Sandalwood Leading OnlineMedia

*ಶಾಕುಂತಲೇಯ ನಿರ್ಧಾರಕ್ಕೆ ಶಾಕ್ ಆದ ಚಿತ್ರರಂಗ, ಸಾಲು ಸಾಲು ಚಿತ್ರಗಳು ಕೈಲಿರುವಾಗ ಚಿತ್ರರಂಗದಿಂದ ದೂರವಿರಲು ಕಾರಣವೇನು? ಲಕ್ಕಿ ಗರ್ಲ್ ಬದುಕಲ್ಲಿ ಏನಾಯ್ತು….?*

ಬಹುಭಾಷಾ ನಟಿ ಸಮಂತಾ ತಮ್ಮ ಚಿತ್ರಗಳಿಂದ ಸುದೀರ್ಘ ವಿರಾಮ ತೆಗೆದುಕೊಳ್ಳುತ್ತಿದ್ದಾರೆ.. ಹೌದು, ಇಂತಹ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ಕೇಳಿಬರುತ್ತಿವೆ. ಇದರಿಂದ ಸಮಂತಾ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇದಕ್ಕೆ ಕಾರಣ ಏನು ಎಂಬುವುದನ್ನು ನೋಡೋಣ ಬನ್ನಿ.ಯಸ್‌.. ನಟ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ ಸಮಂತಾ ಅನಾರೋಗ್ಯಕ್ಕೆ ಒಳಗಾದರು. ಧೈರ್ಯ ಕಳೆದುಕೊಳ್ಳದೆ ಬಂದ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತರು. ಮಯೋಸಿಟಿಸ್‌ನಿಂದ ಚೇತರಿಸಿಕೊಂಡ ನಂತರ, ಮತ್ತೆ ಚಲನಚಿತ್ರಗಳಲ್ಲಿ ನಿರತರಾದರು. ಸಮಂತಾ ಅವರ ಶಾಕುಂತಲಂ ಸಹ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿತ್ತು.

ಇನ್ನೂ ಓದಿ   ಸೌತ್ ನಟಿಯರ ಸಂಭಾವನೆ ಎಷ್ಟಿದೆ.? ಯಾರು ಎಷ್ಟ್ ಕೋಟಿ ತಗೋತಾರೆ. ಸೌತ್ ಸಿನೆಮಾ ಹಿರೋಯಿನ್ ಗಳಲ್ಲಿ ಯಾರು ಟಾಪರ್!

ಇದರೊಂದಿಗೆ, ಅವರು ತಮ್ಮ ಮುಂದಿನ ಪ್ರಾಜೆಕ್ಟ್‌ಗಳತ್ತ ಹೆಜ್ಜೆ ಹಾಕುತ್ತಾರೆ. ಸದ್ಯ ಶಿವ ನಿರ್ವಾಣ ನಿರ್ದೇಶನದ ʼಖುಷಿʼ ಚಿತ್ರದ ಅಂತಿಮ ಶೆಡ್ಯೂಲ್ ನಡೆಯುತ್ತಿದೆ. ಈ ವಾರ ಚಿತ್ರೀಕರಣ ಪೂರ್ಣಗೊಳ್ಳಲಿದೆ ಎಂದು ವಿಜಯ್ ದೇವರಕೊಂಡ ಇನ್‌ಸ್ಟಾಗ್ರಾಮ್‌ನಲ್ಲಿ ಘೋಷಿಸಿದರು. ಅಲ್ಲದೆ ಸಮಂತಾ “ಸಿಟಾಡೆಲ್” ವೆಬ್ ಸರಣಿಯಲ್ಲಿಯೂ ಸಹ ನಟಿಸುತ್ತಿದ್ದಾರೆ.

ಸದ್ಯ ಸಮಂತಾ ಯಾವುದೇ ಹೊಸ ಸಿನಿಮಾಗಳಿಗೆ ಸಹಿ ಹಾಕುತ್ತಿಲ್ಲ. ಸದ್ಯದ ಪ್ರಾಜೆಕ್ಟ್‌ಗಳು ಮುಗಿದ ನಂತರ ಸಿನಿಮಾದಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ವಿಶೇಷವಾಗಿ ಸಮಂತಾ ತನ್ನ ಆರೋಗ್ಯದ ಕಡೆಗೆ ಹೆಚ್ಚು ಆದ್ಯತೆ ನೀಡಲು ಬಯಸುತ್ತಾರೆ. ಅದಕ್ಕಾಗಿಯೇ ದೀರ್ಘ ವಿರಾಮವನ್ನು ತೆಗೆದುಕೊಳ್ಳಲು ಬಯಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ಮುಂದಿನ ವರ್ಷ ಅಥವಾ ನಂತರದ ದಿನಗಳಲ್ಲಿ ಅವರು ಮತ್ತೆ ಚಲನಚಿತ್ರಗಳತ್ತ ಗಮನ ಹರಿಸಲಿದ್ದಾರೆ ಎನ್ನಲಾಗಿದೆ. ಆದರೆ ಸಮಂತಾ ಫ್ಯಾನ್ಸ್‌ಗೆ ಒಂದು ಸಂತೋಷದ ವಿಚಾರ ಅಂದ್ರೆ, ʼಖುಷಿʼ ಚಿತ್ರದ ಪ್ರಚಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ..

Share this post:

Related Posts

To Subscribe to our News Letter.

Translate »