ಸಾಮಾನ್ಯವಾಗಿ ಯಾವುದೇ ಚಿತ್ರ ಆಗಿರಲಿ ಅಥವಾ ಕಲಾವಿದರು ಆಗಿರಲಿ ತನಗೆ ಏನು ಅನ್ನಿಸುತ್ತದೆಯೋ ಅದನ್ನು ನೇರ ಹಾಗೂ ದಿಟ್ಟವಾಗಿ ಹೇಳಿ ಬಿಡುವ ತಾಕತ್ ಹೊಂದಿರುವ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿ ಸಮಂತ ಋತು ಇತ್ತೀಚಿನ ದಿನಗಳಲ್ಲಿ ಮೀಡಿಯಾದವರು ಎಂತಹ ವಿಮರ್ಶೆ ಮಾಡಿದರು ಸಹಿತ ಮಾತನಾಡದೆ ಮೌನವಾಗಿ ಇದ್ದಾಳೆ. ಇದಕ್ಕೆ ಸಂಬಂಧಪಟ್ಟಂತೆ ಆಕೆಯನ್ನು ಕೆದಕುವವರು ಕಡಿಮೆ ಇಲ್ಲ.
ಇದನ್ನೂ ಓದಿ ರಣ್‌ಬೀರ್ ಕಪೂರ್‌ನೊಂದಿಗಿನ ರಹಸ್ಯ ಬಿಚ್ಚಿಟ್ಟ ದೀಪಿಕಾ ಪಡುಕೋಣೆ
ಆದರೆ ಸಮ್ಮು ಇತ್ತೀಚಿಗೆ ಟ್ವಿಟ್ವರ್ ನಲ್ಲಿ ತನಗೆ ಮೂಗಿನ ಮೇಲೆ ಕೋಪ ಇರುವುದಾಗಿ ಹೇಳಿದ್ದಾಳೆ. ಹೇಗೆ ಅಂತೀರ.. ಈ ಮಧ್ಯೆ ಚಿತ್ರವೊಂದರ ಸನ್ನಿವೇಶವನ್ನು ಸುಮಾರು ಅರ್ಧ ಗಂಟೆಗಳ ಕಾಲ ಶೂಟ್ ಮಾಡಿದ ನಿರ್ದೇಶಕನ ಕಾಟ ತಾಳಲಾಗದೆ ರಾಸ್ಕಲ್, ಹಂದಿ ಎಂದು ಬೈದುಕೊಂಡಳಂತೆ ಮನದಲ್ಲಿ!! ಹಾಗಂತ ಟ್ವೀಟ್ ಮಾಡಿ ಹೇಳಿದ್ದಾಳೆ.ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿ ಸಮಂತ ಋತು. ಆಕೆಯ ಈವರೆಗೂ ಗೆಲುವಿನ ಕುದುರೆ ಆಗಿದ್ದಳು. ಆದರೆ ಆಕೆಯ ನಟನೆಯ ತೆಲುಗು ಚಿತ್ರ ರಭಸ ಹಾಗೂ ತಮಿಳಿನ ಚಿತ್ರ ಮಕಾಡೆ ಮಲಗಿದ ಬಳಿಕ ಯಾವುದೇ ರೀತಿಯಲ್ಲೂ ತನ್ನನ್ನು ಮೀಡಿಯಾ ಮುಂದೆ ಬರಗೊಡದೆ ಮೌನವಾಗಿ ಇದ್ದು ಬಿಟ್ಟಳು ಚೆಲುವೆ.ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುವ ಈ ಭಾಮೆಗೆ ಆ ರೀತಿ ನಿರ್ದೇಶಕ ಸುಖಾ ಸುಮ್ಮನೆ ಕೆಣಕಿದರೆ ಕೋಪ ಬರುವುದಿಲ್ಲವೇ.. ನನಗೆ ಮೂಗಿನ ಮೇಲೆ ಕೋಪ ಇರುತ್ತೆ ಅನ್ನೋದನ್ನು ಆಕೆ ಆ ನಿರ್ದೇಶಕನನ್ನು ಮನದಲ್ಲಿ ಬೈಯ್ಯುವುದರ ಮೂಲಕ ಮತ್ತೆ ಸಾಬೀತು ಮಾಡಿದ್ದಾಳೆ. ಆದರೆ ಆ ನಿರ್ದೇಶಕನ ಹೆಸರನ್ನು ಮಾತ್ರ ಹೇಳದೆ ಆತನ ಮಾನ ಕಾಪಾಡಿದ್ದಾಳೆ ಈ ಸುಂದರಿ.