ನಿರ್ಜನ ಪ್ರದೇಶಕ್ಕೆ ಹೋಗುವುದು ಒಳ್ಳೆಯದಲ್ಲ ಎಂದು ’ಸಂಚಿನ ಸುಳಿಯಲಿ’ ಚಿತ್ರದ ಸಂದೇಶದಲ್ಲಿ ಹೇಳಲಿದೆ. ಭಾನುವಾರದಂದು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಸ್ಟಾರ್ ನಿರ್ದೇಶಕ ನಂದಕಿಶೋರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಧರ್ಮಸ್ಥಳದ ರಿಯಲ್ ಎಸ್ಟೇಟ್ ಉದ್ಯಮಿ ಕೆ.ಎನ್.ನಾಗೇಗೌಡ್ರು ಮತ್ತು ಮೈಸೂರಿನ ಫ್ಯಾಶನ್ ಡಿಸೈನರ್ ಹಂಸರವಿಶಂಕರ್ ಜಂಟಿಯಾಗಿ ಮಾನ್ಯ ಕ್ರಿಯೇಶನ್ಸ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ.
ವಿಭಿನ್ನ ಕಥಾವಸ್ತುವಿನ, ಮಹಿಳಾ ಪ್ರಧಾನ ಚಿತ್ರ ಪದ್ಮಾವತಿ
ಅನಿಲ್‌ಮೂಡಲಗಿ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ’ಅಚಲ’ ’ಯಾರವಳು’ ಹಾಗೂ ಬಿಡುಗಡೆಯಾಗಬೇಕಾದ ಎರಡು ಚಿತ್ರಗಳಿಗೆ ನಿರ್ದೇಶನ ಮಾಡಿರುವ ಚನ್ನರಾಯಪಟ್ಟಣದ ಪ್ರಮೋದ್.ಎಸ್.ಆರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 2014ರಂದು ಮೈಸೂರಿನಲ್ಲಿ ನಡೆದ ಘಟನೆಯೊಂದು ದಿನಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಅದರ ಏಳೆಯನ್ನು ತೆಗೆದುಕೊಂಡು ನಿರ್ದೇಶಕರು ಕಥೆಯನ್ನು ಏಣೆದಿದ್ದಾರೆ.
small screen to Bollywood; ಬೆಟ್ಟದಷ್ಟು ಅವಕಾಶಗಳ ನಿರೀಕ್ಷೆಯಲ್ಲಿ ಕೃತಿ ಬೆಟ್ಟದ್
ಶೀರ್ಷಿಕೆ ಹೇಳುವಂತೆ ಪ್ರೀತಿಯಲ್ಲಿ ಮುಳುಗಿದ ಕಾಲೇಜು ಹುಡುಗರ ತಂಡವೊಂದು ನಿರ್ಜನ ಪ್ರದೇಶಕ್ಕೆ ತೆರೆಳುತ್ತಾರೆ. ಅಲ್ಲಿಗೆ ಹೋದಾಗ ಸಂಚಿನ ಸುಳಿಯಲ್ಲಿ ಸಿಲುಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹುಡುಗ ಹುಡುಗಿಯರ ಪರಿಸ್ಥಿತಿ ಏನಾಗುತ್ತದೆ. ಅಲ್ಲಿಂದ ತಪ್ಪಿಸಿಕೊಂಡು ಬರುತ್ತಾರಾ? ಅದನ್ನು ಭೇದಿಸುತ್ತಾರಾ? ಎಂಬುದು ಒಂದು ಏಳೆಯ ಸಾರಾಂಶವಾಗಿದೆ.
’ಪುಟ್ಟಕ್ಕನ ಮಕ್ಕಳು’ ಧಾರವಾಹಿ ಖ್ಯಾತಿಯ ಪವನ್‌ಕುಮಾರ್ ನಾಯಕ. ’ಕಿನ್ನರಿ’ ಬಿಗ್ ಬಾಸ್ ಸ್ಪರ್ಧಿ ಭೂಮಿಶೆಟ್ಟಿ ನಾಯಕಿ. ಗೆಳಯನಾಗಿ ನವೀನ್, ಸ್ವಪ್ನಶೆಟ್ಟಿಗಾರ್ ಮತ್ತೋಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಶೋಭರಾಜ್, ಕಿಲ್ಲರ್‌ವೆಂಕಟೇಶ್ ಹಾಗೂ ಹೆಸರು ಮಾಡಿರುವ ಪೋಷಕ ಕಲಾವಿದರೊಂದಿಗೆ ಮಾತು ಕತೆ ನಡೆಯುತ್ತಿದೆ.
ಶರ್ಮಿಳಾ ಮಾಂಡ್ರೆ ಹೊಸ ಫೋಟೋಶೂಟ್: ಈ ಸುಂದರಿಯ ಅಂದಕ್ಕೆ ಮನಸೋಲೋದು ಪಕ್ಕಾ
ಖಚಿತವಾದ ನಂತರ ಮಾಹಿತಿ ನೀಡಲಾಗುವುದು. ಕಥೆಗ ಅನುಗುಣವಾಗಿ ಶೇಕಡ 90 ಚಿತ್ರೀಕರಣವನ್ನು ಕಾಡಿನ ಸ್ಥಳವಾದ ಉಡುಪಿ, ಉಳಿದುದನ್ನು ಬೆಂಗಳೂರು ಸುತ್ತಮುತ್ತ ಎರಡು ಹಂತದಲ್ಲಿ ನಡೆಸಲಾಗುವುದು. ಮೂರು ಹಾಡುಗಳಿಗೆ ಕೆವೀನ್.ಎಂ ಸಂಗೀತ, ವಿನೋದ್.ಆರ್ ಛಾಯಾಗ್ರಹಣ ಚಿತ್ರಕ್ಕಿದೆ. ಅಂದುಕೊಂಡಂತೆ ಆದರೆ ಸಿನಿಮಾವನ್ನು ಡಿಸೆಂಬರ್‌ದಲ್ಲಿ ಬಿಡುಗಡೆ ಮಾಡಲು ತಂಡವು ಯೋಜನೆ ರೂಪಿಸಿಕೊಂಡಿದೆ.