ್ದೇನೆ.