ಸದ್ಯ ಸ್ಯಾಂಡಲ್ವುಡ್ನಲ್ಲಿ ಸಂಪದಾ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ಖಡಕ್ ವಿಲನ್ ಆಗಿ ಮಿಥುನ ರಾಶಿ ಸೀರಿಯಲ್ನಲ್ಲಿ. ಬಳಿಕ ಸಿನಿಮಾರಂಗಕ್ಕೆ ಬಂದಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಮಾತ್ರವಲ್ಲ ತೆಲುಗಿನಲ್ಲೂ ನಟಿಸಿದ್ದಾರೆ. ಈ ಹಿಂದೆ ನಿಖಿಲ್ ಕುಮಾರಸ್ವಾಮಿ ಅವರ ರೈಡರ್ ಮೂಲಕ ನಾಯಕಿಯಾಗಿ ಬಂದಿದ್ದ ಸಂಪದಾ ಕರಾವಳಿಯಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯ ಯುವನಿಗೆ ನಾಯಕಿಯಾಗಿದ್ದು, ಚಿತ್ತಾರದೊಂದಿಗೆ ಮಾತನಾಡಿದ್ದಾರೆ.
* ಯುವ `ಎಕ್ಕಾ’ ಸಿನಿಮಾಗೆ ನೀವು ಆಯ್ಕೆಯಾಗಿದ್ದೇಗೆ..?
`ಕಾರ್ತಿಕ್ ನನ್ನನ್ನ ರೆಫರ್ ಮಾಡಿದ್ದು. ಇನ್ಸ್ಟಾಗ್ರಾಂನಲ್ಲಿ ನನ್ನ ನೋಡಿ, ಒಂದು ಮೀಟಿಂಗ್ ಮಾಡಿದರು. ಆ ಸಿನಿಮಾಗೆ ನಾನು ಸೂಟ್ ಆಗ್ತೀನಿ ಅಂತ ಹೇಳಿ ಸೆಲೆಕ್ಟ್ ಮಾಡಿಕೊಂಡರು. ಈ ಸಿನಿಮಾದಲ್ಲಿ ನನ್ನ ಪಾತ್ರ ತುಂಬಾ ಯೂನಿಕ್ ಆಗಿದೆ. ಅದು ನಂಗೆ ಖುಷಿಕೊಟ್ಟ ವಿಚಾರ. ಬೇರೆ ಸಿನಿಮಾದಲ್ಲಿ ಬಂದಿಲ್ಲದೆ ಇರುವಂತಹ ಪಾತ್ರ ಅದು. ರಾಹುಲ್ ಪದಕಿ ಅವರದ್ದು ಪಾತ್ರಗಳ ಆಯ್ಕೆಯಲ್ಲಿ ಒಂದು ಎಮೋಷನಲ್ ಡೆಪ್ತ್ ಇರುತ್ತದೆ. ಅದೇ ಥರ ನನ್ನ ಪಾತ್ರದಲ್ಲೂ ಇದೆ. ನನ್ನದು ಯುವ ಅವರ ಜೊತೆಗೆ ಹೆಚ್ಚು ಟ್ರಾವೆಲ್ ಆಗುವಂಥ ಪಾತ್ರ’
* ಸೀರಿಯಲ್ನಲ್ಲಿ ನೆಗೆಟಿವ್ ಪಾತ್ರ ಮಾಡಿ.. ಈಗ ಸಿನಿಮಾಗಳಲ್ಲಿ ಲೀಡ್ ರೋಲ್..!
`ನಾನು ಸೀರಿಯಲ್ ಮಾಡಿ ಐದು ವರ್ಷ ಆಗೋಯ್ತು. ಅದಾದ ಮೇಲೆ ಒಂದು ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಂಡು ಓದುವುದಕ್ಕೆ ಅಂತ. ಈ ವರ್ಷವೇ ನಾನು ಪ್ರಾಪರ್ ಆಗಿ ಸಿನಿಮಾ ಕಡೆಗೆ ಗಮನ ಕೊಡುತ್ತಿರುವುದು. ಈ ವರ್ಷ ಕರಾವಳಿ, ಎಕ್ಕ, ತೆಲುಗಿನಲ್ಲೂ ಒಂದು ಸಿನಿಮಾ ವiಡ್ತಾ ಇದ್ದೀನಿ’
* `ಎಕ್ಕಾ’ ಸೆಟ್ಗೆ ಯಾವಾಗಿಂದ ಎಂಟ್ರಿ..?
