Sandalwood Leading OnlineMedia

ಸಿಂಗಲ್​ ಲೈಫ್​​ಗೆ ಜೆಕೆ ಟಾ ಟಾ -ಬೈ ಬೈ

ಸಿಂಗಲ್​ ಲೈಫ್​​ಗೆ ಜೆಕೆ ಟಾ ಟಾ -ಬೈ ಬೈ

ಕನ್ನಡ ಕಿರುತೆರೆಯಲ್ಲಿ ‘ಅಶ್ವಿನಿ ನಕ್ಷತ್ರ’ ಸೀರಿಯಲ್​ಗೆ ಫಿದಾ ಆಗದವರೇ ಇಲ್ಲ. ಆ ಧಾರಾವಾಹಿ ಪ್ರಸಾರವಾದ ಅಷ್ಟು ದಿನ ಮಿಸ್​ ಮಾಡದೇ ಇಡೀ ಕರ್ನಾಟಕ ಹೆಚ್ಚು ಕುತೂಹಲದಿಂದ ನೋಡಿತ್ತು. ಈ ಧಾರಾವಾಹಿಯಲ್ಲಿ ನಟಿಸಿದ್ದ ಜಯರಾಮ್​ ಕಾರ್ತಿಕ್ ​ಅಲಿಯಾಸ್​ ಜೆಕೆ ಸಿಕ್ಕಾಪಟ್ಟೆ ಫೇಮಸ್​ ಆದರು. ‘ಅಶ್ವಿನಿ ನಕ್ಷತ್ರ’ ಸೀರಿಯಲ್ ಮೂಲಕ ಸೂಪರ್​ ಸ್ಟಾರ್​ ಜೆಕೆ ಎಂದು ಕರೆಯಲು ಎಲ್ಲರು ಶುರುಮಾಡಿದರು. ಇದೀಗ ಜೆಕೆ ಮತ್ತೆ ಸುದ್ದಿಯಲ್ಲಿದ್ದಾರೆ. ಅರೇ ಇವಾಗ್ಯಾವ ಹೊಸ ಸೀರಿಯಲ್​ ಅಂದುಕೊಳ್ಳಬೇಡಿ. ವೈಯಕ್ತಿಕ ವಿಚಾರಕ್ಕೆ ಜಯರಾಮ್​ ಕಾರ್ತಿಕ್​ ಸುದ್ದಿಯಾಗುತ್ತಿದ್ದಾರೆ. ‘ಅಶ್ವಿನಿ ನಕ್ಷತ್ರ’ದಲ್ಲಿ ‘ಹೆಂಡ್ತಿ..’ ಡೈಲಾಗ್ ಮೂಲಕವೇ ಇವರು ಫೇಮಸ್ ಆಗಿದ್ದರು. ಈಗ ಹೆಂಡತಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸಪ್ತಪದಿ ತುಳಿಯುತ್ತಿದ್ದಾರೆ.

ಜೆಕೆ ಅಭಿಮಾನಿಗಳು ಅವರನ್ನು ಕೇಳುತ್ತಿದ್ದ ಪ್ರಶ್ನೆ ಎಂದರೆ, ‘ಯಾವಾಗ ಮದುವೆ ಆಗುತ್ತೀರಿ?’ ಎಂದು. ಈ ಪ್ರಶ್ನೆಗೆ ಜೆಕೆ ಫ್ಯಾಷನ್ ಡಿಸೈನರ್ ಚೆಲುವೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಉತ್ತರಿಸಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಳ್ಳುವ ಮೂಲಕ ಭಾವಿ ಪತ್ನಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ

ಅಂದಹಾಗೆ ಜೆಕೆ ಮದುವೆ ಆಗುತ್ತಿರುವ ಹುಡುಗಿಯ ಹೆಸರು ಅರ್ಪಣ. ವೃತ್ತಿಯಲ್ಲಿ ನುರಿತ ಫ್ಯಾಷನ್ ಡಿಸೈನರ್. ಫ್ಯಾಷನ್ ಲೋಕಕ್ಕೆ ಈಗಾಗಲೇ ಚಿರಪರಿಚಿತ ಆಗಿರುವ ಅಪರ್ಣ, ಸಾಕಷ್ಟು ಮಾಡೆಲ್ ಗಳಿಗೆ ಹೊಸ ರೀತಿಯ ಫ್ಯಾಷನ್ ಡಿಸೈನ್ ಮಾಡಿದ್ದಾರೆ. ಅಲ್ಲದೇ, ಸಿಲೆಬ್ರಿಟಿಗಳ ನೆಚ್ಚಿನ ಡಿಸೈನರ್ ಕೂಡ ಇವರಾಗಿದ್ದಾರೆ.

ತಾವು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅಪರ್ಣ ಸಮಂತ್, ತಮ್ಮಿಬ್ಬರ ಫೋಟೋ ಜೊತೆಗೆ ಲೈಫ್ ಲೈನ್ ಎಂದು ಬರೆದುಕೊಂಡು, ಮದುವೆ ಆಗುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ಜೆಕೆ ಫ್ಯಾಷನ್ ಡಿಸೈನರ್ ಚೆಲುವೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಭಾವಿ ಪತ್ನಿ ಜೊತೆ ಇರುವ ಫೋಟೋ ಹಾಕಿಕೊಳ್ಳುವ ಮೂಲಕ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಜೆಕೆ ಅವರ ಭಾವಿ ಪತ್ನಿ ಕೂಡ ಇದೇ ಫೋಟೋವನ್ನು ಶೇರ್​  ಮಾಡಿಕೊಂಡಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಜೆಕೆ ಮದುವೆ ಆಗುತ್ತಿರುವ ಹುಡುಗಿಯ ಹೆಸರು ಅರ್ಪಣ. ವೃತ್ತಿಯಲ್ಲಿ ನುರಿತ ಫ್ಯಾಷನ್ ಡಿಸೈನರ್. ಫ್ಯಾಷನ್ ಲೋಕಕ್ಕೆ ಈಗಾಗಲೇ ಚಿರಪರಿಚಿತ ಆಗಿರುವ ಅಪರ್ಣ, ಸಾಕಷ್ಟು ಮಾಡೆಲ್ ಗಳಿಗೆ ಹೊಸ ರೀತಿಯ ಫ್ಯಾಷನ್ ಡಿಸೈನ್ ಮಾಡಿದ್ದಾರೆ.

https://www.instagram.com/p/CeK_LrkLWey/

 

Share this post:

Related Posts

To Subscribe to our News Letter.

Translate »