ಕನ್ನಡದ ಯುವ ನಾಯಕ ನಟ ಧನ್ವೀರ್ ತಮ್ಮದೇ ರೀತಿಯಲ್ಲಿ ಮುನ್ನುಗುತ್ತಿದ್ದಾರೆ. ಜಯತೀರ್ಥ ಅವರಂತಹ ಡೈರೆಕ್ಟರ್ ಜೊತೆಗೆ ಕೈವ ಚಿತ್ರ ಮಾಡಿ ವಿಶೇಷವಾಗಿಯೇ ಗಮನ ಸೆಳೆದಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದಲ್ಲಿ ಧನ್ವೀರ್ ಭರವಸೆ ಮೂಡಿಸಿದ್ದರು. ಆ ಭರವಸೆ ದಿನೇ ದಿನೇ ನಿರೀಕ್ಷೆ ಆಗಿದೆ. ಸಿನಿಮಾದಿಂದ ಸಿನಿಮಾಕ್ಕೆ ಅದು ಜಾಸ್ತಿನೇ ಆಗುತ್ತಿದೆ. ವಾಮನ ಸಿನಿಮಾ ಬಗ್ಗೆ ಒಂದು ದೊಡ್ಡ ನಿರೀಕ್ಷೆ ಕೂಡ ಇದೆ. ಇದರ ಮಧ್ಯೆ ಧನ್ವೀರ್ ಹೊಸ ರೀತಿಯ ಸ್ಟೈಲಿಶ್ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಮೂಲಕ ತಾವು ಹೀಗೂ ಕಾಣಬಹುದು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಜೊತೆಗೆ ಭಿನ್ನ ವಿಭಿನ್ನ ಪೋಸ್ ಕೊಟ್ಟು ಹೆಚ್ಚು ಗಮನ ಸೆಳೆದಿದ್ದಾರೆ.
ಧನ್ವೀರ್ ಸಖತ್ ಲುಕ್ ಮಸ್ತ್ ಫೋಸ್..!
ಧನ್ವೀರ್ ಮೊದಲ ಸಿನಿಮಾದಲ್ಲಿಯೇ ವಿಭಿನ್ನವಾಗಿಯೇ ಕಾಣಿಸಿಕೊಂಡ್ರು. ಕನ್ನಡದ ಮತ್ತೊಬ್ಬ ಭರವಸೆಯ ಹೀರೋ ಅನ್ನುವಂತೆ ಮಾಡಿದ್ದರು. ಅದು ಈಗಲೂ ಮುಂದುವರೆ ಇದೆ. ಕೈವ ಚಿತ್ರದ ಅಭಿನಯ ಈ ನಟನ ಹೊಸ ರೀತಿಯ ನೋಡುವಂತೆನೂ ಮಾಡಿದೆ.
ಕೈವ ಸಿನಿಮಾ ಆದ್ಮೇಲೆ ಇನ್ನು ಎರಡು ಪ್ರೊಜೆಕ್ಟ್‌ಗಳಿವೆ. ಆ ಸಿನಿಮಾಗಳಲ್ಲಿ ಒಂದು ಕಂಪ್ಲೀಟ್ ಆಗಿದೆ. ಇನ್ನೂ ಒಂದು ಫಿಲ್ಮಿಂಗ್ ಅನ್ನೋ ಮಾಹಿತಿ ಸಿಗುತ್ತದೆ. ಇದರ ಮಧ್ಯೆ ಧನ್ವೀರ್ ಹೊಸ ರೀತಿಯ ಫೋಟೋ ಶೂಟ್‌ಗಳನ್ನ ಕೂಡ ಮಾಡಿಸುತ್ತಾರೆ. ಹಾಗೆ ಈಗ ಮಾಡಿಸಿರೋ ಫೋಟೋ ಶೂಟ್ ಸ್ಪೆಷಲ್ ಆಗಿಯೇ ಇದೆ.
ಧನ್ವೀರ್ ದಾಸನ ಗರಡಿಯಲ್ಲಿ ಪಳಗಿದ ಮಚ್ಚು.!
ಧ್ವನೀರ್ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ತುಂಬಾನೆ ಸ್ಟೈಲಿಶ್ ಆಗಿಯೇ ಹೊಳೆಯುತ್ತಿದ್ದಾರೆ. ಸಡನ್ ಆಗ ನೋಡಿದ್ರೆ ಯಾರು ಅನ್ನೋದು ತಿಳಿಯೋದಿಲ್ಲ. ಅಷ್ಟು ಸ್ಪೆಷಲ್ ಆಗಿಯೇ ಧನ್ವೀರ್ ಕಾಣಿಸುತ್ತಿದ್ದಾರೆ. ಒಳ್ಳೆ ಡ್ರೆಸ್ ಮತ್ತು ಒಳ್ಳೆ ಪೋಸ್ ಅಂತೀವಲ್ಲ. ಆ ರೀತಿಯಲ್ಲಿಯೇ ಇಡೀ ಫೋಟೋ ಶೂಟ್ ಇವೆ.
ಇದನ್ನ ನೋಡಿದವರು ತಮ್ಮದೇ ರೀತಿಯಲ್ಲಿ ಬಣ್ಣಿಸಿದ್ದಾರೆ. ಅದ್ಯಾರೋ ಒಂದು ಲೈನ್ ಬರೆದಿದ್ದಾರೆ. ಇದು ಬೇರೆ ರೀತಿನೇ ಇದೆ. ಅದು ಹೀಗಿದೆ ಓದಿ…“ಸದಾಶಿವನಗರ AK 47 ಗೆ ಟಕ್ಕರ್ ಕೊಡೋಕೆ, ದಾಸನ ಗರಡಿಲಿ ಪಳಗಿರೋ ಮಚ್ಚು” ಇದು ಬೇರೆ ರೀತಿಯ ಮೀನಿಂಗ್ ಕೂಡ ಕೊಡುತ್ತಿದೆ ಬಿಡಿ
ದಾಸ ದರ್ಶನ್ ಜೊತೆಗೆ ಕಾಣಿಸೋ ಧನ್ವೀರ್..!
ನಾಯಕ ನಟ ದಾಸ ದರ್ಶನ್ ಗೆಳೆಯರ ಬಳಗ ದೊಡ್ಡಮಟ್ಟದಲ್ಲಿಯೇ ಇದೆ. ದರ್ಶನ್ ಜೊತೆಗೆ ಕಾಣಿಸಿಕೊಳ್ಳುವ ಈ ಗೆಳೆಯರ ಬಳಗದಲ್ಲಿ ಧನ್ವೀರ್ ಕೂಡ ಇದ್ದಾರೆ. ಸಾರ್ವಜನಿಕವಾಗಿಯೇ ದರ್ಶನ್ ಜೊತೆಗೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ತಾರೆ. ಹಾಗಾಗಿಯೇ ದರ್ಶನ್ ಗರಡಿಯ ಹುಡುಗು ಅನ್ನೋರು ಇದ್ದಾರೆ.