ಪುಷ್ಪ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಹಿಟ್ ಆಗಿದೆ. ಈ ಸಿನಿಮಾ ಹಿಂದಿ ಹಾಗೂ ತೆಲುಗಿನಲ್ಲಿ ಹಿಟ್ ಆಗಿತ್ತು. ಇನ್ನು ಪುಷ್ಪ 2 ಸಿನಿಮಾದಲ್ಲಿ ಫಹದ್ ಫಾಜಿಲ್ ವಿಲನ್ ಆಗಿ ನಟಿಸುತ್ತಿದ್ದು, ಸುನೀಲ್, ರಾವ್ ರಮೇಶ್, ಧನುಂಜಯ ಮತ್ತು ಆಯಂಕರ್ ಅನಸೂಯ ಈ ಸಿನಿಮಾದಲ್ಲಿ ಇತರ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಇನ್ನೂ ಓದಿ ಹಾಸ್ಯ ಚಕ್ರವರ್ತಿ ನರಸಿಂಹರಾಜು ಜೀವನ, ಒಂದು ಸಿಂಹಾವಲೋಕನ
ಲೆಜೆಂಡ್ ಕ್ರಿಕೆಟಿಗ ಎಂ.ಎಸ್ ಧೋನಿ ಪತ್ನಿ ಸಾಕ್ಷಿ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಒಂದು ರೇಂಜ್ ನಲ್ಲಿ ಹೈಪ್ ನೀಡುವ ಮಾತುಗಳನ್ನಾಡಿದ್ದಾರೆ. ಸಾಕ್ಷಿ ಧೋನಿ ತಮಿಳಿನಲ್ಲಿ LGM ಎಂಬ ಚಿತ್ರವನ್ನು ಧೋನಿ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.LGM ಚಿತ್ರವನ್ನು ತೆಲುಗಿನಲ್ಲೂ ಡಬ್ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಹೈದರಾಬಾದ್ನಲ್ಲಿ ಆಯೋಜಿಸಿದ್ದ ಸುದ್ಧಿಗೋಷ್ಠಿಯಲ್ಲಿ ಧೋನಿ ಪತ್ನಿ ಹಾಗೂ ಸಿನಿಮಾ ನಿರ್ಮಾಪಕಿ ಸಾಕ್ಷಿ ಹೇಳಿದ ಮಾತುಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ತೆಲುಗು ಹೀರೋಗಳ ಸಿನಿಮಾ ನೋಡುತ್ತೀರಾ ಎಂದು ಮಾಧ್ಯಮದವರು ಕೇಳಿದಾಗ. ಇದಕ್ಕೆ ಪ್ರತಿಕ್ರಿಯಿಸಿದ ಸಾಕ್ಷಿ, ನಾನು RRR, ಬಾಹುಬಲಿ ಸಿನಿಮಾ ನೋಡಿದ್ದೇನೆ. ಆದರೆ ಅಲ್ಲು ಅರ್ಜುನ್ ಅವರ ಎಲ್ಲಾ ಸಿನಿಮಾ ನೋಡ್ತೀನಿ ಎಂದ್ರು.ನಾನು ಅಲ್ಲು ಅರ್ಜುನ್ ಬಿಗ್ ಫ್ಯಾನ್ ಎಂದು ಸಾಕ್ಷಿ ಹೇಳಿದ್ದಾರೆ. Netflix, Hotstar ಮತ್ತು ಇತರ OTT ಪ್ಲಾಟ್ ಫಾರ್ಮ್ಗಳು ಲಭ್ಯವಿಲ್ಲದಿದ್ದಾಗಲೇ ಅವರ ಸಿನಿಮಾಗಳನ್ನು ನೋಡುತ್ತಿದೆ ಎಂದು ಸಾಕ್ಷಿ ಹೇಳಿದ್ದಾರೆ. ಇದೀಗ ಈ ಕಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪುಷ್ಪ ಚಿತ್ರದ ಸೀಕ್ವೆಲ್ ಆಗಿ ಬರುತ್ತಿರುವ ಪುಷ್ಪ 2 ನಲ್ಲಿ ಅಲ್ಲು ಅರ್ಜುನ್ ಯಾವ ರೀತಿಯ ಪಂಚ್ ಡೈಲಾಗ್ ಕೊಡಲಿದ್ದಾರೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿರುವಾಗಲೇ ಚಿತ್ರದ ಡೈಲಾಗ್ ವೊಂದು ಲೀಕ್ ಆಗಿದೆ. ಎಂದು ಸ್ವತಃ ಅಲ್ಲು ಅರ್ಜುನ್ ಹೇಳಿದ್ದು, ಬನ್ನಿ ಅಭಿಮಾನಿಗಳು ಹುಬ್ಬೇರಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ಬೇಬಿ ಸಕ್ಸಸ್ ಮೀಟ್ ನಲ್ಲಿ ಭಾಗವಹಿಸಿದ್ದ ಅಲ್ಲು ಅರ್ಜುನ್, ಪುಷ್ಪ-2 ಚಿತ್ರದ ಡೈಲಾಗ್ ಲೀಕ್ ಮಾಡಿದ್ದಾರೆ. ಅಲ್ಲಿಗೆ ಬಂದಿದ್ದ ಅಭಿಮಾನಿಗಳೆಲ್ಲ ಪುಷ್ಪ-2 ಚಿತ್ರದ ಡೈಲಾಗ್ ಕೇಳಿದಾಗ ಅಲ್ಲು ಅರ್ಜುನ್ ಪಂಚ್ ಡೈಲಾಗ್ ಹೇಳುವ ಮೂಲಕ ಬಾಯಿಬಿಟ್ಟರು.