Sandalwood Leading OnlineMedia

ಬಿ ಟೌನ್ ನಟಿಯರಿಗೆ ಸೆಡ್ಡು ಹೊಡೆದು ಟಾಪ್ ರೇಟಿಂಗ್ಸ್ ಪಡೆದುಕೊಂಡ ನಟಿ ಸಮಂತಾ.

ಬಿ ಟೌನ್ ನಟಿಯರಿಗೆ ಸೆಡ್ಡು ಹೊಡೆದು ಟಾಪ್ ರೇಟಿಂಗ್ಸ್ ಪಡೆದುಕೊಂಡ ನಟಿ ಸಮಂತಾ.

ದೇಶದ ಚಿತ್ರರಂಗದಲ್ಲಿ ತುಂಬಾ ಫೇಮಸ್ ಆದ ನಟಿಯರು ಯಾರು ಎಂಬ ಸರ್ವೇಯನ್ನು ಪ್ರತಿ ತಿಂಗಳು ಒರಾಮ್ಯಾಕ್ಸ್ ಸಂಸ್ಥೆಯೊಂದು ಮಾಡುತ್ತಿರುತ್ತದೆ. ಮೇ ತಿಂಗಳಲ್ಲಿ ನಡೆದ ಸರ್ವೆಯಲ್ಲಿ ಅತ್ಯಧಿಕವಾಗಿ ಅಭಿಮಾನಿಗಳನ್ನು ಹೊಂದಿದ ನಟಿಯಾಗಿ ಸಮಂತಾ ಆಯ್ಕೆಯಾಗಿದ್ದಾರೆ. ಹೌದು ಬಾಲಿವುಡ್ ನಟಿಯರನ್ನೂ ಸಹ ಹಿಂದಿಕ್ಕಿ ಸಮಂತಾ ಟಾಪ್ ನಟಿಯಾಗಿದ್ದಾರೆ.

ಒರಾಮ್ಯಾಕ್ಸ್ ಎಂಬ ಸಂಸ್ಥೆ ಕೆಲವು ದಿನಗಳಿಂದ ಸಿನಿಮಾ ತಾರೆಗಳ ಶ್ರೇಣಿ ಮಾಡುತ್ತಿರುತ್ತದೆ. ಸಿನೆಮಾಗಳು, ಕಿರುತೆರೆ, ಒಟಿಟಿ, ನ್ಯೂಸ್, ಸ್ಪೋರ್ಟ್ಸ್ ಮೊದಲಾದ ರಂಗಗಳಲ್ಲಿ ಅತ್ಯುತ್ತಮವಾದ ಟಾಪ್ ಯಾರು ಎಂಬುದನ್ನು ಸರ್ವೆ ಮಾಡುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಈ ಸಂಸ್ಥೆ ದೇಶದ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ನಾಯಕಿ ಯಾರು ಎಂಬುದರ ಕುರಿತು ಸರ್ವೆಯನ್ನು ಏರ್ಪಡಿಸಿತ್ತು.

ಇದರಲ್ಲಿ ನಟಿ ಸಮಂತಾ ಟಾಪ್ ಆಗಿದ್ದಾರೆ. ಬಾಲಿವುಡ್ ನಟಿಯರನ್ನೂ ಮೀರಿ ಮೊದಲ ಸ್ಥಾನಕ್ಕೇರಿದ್ದಾರೆ ಸಮಂತಾ. ಒರಾಮ್ಯಾಕ್ಸ್ ಸಂಸ್ಥೆ ಕೈಗೊಂಡ ಸರ್ವೆಯಲ್ಲಿ ಸಮಂತಾರವರಿಗೆ ಒಟ್ಟು 265k ಓಟುಗಳು ಬಂದಿವೆ. ಆ ಮೂಲಕ ಟಾಪ್ ನಟಿಯಾಗಿದ್ದಾರೆ. ಈ ಸರ್ವೆ ಮೇ ತಿಂಗಳಿಗೆ ಸಂಬಂಧಿಸಿದ ಸರ್ವೆಯಾಗಿದೆ.

ಇನ್ನೂ ಎರಡನೇ ಸ್ಥಾನದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ 244k, ಮೂರನೇ ಸ್ಥಾನದಲ್ಲಿ ನಯನತಾರಾ 218k ಓಟುಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ಕಾಜಲ್ ಅಗರ್ವಾಲ್ ರವರಿಗೆ ನಾಲ್ಕನೇ ಸ್ಥಾನ ಲಭಿಸಿದ್ದು, 201k ಓಟುಗಳನ್ನು ಪಡೆದುಕೊಂಡಿದ್ದಾರೆ. ದೀಪಿಕಾ ಪಡುಕೋಣೆ 187k ಓಟುಗಳನ್ನು ಗಳಿಸಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ನ್ಯಾಷನಲ್ ಕ್ರಷ್ ರಶ್ಮಿಕಾ 167k ಓಟುಗಳನ್ನು, ಬಾಲಿವುಡ್ ಸ್ಟಾರ್‍ ನಟಿ ಅನುಷ್ಕಾ ಶೆಟ್ಟಿ 156k ಓಟುಗಳನ್ನು ಪಡೆದುಕೊಂಡು ಕ್ರಮವಾಗಿ ಆರು ಮತ್ತು ಏಳನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಉಳಿದಂತೆ ನಟಿ ಕತ್ರಿನಾ ಕೈಫ್, ಕೀರ್ತಿ ಸುರೇಶ್, ಪೂಜಾ ಹೆಗ್ಡೆ ರವರು ಕ್ರಮವಾಗಿ 8,9,10 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕತ್ರಿನಾ 145k, ಕೀರ್ತಿ ಸುರೇಶ್ 128k ಗಳಿಸಿಕೊಂಡಿದ್ದಾರೆ. ಹತ್ತನೇ ಸ್ಥಾನದಲ್ಲಿ ಪೂಜಾ ಹೆಗ್ಡೆ ಇದ್ದಾರೆ.

ನಟಿ ಸಮಂತಾಗೆ ಸಾಲು ಸಾಲು ಸಿನೆಮಾಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.ಸಮಂತಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ಹಾಲಿವುಡ್ ಸಿನೆಮಾದಲ್ಲೂ ಸಹ ಬಣ್ಣ ಹಚ್ಚುತ್ತಿದ್ದಾರೆ. ಇನ್ನೂ ಸದ್ಯ ಶಾಕುಂತಲಂ, ಖುಷಿ ಹಾಗೂ ಯಶೋಧ ಸಿನೆಮಾಗಳ ಶೂಟಿಂಗ್ ಕೆಲಸಗಳು ಮುಗಿದಿದ್ದು, ಬಿಡುಗಡೆಗೆ ಸಿದ್ದವಾಗುತ್ತಿವೆ.

 

Share this post:

Related Posts

To Subscribe to our News Letter.

Translate »