Sandalwood Leading OnlineMedia

ಅಪ್ಪ ನೀನು ಸತ್ತು ಹೋಗ್ತೀಯಾ? ಸೈಫ್‌ಗೆ ಪ್ರಶ್ನೆ ಮಾಡಿದ್ದ ತೈಮೂರ್‌

ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ಕಳ್ಳನೊಬ್ಬ ಹಲ್ಲೆ ನಡೆಸಿದ್ದ ಘಟನೆ ಭಾರೀ ಚರ್ಚೆ ಹುಟ್ಟುಹಾಕಿತ್ತು.ನಟನ ಬೆನ್ನು, ಕುತ್ತಿಗೆಯ 6 ಭಾಗಗಳಲ್ಲಿ ಗಂಭೀರವಾಗಿ ಹಲ್ಲೆ ನಡೆದಿತ್ತು. ಈಗಾಗಲೇ ಪೊಲೀಸರು ಹಲ್ಲೆ ಆರೋಪಿಯನ್ನು ಬಂಧಿಸಿದ್ದಾರೆ.ಮಧ್ಯರಾತ್ರಿಯಲ್ಲಿ ಸೈಫ್ ಅಲಿಖಾನ್ ಮೇಲೆ ನಡೆದ ಹಲ್ಲೆ ಕುಟುಂಬಸ್ಥರಿಗೆ ಶಾಕ್ ತಂದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸೈಫ್ ಆಟೋ ಏರಿ ಲೀಲಾವತಿ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದರು. ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ನಟನನ್ನು ಪ್ರಾಣಪಾಯದಿಂದ ಪಾರು ಮಾಡಿದ್ದರು.

ಕಳ್ಳನಿಂದ ಗಾಯಗೊಂಡಾಗ ಮಗ ತೈಮೂರ್ ಆಡಿದ ಮಾತನ್ನು ಸೈಫ್ ನೆನಪಿಸಿಕೊಂಡಿದ್ದಾರೆ. “ದಾಳಿ ನಡೆದ ಬಳಿಕ ನನಗೆ ಬೆನ್ನಿನಲ್ಲಿ ತೀವ್ರವಾಗಿ ನೋವಾಗುತ್ತಿತ್ತು. ನೋಡಿದಾಗ ಚಾಕುವಿನಿಂದ ಇರಿದಿದ್ದು ಗೊತ್ತಾಗಿತ್ತು. ಅದನ್ನು ನೋಡಿ ಕರೀನಾ ಕಂಗಾಲಾಗಿದ್ದಳು. ಯಾರ್ಯಾರಿಗೋ ಕರೆ ಮಾಡಿದ್ದಳು, ಯಾರು ಕರೆ ಸ್ವೀಕರಿಸಲಿಲ್ಲ. ನಾನು ಏನು ಆಗಲ್ಲ ಎಂದು ಆಕೆಗೆ ಧೈರ್ಯ ತುಂಬಿದೆ. ಆಗ ತೈಮೂರ್ ಹತ್ತಿರ ಬಂದು “ಅಪ್ಪ ನೀನು ಸತ್ತು ಹೋಗ್ತೀಯಾ? ಎಂದು ಕೇಳಿದ್ದ. ನಾನು ಏನು ಆಗಲ್ಲ” ಎಂದು ಹೇಳಿದ್ದಾಗಿ ಸೈಫ್ ಹೇಳಿದ್ದಾರೆ.

ಅಂದಹಾಗೆ ರಾತ್ರಿ ಸೈಫ್ ಅಲಿಖಾನ್ ಮಗ ತೈಮೂರ್ ಜೊತೆ ಆಟೋ ಏರಿ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದರು. ಎಲ್ಲರನ್ನು ಬಿಟ್ಟು 8 ವರ್ಷದ ಮಗನನ್ನು ಯಾಕೆ ಕರೆದುಕೊಂಡು ಹೋದರು ಎನ್ನುವ ಪ್ರಶ್ನೆ ಎದ್ದಿತ್ತು. ಈ ಬಗ್ಗೆ ಸೈಫ್ ಪ್ರತಿಕ್ರಿಯಿಸಿದ್ದಾರೆ. “ಹಲ್ಲೆ ಬಳಿಕ ಮಗ ಕೂಲ್ ಆಗಿ ಆಲೋಚಿಸಿದ. ನಾನು ನಿಮ್ಮೊಟ್ಟಿಗೆ ಆಸ್ಪತ್ರೆಗೆ ಬರ್ತೀನಿ ಎಂದ. ನಾನು ಒಬ್ಬೊಂಟಿಯಾಗಿ ಹೋಗುವುದು ಬೇಡ ಎಂದು ತೈಮೂರ್‌ನ ಕರೆದೊಯ್ದೆ. ಒಂದು ವೇಳೆ ನನಗೇನಾದರೂ ಆದರೆ ಮಗ ಜೊತೆಗಿರಬೇಕು ಎಂದು ಬಯಸಿದ್ದೆ” ಎಂದಿದ್ದಾರೆ.

Share this post:

Translate »