ವಿಚ್ಛೇಧನ ಪಡೆದು ಒಂದು ವರ್ಷವಾದರೂ ಸಹ ಈ ವರೆಗೆ ನಟಿ ಸಮಂತಾ ತಮ್ಮ ವಿಚ್ಛೇಧನದ ಕುರಿತಾಗಿ ಎಲ್ಲಿಯೂ ಮಾತನಾಡಿರಲಿಲ್ಲ. ಇದೇ ಮೊದಲ ಬಾರಿಗೆ ನಟಿ ಸಮಂತಾ ಈ ಬಗ್ಗೆ ಮಾತನಾಡಿದ್ದಾರೆ. ಅದೂ ‘ಕಾಫಿ ವಿತ್ ಕರಣ್’ ಶೋನಲ್ಲಿ.
‘ಕಾಫಿ ವಿತ್ ಕರಣ್’ ಶೋನಲ್ಲಿ ನಿರೂಪಕ ಕರಣ್, ಸಾಮಾನ್ಯವಾಗಿ ನಟ-ನಟಿಯರ ಖಾಸಗಿ ಬದುಕಿನ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ನಟಿ ಸಮಂತಾ ಹಾಗೂ ಅಕ್ಷಯ್ ಕುಮಾರ್ ಒಟ್ಟಾಗಿ ‘ಕಾಫಿ ವಿತ್ ಕರಣ್’ ಶೋಗೆ ಆಗಮಿಸಿದ್ದು, ಎಪಿಸೋಡ್ ಈಗಾಗಲೇ ಪ್ರಸಾರವಾಗಿದೆ. ಈ ಶೋನಲ್ಲಿ ನಟಿ ಸಮಂತಾ ತಮ್ಮ ವಿಚ್ಛೇಧನದ ವಿಷಯವಾಗಿ ಮಾತನಾಡಿದ್ದಾರೆ. ವಿಚ್ಛೇಧನ ಪಡೆದು ಒಂದು ವರ್ಷವಾದರೂ ಸಹ ಈ ವರೆಗೆ ನಟಿ ಸಮಂತಾ ತಮ್ಮ ವಿಚ್ಛೇಧನದ ಕುರಿತಾಗಿ ಎಲ್ಲಿಯೂ ಮಾತನಾಡಿರಲಿಲ್ಲ. ಇದೇ ಮೊದಲ ಬಾರಿಗೆ ನಟಿ ಸಮಂತಾ ಈ ಬಗ್ಗೆ ಮಾತನಾಡಿದ್ದಾರೆ. ಅದೂ ‘ಕಾಫಿ ವಿತ್ ಕರಣ್’ ಶೋನಲ್ಲಿ.
ಸಮಂತಾ ನಿಮ್ಮ ಹಸ್ಬೆಂಡ್‌ನಿಂದ ದೂರಾಗಿದ್ದು ನಿಮಗೆ ಹೇಗನ್ನಿಸಿತು? ಎಂದು ಕರಣ್, ಸಮಂತಾರನ್ನು ಪ್ರಶ್ನೆ ಮಾಡಿದ್ದಾರೆ. ಆಗ ಸಮಂತಾ ‘ಹಸ್ಬೆಂಡ್ ಅಲ್ಲ ಎಕ್ಸ್ ಹಸ್ಬೆಂಡ್’ ಎನ್ನುತ್ತಾರೆ. ನಂತರ ಕರಣ್ ತಮ್ಮ ಪ್ರಶ್ನೆಯನ್ನು ಸರಿ ಮಾಡಿಕೊಳ್ಳುತ್ತಾರೆ. ಅದೊಂದು ಬಹಳ ಕಷ್ಟದ ನಿರ್ಣಯವಾಗಿತ್ತು, ಸುಲಭವಾಗಿರಲಿಲ್ಲ. ಈಗ ನಿಧಾನಕ್ಕೆ ಅದರಿಂದ ಹೊರಗೆ ಬರುತ್ತಿದ್ದೇನೆ” ಎಂದಿದ್ದಾರೆ.
ಪರಸ್ಪರರ ಮೇಲೆ ಸಿಟ್ಟು ಇನ್ನು ಇದೆಯೇ ಅಥವಾ ವಿಚ್ಛೇಧನದ ನಿರ್ಣಯದ ಬಗ್ಗೆ ಬೇಸರ ಇದೆಯೇ? ಎಂಬುದಕ್ಕೆ ಉತ್ತರಿಸಿ, ‘ಸಿಟ್ಟು ಇನ್ನೂ ಇದೆ. ರಿಗ್ರೆಟ್ಸ್ ಸಹ ಇದೆ’ ಆದರೆ ಎಲ್ಲವೂ ನಿಧಾನಕ್ಕೆ ಕರಗುತ್ತಿದೆ. ನನ್ನ ಜೀವನದಲ್ಲಿ ನಾನು ಬ್ಯುಸಿಯಾಗುತ್ತಿದ್ದೇನೆ. ಖುಷಿಗಳನ್ನು ಕಂಡುಕೊಳ್ಳುತ್ತಿದ್ದೇನೆ” ಎಂದಿದ್ದಾರೆ.
ಮತ್ತೆ ಪ್ರೀತಿಸಲು ರೆಡಿಯಿದ್ದಾರಾ ಸಮಂತಾ? ”ನಿಮ್ಮ ಹೃದಯ ಖಾಲಿ ಇದೆಯೇ? ಪ್ರೀತಿಯ ವಿಷಯವಾಗಿ ನೀವು ಒಪನ್ ಆಗಿದ್ದೀರಾ?” ತರಲೆ ಪ್ರಶ್ನೆಗಳನ್ನು ಸಹ ಕರಣ್ ಜೋಹರ್, ಸಮಂತಾರನ್ನು ಪ್ರಶ್ನೆ ಮಾಡಿದ್ದಾರೆ.ಇದಕ್ಕೆ ಉತ್ತರಿಸಿರುವ ಸಮಂತಾ, ಖಂಡಿತ ನನ್ನ ಹೃದಯ ತೆರೆದಿಲ್ಲ ಸದ್ಯಕ್ಕೆ ಅದು ಮುಚ್ಚಿದೆ, ಹೃದಯ ಪ್ರವೇಶಿಸಲು ಬರುವವರಿಗೆ ಅಲ್ಲಿ ನೋ ಎಂಟ್ರಿ ಬೋರ್ಡ್ ಇದೆ, ಅವರು ಯೂ ಟರ್ನ್ ತೆಗೆದುಕೊಳ್ಳಬಹುದು ಎಂದಿದ್ದಾರೆ.