Sandalwood Leading OnlineMedia

ಟಾಲಿವುಡ್​ ಟು ಬಾಲಿವುಡ್​ ಹಾರಲು ಹೊರಟ ಸ್ಯಾಂಡಲ್​​ವುಡ್​ ನಟಿ

ನಟ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂಗೆ ಶ್ರೀಲೀಲಾ ನಟಿಯಾಗಲಿದ್ದಾರಂತೆ. ‘ಡೈಲಾರ್’ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಈ ಸಂಬಂಧ ಶ್ರೀಲೀಲಾ ಜೊತೆ ಮಾತುಕತೆಯೂ ಆಗಿದ್ದು, ಶೀಘ್ರದಲ್ಲೇ ಚಿತ್ರದ ಶೂಟಿಂಗ್​ನಲ್ಲೂ ಪಾಲ್ಗೊಳ್ಳಲಿದ್ದಾರಂತೆ.

ಕನ್ನಡ, ತೆಲುಗು ಸಿನಿಮಾಗಳ ನಂತರ ಸ್ಯಾಂಡಲ್​ವುಡ್​ ನಟಿ ಶ್ರೀಲೀಲಾ ಅವರ ಲಕ್​ ಬದಲಾಗಿದೆ. ಟಾಲಿವುಡ್​ ಬಳಿಕ ಇದೀಗ ಶ್ರೀಲೀಲಾ ಮುಂಬೈ ವಿಮಾನ ಏರಿದ್ದಾರೆ. ಬಾಲಿವುಡ್​ ಪರದೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

News18 Kannada

ಶ್ರೀಲೀಲಾ ಬಾಲಿವುಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಿರಬಿದ್ದಿದ್ದೇ ತಡ ಅಭಿಮಾನಿಗಳು ಸಂತಸಗೊಂಡಿದ್ದಾರೆ. ನಟಿಯ ವೇಗದ ಬೆಳವಣಿಗೆಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ಅಂದಹಾಗೆಯೇ ಶ್ರೀಲೀಲಾ ಬಾಲಿವುಡ್​ನಲ್ಲಿ ಯಾರಿಗೆ ಜೋಡಿಯಾಗುತ್ತಿದ್ದಾರೆ ಗೊತ್ತಾ?.ಇದನ್ನೂ ಓದಿ:ಖಳ ನಟ ಕಾಂಕ್ರೋಚ್ ಸುಧಿಗೆ ಫುಲ್ ಡಿಮ್ಯಾಂಡ್ : ಈಗ ಹೀರೋ ಕೂಡ

ಶ್ರೀಲೀಲಾ ಮತ್ತು ನಟ ಇಬ್ರಾಹಿಂ ಖಾನ್

ನಟ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂಗೆ ಶ್ರೀಲೀಲಾ ನಟಿಯಾಗಲಿದ್ದಾರಂತೆ. ‘ಡೈಲಾರ್’ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಈ ಸಂಬಂಧ ಶ್ರೀಲೀಲಾ ಜೊತೆ ಮಾತುಕತೆಯೂ ಆಗಿದ್ದು, ಶೀಘ್ರದಲ್ಲೇ ಚಿತ್ರದ ಶೂಟಿಂಗ್​ನಲ್ಲೂ ಪಾಲ್ಗೊಳ್ಳಲಿದ್ದಾರಂತೆ.

 ಆಗಸ್ಟ್​ನಿಂದ ಈ ಸಿನಿಮಾದ ಶೂಟಿಂಗ್​ ಪ್ರಾರಂಭವಾಗಿಲಿದ್ದು, ಶ್ರೀಲೀಲಾಗೆ ಉತ್ತಮ ಪಾತ್ರ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.ಇದನ್ನೂ ಓದಿ:ಕೋಮು ಉದ್ವಿಗ್ನತೆ ಆತಂಕ: ‘ಹಮಾರೆ ಬಾರಹ್’ ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ನಿಷೇಧ!

News18 Kannada

ಇನ್ನು ಭಗವಂತ ಕೇಸರಿ, ಗುಂಟೂರು ಖಾರಂ ಸಿನಿಮಾ ಬಳಿಕ ನಟಿಗೆ ಬಾಲಿವುಡ್​ ಬಾಗಿಲು ತೆರೆದಿದೆ. ಅಭಿಮಾನಿಗಳಂತೂ ನಟಿಯನ್ನು ಹಿಂದಿ ಸಿನಿಮಾದಲ್ಲೂ ಕಾಣಲು ಕಾತುರರಾಗಿದ್ದಾರೆ. ಇದಲ್ಲದೆ ನಟಿ ತೆಲುಗಿನ ನಟ ರವಿತೇಜ ಜೊತೆಗೂ ಸಿನಿಮಾ ಒಪ್ಪಿಕೊಂಡಿದ್ದಾರೆ.

Share this post:

Related Posts

To Subscribe to our News Letter.

Translate »