ಕನ್ನಡದಲ್ಲಿ ವೆಬ್ ಸೀರೀಸ್ ಗೆ ಅಡಿಪಾಯ ಹಾಕಿದ್ದೇ ಸಕ್ಕತ್ ಸ್ಟುಡಿಯೋ… ಹೇಗೆ ಶುರುವಾಯ್ತು ಈ ಜರ್ನಿ?
ವೆಬ್ ಸೀರೀಸ್ ಗೆ ಎಂಟ್ರಿ ಕೊಡ್ತಾರಾ ಲೀಡರ್?…ಶಿವಣ್ಣನಿಗೆ ‘ಓಂಕಾರ’ ಹಾಕಲಿದೆಯಾ ಸಕ್ಕತ್ ಸ್ಟುಡಿಯೋ…
ಈಗೇನಿದ್ದರೂ ಡಿಜಿಟಲ್ ಯುಗ. ಸಿನಿಮಾಗಳು ಹಾಗೂ ವೆಬ್ ಸೀರೀಸ್ ಒಟಿಟಿ ಮೂಲಕ ಡಿಜಿಟಲ್ ವೇದಿಕೆಯಲ್ಲಿ ಪ್ರೇಕ್ಷಕನ ಮುಂದೆ ಬರ್ತಿವೆ. ಬಾಲಿವುಡ್ನ ದೊಡ್ಡ ಫಿಲ್ಮ್ಮೇಕರ್ಸ್ ಸಹ ವೆಬ್ ಸರಣಿಗಳ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಹಾಗೆಯೇ ಕಲಾಲೋಕದಿಂದ ಮರೆಯಾದ ಕಲಾವಿದರಿಗೂ ಹೊಸ ವೇದಿಕೆ ಕೊಡ್ತಿರುವುದು ಕೂಡ ಇದೇ ವೆಬ್ ಸೀರೀಸ್. ಈ ಹೊಸ ಜಮಾನ ಈಗ ಕನ್ನಡದಲ್ಲಿಯೂ ಆರಂಭವಾಗಿದೆ.
ಕನ್ನಡ ವೆಬ್ ಸರಣಿಗಳಲ್ಲಿ ತನ್ನದೇ ಆದ ಛಾಪನ್ನ ಮೂಡಿಸ್ತಿರುವ ಸಕ್ಕತ್ ಸ್ಟುಡಿಯೋ ಇತ್ತೀಚೆಗಷ್ಟೆ ಡಾ ಶಿವರಾಜ್ ಕುಮಾರ್ ಶ್ರೀ ಮುತ್ತು ಸಿನಿ ಸರ್ವೀಸಸ್ ಜೊತೆಗೂಡಿ “ಹನಿಮೂನ್ “ ಎಂಬ ಹೊಸ ವೆಬ್ ಸರಣಿಯನ್ನು ಪ್ರೇಕ್ಷಕನ ಮಡಿಲಿಗೆ ಹಾಕಿದೆ. ಕಳೆದ ಐದು ವರ್ಷಗಳ ಹಿಂದೆ ‘ಎಕ್ಸ್ ಕ್ಯೂಸ್ ಮಿ’ ಖ್ಯಾತಿಯ ಸುನೀಲ್ ರಾವ್, ಸಿಂಧು ಲೋಕನಾಥ್, ಅನುಪಮ ಗೌಡ ನಟಿಸಿದ್ದ “ಲೂಸ್ ಕನೆಕ್ಷನ್ ” ವೆಬ್ ಸೀರೀಸ್ ಸಕ್ಕತ್ ಸ್ಟುಡಿಯೋದ ಮೊದಲ ಪ್ರಯತ್ನ ಹಾಗು ಯೂಟ್ಯೂಬ್ ನಲ್ಲಿ ಪ್ರಸಾರವಾದ ಕನ್ನಡದ ಮೊಟ್ಟ ಮೊದಲ ವೆಬ್ ಸರಣಿ.
ಲೂಸ್ ಕನೆಕ್ಷನ್ ವೆಬ್ ಸೀರೀಸ್ ಗೆ ಸಖತ್ ರೆಸ್ಪಾನ್ಸ್ ಸಿಕ್ತಿದ್ದಂತೆ ಸಕ್ಕತ್ ಸ್ಟುಡಿಯೋ “ಡಾಕ್ಟರ್ ಪಾಲ್ ” ನಂತರ ಶಿವಣ್ಣರ ಮಗಳ ಜೊತೆಗೂಡಿ “ಹೇಟು ಯು ರೋಮಿಯೋ” ವೆಬ್ ಸೀರೀಸ್ , ಅದರಲ್ಲೂ ಇಡೀ ಶೂಟಿಂಗ್ ನ್ನು ವಿಯೆಟ್ನಾಮ್ ನಲ್ಲಿ ಮಾಡಿದ್ದು ಕನ್ನಡದ ಮಟ್ಟಿಗೆ ದೊಡ್ಡ ಸಾಹಸವೇ ಸರಿ. ಸದ್ಯದಲ್ಲಿಯೇ ಈ ವೆಬ್ ಸರಣಿ ಕೊಡಾ ಪ್ರೇಕ್ಷಕ ಮುಂದೆ ಬರಲಿದೆ.
‘ಐದು ವರ್ಷಗಳ ಸತತ ಪ್ರಯತ್ನಗಳು, ಸೀರೀಸ್ ವಿಭಾಗವನ್ನು ಬೆಳಸಬೇಕೆಂಬ ಮಹದಾಸೆಯೊಂದಿಗೆ ದೊಡ್ಡ ದೊಡ್ಡ ಕಲಾವಿದರನ್ನು ವೆಬ್ ಸೀರೀಸ್ ಲೋಕಕ್ಕೆ ಕರೆ ತರುವ ದೊಡ್ಡ ಯೋಜನೆಯನ್ನು ಸಹ ಸಕ್ಕತ್ ಸ್ಟುಡಿಯೋ ಹಾಕಿಕೊಂಡಿದೆ. ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರಿಗಾಗಿ ಒಂದು ವೆಬ್ ಸೀರೀಸ್ ಕಥೆ ಹೆಣದಿದ್ದು , ಅದಕ್ಕೆ ಓಂಕಾರ ಎಂಬ ಕ್ಯಾಚಿ ಟೈಟಲ್ ಕೂಡ ಇಡಲಾಗಿದೆ. ಕಥೆ ಕೇಳಿ ಶಿವಣ್ಣನೂ ಮೆಚ್ಚಿಕೊಂಡಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಓಂಕಾರ ಮೂಲಕ ಶಿವಣ್ಣ ವೆಬ್ ಸೀರೀಸ್ ಜಗತ್ತಿಗೆ ಕಾಲಿಡಲಿದ್ದಾರೆ.
ಪ್ರದೀಪ್ ಮಡದಿ ಶ್ವೇತಾ ಪ್ರಸಾದ್ ಸಾರಥ್ಯದಲ್ಲಿ ಒಂದಷ್ಟು ಪ್ರತಿಭಾನ್ವಿತ ಬಳಗವೇ ತುಂಬಿರುವ ಸಕ್ಕತ್ ಸ್ಟುಡಿಯೋ , ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ವೆಬ್ ಶೋಗಳು ಸಕ್ಕತ್ ಸ್ಟುಡಿಯೋ ಅಂಗಳದಿಂದ ಹೊರಬರಲಿವೆ.