ಫೀನಿಕ್ಸ್ ಪ್ರೊಡಕ್ಷನ್ ಬ್ಯಾನರ್ ನಡಿ ಅನಿಲ್ ರಾಜ್ ಸಂಕೇತ್ ಹಾಗೂ ಉಮೇಶ್ ಎಲ್ ಧರ್ಮಶಿ ನಿರ್ಮಾಣದಲ್ಲಿ ಮೂಡಿಬಂದಿರುವ ‘ಸಂಭ್ರಮ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಫೆಬ್ರವರಿ 24ರಂದು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಸಿನಿಮಾ ತಂಡ ಚಿತ್ರದ ಪ್ರಾಮಿಸಿಂಗ್ ಟ್ರೇಲರ್ ಬಿಡುಗಡೆ ಮಾಡಿ ಎಲ್ಲರ ಗಮನ ಸೆಳೆಯುತ್ತಿದೆ.
ಕೋಟಿಜನರ ಮನಮುಟ್ಟಿದೆ “ಜ್ಯೂಲಿಯೆಟ್ 2” ಚಿತ್ರದ ಬಾಂಧವ್ಯದ ಹಾಡು
ಮ್ಯೂಸಿಕಲ್ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಟ್ರೇಲರ್ ಬಿಡುಗಡೆಯಲ್ಲಿ ವಿಶೇಷತೆ ಮೆರೆದಿದೆ ಚಿತ್ರತಂಡ. ‘ಸಂಭ್ರಮ’ ಮ್ಯೂಸಿಕಲ್ ರೋಮ್ಯಾಂಟಿಕ್ ಯೂತ್ ಫುಲ್ ಎಂಟರ್ಟೈನರ್ ಚಿತ್ರ. ರಂಗಭೂಮಿ ಪ್ರತಿಭೆ ಶ್ರೀ ಸಂಭ್ರಮ ಈ ಚಿತ್ರದ ಸೂತ್ರಧಾರ. ಶ್ರೀ ಸಂಭ್ರಮ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ. ಮೊದಲ ಸಿನಿಮಾದಲ್ಲೇ ಸಾಕಷ್ಟು ಪ್ರಯೋಗಗಳನ್ನು ನಿರ್ದೇಶಕರು ಮಾಡಿದ್ದಾರೆ. ಸಿನಿಮಾದ ಸಿದ್ದ ಸೂತ್ರಗಳ ಮೊರೆ ಹೋಗದೇ ರಿಯಾಲಿಸ್ಟಿಕ್ ಆಗಿ ಸಿನಿಮಾವನ್ನು ಸೆರೆ ಹಿಡಿಯಲಾಗಿದ್ದು, ಸಿಂಕ್ ಸೌಂಡ್ ಟೆಕ್ನಾಲಜಿ ಬಳಸಿ ಚಿತ್ರೀಕರಣ ನಡೆಸಲಾಗಿದೆ.
ಅದ್ದೂರಿಯಾಗಿ ಬಿಡುಗಡೆಯಾಯ್ತು ಬಹುನಿರೀಕ್ಷಿತ `ಇನಾಮ್ದಾರ್’ ಚಿತ್ರದ ` ಸಿಲ್ಕು ಮಿಲ್ಕು’ ಹಾಡು
ಚಿತ್ರದಲ್ಲಿ ಒಂಭತ್ತು ಹಾಡುಗಳಿದ್ದು, ಮ್ಯೂಸಿಕಲ್ ಮಾಂತ್ರಿಕ ಮನೋಮೂರ್ತಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಪ್ರತಿಭೆಗಳನ್ನು ಆಡಿಷನ್ ಮೂಲಕ ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದ್ದು, ಯುವ ಪ್ರತಿಭೆಗಳಾದ ಅಭಯ್ ವೀರ್, ವೀರೆಂದ್ರ ಶೆಟ್ಟಿ, ರಿಧಿ ರಾಥೋರ್, ಕಿರಣ್ ಕುಮಾರ್, ಯಶವಂತ್, ರಾಘವೇಂದ್ರ, ಸ್ಪೂರ್ತಿ ಹಾಗೂ ಶ್ರಾವಣಿ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
‘ಹೈಡ್ ಅಂಡ್ ಸೀಕ್’ ಪೋಸ್ಟರ್ ಲಾಂಚ್: ವಿಭಿನ್ನ ಪಾತ್ರದಲ್ಲಿ ಅನೂಪ್ ರೇವಣ್ಣ
ಹೊಸಪೇಟೆ, ಗಂಗಾವತಿ, ಸಿಂಧನೂರು ಸುತ್ತಮುತ್ತ 47 ದಿನಗಳ ಕಾಲ ಸಂಭ್ರಮ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ. ಸೋನು ನಿಗಮ್, ಶ್ರೇಯಾ ಘೋಷಾಲ್, ಚಿನ್ಮಯಿ ಆತ್ರೇಯಾಸ್, ಸುಪ್ರಿಯ ರಘುನಂದನ್, ಶಶಿಕಲಾ ಸುನೀಲ್ ಚಿತ್ರದ ಹಾಡುಗಳಿಗೆ ದನಿಯಾಗಿದ್ದು, ಜಯಂತ್ ಕಾಯ್ಕಿಣಿ, ಶ್ರೀ ಸಂಭ್ರಮ, ವಿರೇಂದ್ರ ಶೆಟ್ಟಿ, ಚಿನ್ಮಯಿ ಭಾವಿಕೆರೆ, ಸಾಂದ್ರ ಸ್ಮಿದ್ ಸಾಹಿತ್ಯದಲ್ಲಿ ಹಾಡುಗಳು ಮೂಡಿಬಂದಿವೆ. ವಿಜಯ್ ಕುಮಾರ್ ಎಸ್ ವಿ ಕೆ, ಮಂಜುನಾಥ್ ಹೆಗ್ಡೆ, ವಾಜಿದ್ ಮೊಹಿದ್ ಛಾಯಾಗ್ರಾಹಣ, ತೇಜಸ್ ರಾಜ್ ಸಂಕಲನ ಚಿತ್ರಕ್ಕಿದೆ. ಚಿರಾಗ್ ಸಿನಿಮಾಸ್ ಸಹ ನಿರ್ಮಾಣ ಈ ಚಿತ್ರಕ್ಕಿದೆ.