ತೆಲುಗಿನ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಖ್ಯಾತ ನಟ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ನಟಿ ಸಮಂತಾ ವಿಚಿತ್ರ ಕಾಯಿಗೆ ತುತ್ತಾಗಿದ್ದರು. ಈ ಕ್ಯೂಟೆಸ್ಟ್ ಜೋಡಿಯ ಬಗ್ಗೆ ಈಗಲೂ ಅಭಿಮಾನಿಗಳು ಬೇಸರ ಹೊರ ಹಾಕುತ್ತಾ ಇರುತ್ತಾರೆ.
ಆದರೆ ಈ ಮಧ್ಯೆ ನಟಿ ಸಮಂತಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ನಟ ನಾಗಚೈತನ್ಯ ಅವರ ಜೊತೆ ಮದುವೆಗೆ ಸಮಂತಾ ಧರಿಸಿದ್ದ ಗೌನ್‌ಅನ್ನು ಹರಿದು ಹಾಕಿ ಅದಕ್ಕೆ ಹೊಸ ರೂಪವನ್ನು ನೀಡಿದ್ದಾರೆ. ನಟಿ ಸಮಂತಾ ಏಪ್ರಿಲ್ 25ರಂದು ನಡೆದ ಗ್ಲಾಮರಸ್ ಫ್ಯಾಶನ್ ಪ್ರೋಗ್ರಾಮ್‌ನಲ್ಲಿ ಕಪ್ಪು ಬಣ್ಣದ ಗೌನ್ ಧರಿಸಿ ಎಲ್ಲರ ಕಣ್ಣು ಕುಕ್ಕುವಂತೆ ಕಾಣಿಸಿಕೊಂಡಿದ್ದರು.
ಇದೇ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳಿಕ ಈ ಗೌನ್ ಬಗ್ಗೆ ಬಗ್ಗೆ ನಟಿ ಸಮಂತಾ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ.
ಅತ್ಯಂತ ಸುಂದರವಾಗಿ ಬಿಳಿ ಬಣ್ಣದ ವೆಡ್ಡಿಂಗ್ ಗೌನ್ ಅನ್ನು ಕಟ್ ಮಾಡಿಸಿ ಅದಕ್ಕೆ ಬ್ಲ್ಯಾಕ್ ಡೈ ಡಿಸೈನ್ಗೆ ರೂಪಾಂತರಿಸಿದ್ದಾರೆ. ಈಗ ಸಖತ್ ವೈರಲ್ ಆಗುತ್ತಿದೆ. ಸದ್ಯ ನಟಿ ಸಮಂತಾ ಹುಟ್ಟು ಹಬ್ಬದ ದಿನವೇ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಬಂಗಾರಮ್ ಸಿನಿಮಾದ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಸದ್ಯದಲ್ಲೇ ನಟಿ ಹೊಸ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ.