ಹಾಟ್ ಅವತಾರದಲ್ಲಿ ಸ್ಯಾಂಡಲ್ವುಡ್ ಬೆಡಗಿ , ಪಡ್ಡೆ ಹುಡುಗರ ನಿದ್ದೆ ಕದ್ದ ಸಂಯುಕ್ತಾ ಹೊರನಾಡು
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಸಂಯುಕ್ತಾ, ಗ್ಲಾಮರಸ್ ಫೋಟೋಗಳನ್ನು ಹರಿಬಿಡುವ ಸಂಚಲನ ಸೃಷ್ಟಿಸುತ್ತಿದ್ದಾರೆ.
ಸ್ಯಾಂಡಲ್ವುಡ್ ಬೆಡಗಿ ಸಂಯುಕ್ತಾ ಹೊರನಾಡು ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಬಂಧುಬಳಗ ಹಾಗೂ ಅಭಿಮಾನಿಗಳಿಂದ ಶುಭಾಯಗಳ ಮಹಾಪೂರವೇ ಹರಿದು ಬರುತ್ತಿದೆ. ಸದ್ಯ ಸಂಯುಕ್ತಾ, ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್ನಲ್ಲಿ ಬೀಡು ಬಿಟ್ಟಿದ್ದು, ಹುಟ್ಟುಹಬ್ಬದ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದಾರೆ.
ನಟಿ ಸಂಯುಕ್ತಾ ಆಗಾಗಾ ಅಭಿಮಾನಿಗಳ ಜತೆ ಸಂವಹನವನ್ನು ನಡೆಸುತ್ತಿರುತ್ತಾರೆ. ಸಂಯುಕ್ತಾ ಅವರು ಫ್ರೆಂಡ್ಸ್ ಜತೆ ಮಾಲ್ಡೀವ್ಸ್ಗೆ ಹಾರಿದ್ದಾರೆ. ಅಲ್ಲಿನ ಪ್ರಕೃತಿಯ ಜೊತೆಗೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಕಡಲ ಕಿನಾರೆಯಲ್ಲಿ ಮಿಂದೇಳುತ್ತಿದ್ದಾರೆ. ಈ ಹುಟ್ಟುಹಬ್ಬವನ್ನು ತುಂಬಾ ಸ್ಮರಣೀಯವಾಗಿಸಿರುವ ಸಂಯುಕ್ತಾ, ಅದರ ಜತೆಗೆ ಅಭಿಮಾನಿಗಳ ಮೈಬಿಸಿಯನ್ನು ಏರಿಸಿದ್ದಾರೆ.
ಹರಿಬಿಟ್ಟಿರುವ ಹಾಟ್ ಫೋಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.
ಹೌದು, ಹಾಟ್ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಕನ್ನ ಹಾಕಿದ್ದಾರೆ. ಮಾಲ್ಡೀವ್ಸ್ನ ಕಡಲ ಕಿನಾರೆಯಲ್ಲಿ ಬಿಕಿನಿ ಉಡುಗೆಯಲ್ಲಿ ಸಂಯುಕ್ತಾ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ, ಫೇಸ್ಬುಕ್, ಟ್ವಿಟ್ಟರ್ ನಲ್ಲಿ ಹರಿಬಿಟ್ಟಿರುವ ಹಾಟ್ ಫೋಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.
ಸಂಯುಕ್ತಾ ಅವರ ಮಾದಕ ನೋಟಕ್ಕೆ ಅಭಿಮಾನಿಗಳು ಕಳೆದುಹೋಗಿದ್ದು, ಕಾಮೆಂಟ್ಗಳ ಸುರಿಮಳೆ ಜತೆಗೆ ಲೈಕ್ಸ್ ಮಹಾಪೂರವನ್ನು ಹರಿಸುತ್ತಿದ್ದಾರೆ.