`ಈಗಾಗಲೇ ಶೂಟಿಂಗ್ ನಡೆಯುತ್ತಿದೆ. ಬಟ್ ನನ್ನ ಪೋಷನ್ ಡಿಸೆಂಬರ್ ತಿಂಗಳಲ್ಲಿ ಶುರುವಾಗುತ್ತೆ. ಸೆಟ್ಗೆ ಹೋಗುವುದಕ್ಕೂ ಮುನ್ನ ಒಂದಿಷ್ಟು ತಯಾರಿ ಅಂತು ಮಾಡಿಕೊಳ್ಳುತ್ತಾ ಇದ್ದೀನಿ. ಸ್ಕಿçಪ್ಟ್ ರೀಡಿಂಗ್ಗೆ ಕೂತುಕೊಳ್ಳುತ್ತೀನಿ. ಈಗ ಸದ್ಯಕ್ಕೆ ಕರಾವಳಿ ಶೂಟಿಂಗ್ ಇರುವುದರಿಂದ ಮಂಗಳೂರಿನಲ್ಲಿದ್ದೀನಿ. ಇದನ್ನ ಮುಗಿಸಿ ಹೋದ ಕೂಡಲೇ ಯಕ್ಕಾ ಶುರು ಮಾಡ್ತೀನಿ. ಈಗಾಗಲೇ ಸ್ಟೋರಿ ಗೊತ್ತಿರುವ ಕಾರಣ, ಒಂದಷ್ಟು ಐಡಿಯಾಸ್ ಇದೆ. ಎಕ್ಸ್ಟ್ರಾ ವರ್ಕ್ ಶಾಪ್ ಇಲ್ಲದೆ ಇದ್ದರು, ಸ್ಟೋರಿ ಲೈನ್ ಹಾಗೂ ಸ್ಕಿçÃನ್ ಪ್ಲೇ ಬಗ್ಗೆ ಒಂದು ಕ್ಲಾರಿಟಿ ಇದೆ.’
* `ಎಕ್ಕಾ’ ಬಿಗ್ ಪ್ರೊಡಕ್ಷನ್ ಹೌಸ್.. ದೊಡ್ಮನೆ ಕುಡಿ.. ಅವಕಾಶ ಬಂದಾಗ ನಿಮ್ಮ ರಿಯಾಕ್ಷನ್..?
`ನಾನು ಆಕ್ಚುಲಿ ತುಂಬಾ ಖುಷಿಯಾಗಿದ್ದೀನಿ. ಇವರನ್ನೆಲ್ಲಾ ಮೀಟ್ ಮಾಡಿದಾಗಲೂ ತುಂಬಾ ಖುಷಿ ಪಟ್ಟೆ. ನೈಸ್ ಪೀಪಲ್. ಫಸ್ಟ್ ಮೀಟಿಂಗ್ನಲ್ಲಿಯೇ ಕಂಫರ್ಟ್ ಝೋನ್ ಕ್ರಿಯೇಟ್ ಆಯ್ತು. ಇದಕ್ಕೆ ನಾನೇ ಹೀರೋಯಿನ್ ಎಂದು ಗೊತ್ತಾದಾಗ ಇನ್ನು ಖುಷಿಯಾಯ್ತು. ದೊಡ್ಮನೆಯಿಂದ ಏನನ್ನ ಎಕ್ಸ್ಪೆಕ್ಟ್ ಮಾಡ್ತೀವಿ ಅದೇ ಥರ ಸಿನಿಮಾ ಇದೆ. ಫ್ಯಾನ್ಸ್ ಅಂತು ಖಂಡಿತ ಖುಷಿ ಪಡ್ತಾರೆ. ಜಾಕಿ ಥರ ಸಿನಿಮಾದ ರೀತಿ ಬರುತ್ತೆ. ಒಂದೊಳ್ಳೆ ಮೆಸೇಜ್ ಖಂಡಿತ ಸಿಗುತ್ತೆ. ಅದರಲ್ಲೂ ಯುವಕರಿಗೆ’
ಸಂಪದಾಗೆ ಈಗಾಗಲೇ ಹಲವು ಸಿನಿಮಾಗಳಿಂದ ಆಫರ್ ಬರುತ್ತಿದೆ. ಸಂಪದಾ ಕೂಡ ಒಳ್ಳೊಳ್ಳೆ ಕಥೆಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಇನ್ನಷ್ಟು ಸಿನಿಮಾಗಳು ಅವರ ಪಾಲಾಗಲಿ ಎಂದೇ ಚಿತ್ತಾರವೂ ಬಯಸುತ್ತದೆ.